ಮೋದಿಯನ್ನು ಅಭಿನಂದಿಸಿ ವಿವೇಕ್ ಅಗ್ನಿಹೋತ್ರಿ ಮಾಡಿದ ಟ್ವೀಟ್ ಚಿತ್ರಕ್ಕೆ ಕಾಂಗ್ರೆಸ್ ನಾಯಕಿಯ ಆಕ್ಷೇಪ; ಲೆಜೆಂಡ್ ಈಡಿಯಟ್ಸ್ ಎಂದ ಸಿನಿಮಾ ನಿರ್ದೇಶಕ
ವಿವೇಕ್ ಅಗ್ನಿಹೋತ್ರಿ ಅವರು ಪ್ರಧಾನಿ ಮೋದಿಯನ್ನು 'ತೋಳ' ಮತ್ತು ಬಿಜೆಪಿ ನಾಯಕರನ್ನು 'ತೋಳಗಳ ಸಮೂಹ' ಎಂದು ಬಣ್ಣಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದರು ಸುಪ್ರಿಯಾ. ಇದಕ್ಕೆ ಮರುತ್ತರ ನೀಡಿದ ವಿವೇಕ್ ಅಗ್ನಿಹೋತ್ರಿ, ಸುಪ್ರಿಯಾ ಅವರನ್ನು 'ಪಪ್ಪುವಿನ ಪಿಡಿ' ಎಂದು ಕರೆದಿದ್ದಾರೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾತೆ (Supriya Shrinate) ಮತ್ತು ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ (Vivek Agnihotri)ನಡುವೆ ಭಾನುವಾರ ಟ್ವೀಟ್ ಜಗಳ ನಡೆದಿದೆ. ಐತಿಹಾಸಿಕ ಗೆಲುವು ಸಾಧಿಸಿದ ಬಿಜೆಪಿಯನ್ನು ಮುನ್ನಡೆಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ (PM Modi) ಅಭಿನಂದನೆಗಳು. 2024ಕ್ಕೆ ನಿಮಗೆ ಶುಭ ಹಾರೈಕೆ ಎಂದ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಜತೆಗೆ ಹಿಮದಲ್ಲಿ ಓಡುತ್ತಿರುವ ತೋಳಗಳ ಫೋಟೊವನ್ನು ಹಾಕಿದ್ದರು. ವಿವೇಕ್ ಅವರ ಈ ಪೋಸ್ಟ್ ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ, ಇದು ಪ್ರಧಾನಿ ಮೋದಿಯವರಿಗೆ ಮಾಡಿದ ಅವಹೇಳನ ಎಂದಿದ್ದಾರೆ. ಓ ದೇವರೇ! ಪ್ರಧಾನಿಯನ್ನು ತೋಳ, ಬಿಜೆಪಿಯನ್ನು ತೋಳಗಳ ಸಮೂಹ ಎಂದು ಕರೆಯಲು ನಿಮಗೆ ನಾಚಿಕೆಯಾಗುವುದಿಲ್ಲವೇ? ನಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ, ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಸುಪ್ರಿಯಾ ಪ್ರತಿಕ್ರಿಸಿದ್ದಾರೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ಸುಪ್ರಿಯಾ ಅವರನ್ನು ‘ಲೆಜೆಂಡ್ ಈಡಿಯಟ್ಸ್’ ಎಂದು ಕರೆದಿದ್ದಾರೆ. ಡಿಸೆಂಬರ್ 10 ರಂದು, 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ ವಿವೇಕ್ ಅಗ್ನಿಹೋತ್ರಿ ಮೋದಿಯವರನ್ನು ಅಭಿನಂದಿಸಿದ ಟ್ವೀಟ್ ನಲ್ಲಿ, ಅವರು ದಟ್ಟವಾದ ಹಿಮದಲ್ಲಿ ತೋಳವೊಂದು ಮುನ್ನಡೆಸುತ್ತಿರುವ ಫೋಟೋವನ್ನು ಬಳಸಿದ್ದಾರೆ. “ನಾಯಕ ಮಾರ್ಗವನ್ನು ರಚಿಸಲು ಎಷ್ಟು ಶ್ರಮಿಸುತ್ತಾನೆ ಎಂದು ಅನುಯಾಯಿಗಳಿಗೆ ಎಂದಿಗೂ ತಿಳಿದಿರುವುದಿಲ್ಲ” ಎಂದು ಈ ಫೋಟೊದಲ್ಲಿ ಬರೆಲಾಗಿದೆ.
एक होते हैं मूर्ख।एक होते हैं महामूर्ख। पर इन सब के ऊपर होते हैं पप्पू के PiDi। #LegendIdiots https://t.co/hKY6Ut61qI
ಇದನ್ನೂ ಓದಿ— Vivek Ranjan Agnihotri (@vivekagnihotri) December 11, 2022
ವಿವೇಕ್ ಅಗ್ನಿಹೋತ್ರಿ ಅವರು ಪ್ರಧಾನಿ ಮೋದಿಯನ್ನು ‘ತೋಳ’ ಮತ್ತು ಬಿಜೆಪಿ ನಾಯಕರನ್ನು ‘ತೋಳಗಳ ಸಮೂಹ’ ಎಂದು ಬಣ್ಣಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದರು ಸುಪ್ರಿಯಾ. ಇದಕ್ಕೆ ಮರುತ್ತರ ನೀಡಿದ ವಿವೇಕ್ ಅಗ್ನಿಹೋತ್ರಿ, ಸುಪ್ರಿಯಾ ಅವರನ್ನು ‘ಪಪ್ಪುವಿನ ಪಿಡಿ’ ಎಂದು ಕರೆದಿದ್ದಾರೆ. ಮೂರ್ಖರು ಇದ್ದಾರೆ, ಸಂಪೂರ್ಣ ಮೂರ್ಖರು ಇದ್ದಾರೆ. ಮತ್ತೊಂದು ಪಪ್ಪುವಿನ ಪಿಡಿ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುದ್ದಿನ ನಾಯಿ ಹೆಸರು ಪಿಡಿ. ಅದನ್ನೇ ವಿವೇಕ್ ಅಗ್ನಿಹೋತ್ರಿ ಇಲ್ಲಿ ಉಲ್ಲೇಖಿಸಿದ್ದಾರೆ.
ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಜಾಮೀನು ನೀಡಿದ್ದಕ್ಕಾಗಿ ನ್ಯಾಯಮೂರ್ತಿ ಎಸ್ ಮುರಳಿಹರ್ ಅವರ 2018 ರ ಟ್ವೀಟ್‌ಗಳಿಗಾಗಿ ಕಾಶ್ಮೀರ ಫೈಲ್ಸ್ ನಿರ್ದೇಶಕರು ದೆಹಲಿ ಹೈಕೋರ್ಟ್‌ಗೆ ಲಿಖಿತ ಕ್ಷಮೆಯಾಚಿಸಿದ ನಂತರ ಸುಪ್ರಿಯಾ ಅವರು ವಿವೇಕ್ ಅಗ್ನಿಹೋತ್ರಿ ಅವರನ್ನು ‘ನಗರದಲ್ಲಿ ಹೊಸ ಮಾಫಿವೀರ್’ ಎಂದು ಕರೆದಿದ್ದರು.ವಿವೇಕ್ ಅಗ್ನಿಹೋತ್ರಿ ಮತ್ತು ಅವರ ಕಾಶ್ಮೀರ ಫೈಲ್ಸ್ ಇತ್ತೀಚಿನ ವಿವಾದದ ಕೇಂದ್ರಬಿಂದುವಾಗಿದ್ದು, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಚಲನಚಿತ್ರವನ್ನು ಅಸಭ್ಯ ಮತ್ತು ಪ್ರಚಾರ ಎಂದು ಟೀಕೆ ಮಾಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Sun, 11 December 22