AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ, ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ ಎಂದು ಪ್ರಶ್ನಿಸಿ ಕಾಂಗ್ರೆಸ್​ ಕಿಡಿ

ರೌಡಿಶೀಟರ್​ಗಳಲ್ಲಿ ಹೆಸರಿಸಲಾಗಿದ್ದ ಹಲವರು ಬಿಜೆಪಿ ಸೇರ್ಪಡೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ  ವಿರುದ್ಧ ಕಾಂಗ್ರೆಸ್​ ಮತ್ತೆ ಕಿಡಿಕಾರಿದ್ದು, ಸರಣಿ ಟ್ವೀಟ್​ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ.

ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ, ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ ಎಂದು ಪ್ರಶ್ನಿಸಿ ಕಾಂಗ್ರೆಸ್​ ಕಿಡಿ
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 11, 2022 | 3:35 PM

Share

ಬೆಂಗಳೂರು: ರೌಡಿಶೀಟರ್​ (Rowdysheeter)ಗಳಲ್ಲಿ ಹೆಸರಿಸಲಾಗಿದ್ದ ಹಲವರು ಬಿಜೆಪಿ (bjp) ಸೇರ್ಪಡೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ  ವಿರುದ್ಧ ಕಾಂಗ್ರೆಸ್​ ಮತ್ತೆ ಕಿಡಿಕಾರಿದ್ದು, ಸರಣಿ ಟ್ವೀಟ್​ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ. ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದೆ. ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌಡಿಯಾಗಿದ್ದೆ, ನಾನೂ ಗೂಂಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ. ಸಚಿವ ಶ್ರೀರಾಮುಲು ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದರು ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಲೀಳಕುಮಾರ ಕಟೀಲ್​ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದವರು ಬೆತ್ತನಗೆರೆ ಶಂಕರನನ್ನು ಸೇರಿಸಿಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈಗ ನೀವು ಹೇಳಿದ್ದು ಸುಳ್ಳು ಎಂಬುದನ್ನು ಒಪ್ಪುತ್ತೀರಾ? ತಪ್ಪಾಗಿದೆ ಎಂದಾದರೆ ಏಕೆ ಇನ್ನೂ ಪಕ್ಷದಿಂದ ಹೊರಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸ್​ ದಾಳಿ ವೇಳೆ ತಲೆಮರಿಸಿಕೊಂಡಿದ್ದ ರೌಡಿಶೀಟರ್​ ನಾಗ ಸಚಿವ ವಿ ಸೋಮಣ್ಣ ಮನೆಗೆ ಎಂಟ್ರಿ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಗದ್ದುಗೆಗಾಗಿ ನಾನಾ ತಂತ್ರಗಳು ಮೂರು ಪಕ್ಷಗಳಿಂದಲೂ ಶುರುವಾಗಿವೆ. ಇದರ ಮಧ್ಯೆ ರೌಡಿ ರಾಜಕೀಯ ಕೂಡ ಶುರುವಾಗಿದೆ. ಈಗಾಗಲೇ ಫೈಟರ್ ರವಿ ಕೇಸರಿ ಬಾವುಟ ಹಿಡಿದಾಗಿದೆ. ಬೆತ್ತನಗೆರೆ ಶಂಕರ ಕಮಲ ನಾಯಕರ ಬೆನ್ನ ಹಿಂದೆಯೇ ಓಡಾಡಿಕೊಂಡಿದ್ದಾನೆ. ಸೈಲೆಂಟ್ ಸುನೀಲ್ ಕೇಸರಿ ಶಾಲು ಹೊದ್ದು ಆಗಿದೆ. ಆದ್ರೆ ಇನ್ನೇನು ಬಾವುಟ ಹಿಡಿಯೋದು ಮಾತ್ರ ಸದ್ಯಕ್ಕೆ ಮಿಸ್ ಆಗಿದೆ. ಇದರ ಮಧ್ಯೆ ಇದೀಗ ಬಿಜೆಪಿ ಮತ್ತೋರ್ವ ರೌಡಿಶೀಟರ್​ಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ.

ನಾನು ಗೂಂಡಾಗಿರಿ ಮಾಡುತ್ತಿದ್ದೆ, ಕಾಪಿ ಹೊಡೆಯುವುದ್ರಲ್ಲಿ ಪಿಎಚ್​ಡಿ ಮಾಡಿದ್ದೇನೆ: ಶ್ರೀರಾಮುಲು 

ಬಳ್ಳಾರಿ: ವಿದ್ಯಾರ್ಥಿಯಾಗಿದ್ದಾಗ ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಹೆಚ್​ಡಿ ಮಾಡಿದ್ದೇನೆ. ನಾನು ಗೂಂಡಾಗಿರಿ ಮಾಡುತ್ತಿದ್ದೆ, ಬಹಳ ಜಗಳವಾಡುತ್ತಿದ್ದೆ ಎಂದು ತಮ್ಮ ಶಾಲಾ ಕಾಲೇಜು ದಿನಗಳನ್ನು ಸಚಿವ ಬಿ. ಶ್ರೀರಾಮುಲು (Sriramulu) ನೆನಪು ಮಾಡಿಕೊಂಡರು. ಜಿಲ್ಲೆಯ ಎಸ್.ಜಿ.ಕಾಲೇಜು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನನಗೆ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಬಾರಿ ಬುದ್ಧಿವಂತನಲ್ಲ, ಲಾಸ್ಟ್​ ಬೆಂಚ್ ಸ್ಟೂಡೆಂಟ್​. ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ದರು.

ಇದನ್ನೂ ಓದಿ: ನನಗೂ ರೌಡಿ ಶೀಟರ್ ನಾಗನಿಗೂ ಯಾವುದೇ ಸಂಬಂಧವಿಲ್ಲ; ಪೊಲೀಸ್​ ಆಯುಕ್ತರಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪತ್ರ

5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ. ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದ ಸಂಘ. ಶಿಕ್ಷಕರು ಬಂದಾಗ ಲಾಸ್ಟ್​ ಬೆಂಚ್​ನಲ್ಲಿ ಕುಳಿತು ಅಂಗಿಸುತ್ತಿದ್ದೆವು. ಕನ್ನಡ ಬರಲ್ಲ, ತೆಲುಗು ಬರಲ್ಲ, ಇಂಗ್ಲಿಷ್ ಬರಲ್ಲ ಎಂದು ಹೇಳುತ್ತಿದ್ದರು. ನೀನು ಯಾವ ಶಾಲೆಯಲ್ಲಿ ಕಲಿತಿದ್ದೆ ಎಂದು ಶಿಕ್ಷಕರು ಕೇಳುತ್ತಿದ್ದರು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:34 pm, Sun, 11 December 22