ಜನಾರ್ಧನ ರೆಡ್ಡಿಯನ್ನು ಬಿಜೆಪಿಗೆ ವಾಪಸ್ಸು ತರಲು ಎಲ್ಲ ಪ್ರಯತ್ನ ಮಾಡಿರುವೆ, ವರಿಷ್ಠರಿಂದ ಹಸಿರು ಸಿಗ್ನಲ್ ಸಿಗುತ್ತಿಲ್ಲ: ಶ್ರೀರಾಮುಲು

ಜನಾರ್ಧನ ರೆಡ್ಡಿಯನ್ನು ಬಿಜೆಪಿಗೆ ವಾಪಸ್ಸು ತರಲು ಎಲ್ಲ ಪ್ರಯತ್ನ ಮಾಡಿರುವೆ, ವರಿಷ್ಠರಿಂದ ಹಸಿರು ಸಿಗ್ನಲ್ ಸಿಗುತ್ತಿಲ್ಲ: ಶ್ರೀರಾಮುಲು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 05, 2022 | 1:22 PM

ಭ್ರಮನಿರಸನಗೊಡಿರುವ ರೆಡ್ಡಿ ತಮ್ಮ ನೆಲೆಯನ್ನೇ ಗಂಗಾವತಿಗೆ ಸ್ಥಳಾಂತರಿಸಿ ಹೊಸ ರಾಜಕೀಯ ಪಕ್ಷ ಕಟ್ಟುವ ನಿಲುವು ತಳೆದಿರುವಂತಿದೆ.

ಬಳ್ಳಾರಿ:  ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಮತ್ತು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ (G Janardhan Reddy) ಅವರು ನಡುವೆ ವೈಮಸ್ಸು ಏರ್ಪಟ್ಟಿರುವುದು ನಿಜ ಅನ್ನೋದು ಅವರಿಬ್ಬರ ಹೇಳಿಕೆಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಅವರಿಬ್ಬರ ನಡುವೆ ಗಳಸ್ಯ ಕಂಠಸ್ಯ ಸ್ನೇಹವಿತ್ತು ಕೇವಲ ಅವರಿಬ್ಬರ ನಡುವೆ ಮಾತ್ರ ಕುಟುಂಬಗಳ ನಡುವೆಯೂ ಜನ ಈರ್ಷ್ಯೆ (jealous) ಪಡುವಂಥ ಒಡನಾಟವಿತ್ತು. ಇತ್ತೀಚಿಗೆ ನಡೆದ ಜನಾರ್ಧನ ರೆಡ್ಡಿಯವರ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ರಾಮಲು ಗೈರಾಗಿದ್ದಾಗಲೇ ವಿರಸದ ಅನುಮಾನ ಮೂಡಿದ್ದು ನಿಜ. ರೆಡ್ಡಿ ಬಿಜೆಪಿಗೆ ವಾಪಸ್ಸಾಗಲು ಹಾತೊರೆಯುತ್ತಿದ್ದಾರೆ ಮತ್ತು ಅವರ ಆಸೆ ಈಡೇರುವಂತಾಗಲು ಶ್ರೀರಾಮುಲು ಪಕ್ಷದ ವರಿಷ್ಠರ ಜೊತೆ ಮಾತಾಡುತ್ತಲೇ ಇದ್ದರು. ಆದರೆ ಮೇಲಿಂದ ಗ್ರೀನ್ ಸಿಗ್ನಲ್ ಸಿಗಲಿಲ್ಲ.

ಈ ವಿಡಿಯೋದಲ್ಲಿ ರಾಮುಲು ಅದನ್ನೇ ಹೇಳುತ್ತಿದ್ದಾರೆ. ಪಕ್ಷದ ಧೋರಣೆಯಿಂದ ರೆಡ್ಡಿ ಬೇಸತ್ತಿರುವುದಂತೂ ಸತ್ಯ. ಆದರೆ ಅವರಲ್ಲಿರುವ ಬೇಗುದಿ ಮತ್ತು ಅಸಮಾಧಾನವೆಂದರೆ, ಶ್ರೀರಾಮುಲು ಸಾಕಷ್ಟು ಪ್ರಯತ್ನ ನಡೆಸಿಲ್ಲ ಅನ್ನೋದು. ಭ್ರಮನಿರಸನಗೊಡಿರುವ ರೆಡ್ಡಿ ತಮ್ಮ ನೆಲೆಯನ್ನೇ ಗಂಗಾವತಿಗೆ ಸ್ಥಳಾಂತರಿಸಿ ಹೊಸ ರಾಜಕೀಯ ಪಕ್ಷ ಕಟ್ಟುವ ನಿಲುವು ತಳೆದಿರುವಂತಿದೆ. ಗಮನಾರ್ಹ ಸಂಗತಿಯೆಂದರೆ ಅವರಿಬ್ಬರೂ ತಮ್ಮ ನಡುವೆ ವೈಮಸ್ಸೇನೂ ಇಲ್ಲ ಅಂತ ಹೇಳುತ್ತಿರುವುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ