ಭಾರತಕ್ಕೆ G20 ಅಧ್ಯಕ್ಷ ಗಾದಿ; ಲಾಂಛನ, ಥೀಮ್, ವೆಬ್​​ಸೈಟ್ ಅನಾವರಣ ಮಾಡಿದ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 08, 2022 | 8:03 PM

ಲೋಗೋದಲ್ಲಿರುವ ಕಮಲದ ಏಳು ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಇದು 'ವಸುಧೈವ ಕುಟುಂಬಕಂ' ಅಥವಾ 'ಒಂದು ಭೂಮಿ, ಒಂದು...

ಭಾರತಕ್ಕೆ G20 ಅಧ್ಯಕ್ಷ ಗಾದಿ; ಲಾಂಛನ, ಥೀಮ್, ವೆಬ್​​ಸೈಟ್ ಅನಾವರಣ ಮಾಡಿದ ಮೋದಿ
ನರೇಂದ್ರ ಮೋದಿ
Follow us on

ದೆಹಲಿ: ಕಮಲದ ಹೂವಿನ ಮೇಲೆ ಭೂಮಿ ಇರುವಂತೆ ಕಾಣುವ ಭಾರತದ G20 ಅಧ್ಯಕ್ಷ ಸ್ಥಾನದ ಲೋಗೋವನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಆರು ಭಾರತೀಯ ಭಾಷೆಗಳಲ್ಲಿ ಸ್ವಾಗತ ಕೋರಿದ್ದಾರೆ. ಇಂದು G20 ಅಧ್ಯಕ್ಷತೆಯ(G20 presidency) ಲಾಂಛನ, ಥೀಮ್ ಮತ್ತು ವೆಬ್​​ಸೈಟ್​​ನ್ನು ಮೋದಿ ಅನಾವರಣಗೊಳಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ, ಜ್ಞಾನ ಮತ್ತು ಸಮೃದ್ಧಿಯ ದೇವತೆಗಳು ಕಮಲದ ಮೇಲೆ ಕುಳಿತಿದ್ದಾರೆ ಎಂದು ಮೋದಿ ಹಿಂದೂ ದೇವತೆಗಳಾದ ಸರಸ್ವತಿ ಮತ್ತು ಲಕ್ಷ್ಮಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.   ಲೋಗೋದಲ್ಲಿರುವ ಕಮಲದ ಏಳು ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಇದು ‘ವಸುಧೈವ ಕುಟುಂಬಕಂ’ ಅಥವಾ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ವಿಷಯದೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ ಮೋದಿ.  ಭಾರತವು ಡಿಸೆಂಬರ್ 1 ರಂದು ಪ್ರಸ್ತುತ ಅಧ್ಯಕ್ಷ ಇಂಡೋನೇಷ್ಯಾದಿಂದ ಗುಂಪಿನ ಅಧ್ಯಕ್ಷತೆಯನ್ನು ವಹಿಸುತ್ತದೆ. ಮುಂದಿನ ವರ್ಷ ಶೃಂಗಸಭೆಯನ್ನು ಭಾರತ ಆಯೋಜಿಸಲಿದೆ.

“ಈ ಕಾರ್ಯಕ್ರಮಗಳು ದೆಹಲಿ ಅಥವಾ ಕೆಲವು ನಗರಗಳಿಗೆ ಸೀಮಿತವಾಗಿಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ಪ್ರಧಾನಿ ಮೋದಿ ಹೇಳಿದರು. “ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಸ್ಕೃತಿ ಮತ್ತು ಸೌಂದರ್ಯವನ್ನು ಹೊಂದಿದೆ ಎಂದು ಹೇಳಿದ ಮೋದಿ, “ಪಧಾರೋ ಮ್ಹಾರೆ ದೇಸ್” ಎಂದು ರಾಜಸ್ಥಾನಿ ಭಾಷೆಯಲ್ಲಿ ಹೇಳಿದ್ದಾರೆ.

ಗುಜರಾತ್‌ನ ಪ್ರೀತಿಯ ಸ್ವಾಗತವಾದ ‘ತಮರು ಸ್ವಾಗತ್ ಛೆ’ ಕೇರಳದಲ್ಲಿ ಮಲಯಾಳಂ ಭಾಷೆಯಲ್ಲಿ ಹೇಳುವಾಗ ಎಲ್ಲಾವರ್ಕ್ಕುಂ ಸ್ವಾಗತಮ್ ಎಂದಾಗುತ್ತದೆ. ಮಧ್ಯಪ್ರದೇಶದಲ್ಲಿ ಇದು, ‘ಆಪ್ ಕಾ ಸ್ವಾಗತ್ ಹೈ’ ಎಂದು ಅವರು ಹೇಳಿದ್ದಾರೆ. ತದ ನಂತರ ತಮಿಳು, ಬಂಗಾಳಿಯಲ್ಲೂ ಇದನ್ನೇ ಅವರು  ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಹಿಮಾಚಲ “ಎಲ್ಲಾ ಋತುಗಳಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ” ಎಂದು ಹೇಳಿದ ಮೋದಿ ಉತ್ತರಾಖಂಡ ಸ್ವರ್ಗವಾಗಿದೆ ಎಂದು ಹೇಳಿದರು.

“ಈ ವೈವಿಧ್ಯತೆಯು ಜಗತ್ತನ್ನು ವಿಸ್ಮಯಗೊಳಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ