ಗುಜರಾತಿನ ಭೀಕರ ನೀರಿನ ಬರವನ್ನು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಯಶಸ್ವೀಯಾಗಿ ನಿರ್ವಹಿಸಿದ ಅನಿಮೇಷನ್ ವಿಡಿಯೋ ಶೇರ್ ಮಾಡಿದ ಅಮಿತ್ ಶಾ
ವಿಡಿಯೋ 2001 ಆರಂಭಿಸಿ 2022 ವರೆಗೆ ನಿಮ್ಮನ್ನುಕೊಂಡೊಯ್ಯುತ್ತದೆ. ಆಗ ನೀರಿನ ಬರ ಹೇಗಿತ್ತು, ನಂತರ ‘ಘರ್ ಘರ್ ಪಾನಿಯ’ ಉದ್ದೇಶವನ್ನಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹೇಗೆ ರಾಜ್ಯ ಯಾವತ್ತೂ ನೀರಿನ ಬರ ಎದುರಿಸದಂಥ ಸ್ಥಿತಿ ನಿರ್ಮಿಸಲಾಗಿದೆ ಅನ್ನೋದನ್ನು ವಿಡಿಯೋ ವಿವರಿಸುತ್ತದೆ.
ಗುಜರಾತನಲ್ಲಿ ಈ ವರ್ಷ ವಿಧಾನ ಸಭಾ ಚುನಾವಣಾ (Assembly polls) ನಡೆಯಲಿದೆ. ಎಲ್ಲ ಪ್ರಮುಖ ಪಕ್ಷಗಳು ಪ್ರಚಾರವನ್ನು ಶುರುವಿಟ್ಟುಕೊಂಡಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಇಬ್ಬರೂ ಗುಜರಾತ್ ನವರು, ಹಾಗಾಗಿ ಅವರಿಗೆ ತವರು ರಾಜ್ಯದ ಚುನಾವಣೆ ಪ್ರತಿಷ್ಠೆಯ ಸಂಗತಿಯಾಗಿದೆ. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದಾಗ ಅಲ್ಲಿನ ನೀರಿನ ಸಮಸ್ಯೆ ಹೇಗಿತ್ತು ಅದನ್ನು ಅವರು ಹೇಗೆ ಯಶಸ್ವೀಯಾಗಿ ನಿರ್ವಹಿದರು ಅನ್ನೋದನ್ನು ನಿದರ್ಶಿಸುವ ಒಂದು ಅನಿಮೇಷನ್ ವಿಡಿಯೋವನ್ನು ಅಮಿತ್ ಶಾ ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ 2001 ಆರಂಭಿಸಿ 2022 ವರೆಗೆ ನಿಮ್ಮನ್ನುಕೊಂಡೊಯ್ಯುತ್ತದೆ. ಆಗ ನೀರಿನ ಬರ ಹೇಗಿತ್ತು, ನಂತರ ‘ಘರ್ ಘರ್ ಪಾನಿಯ’ ಉದ್ದೇಶವನ್ನಿಟ್ಟುಕೊಂಡು ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹೇಗೆ ರಾಜ್ಯ ಯಾವತ್ತೂ ನೀರಿನ ಬರ ಎದುರಿಸದಂಥ ಸ್ಥಿತಿ ನಿರ್ಮಿಸಲಾಗಿದೆ ಅನ್ನೋದನ್ನು ವಿಡಿಯೋ ವಿವರಿಸುತ್ತದೆ.
21 वर्ष पहले पानी की बूँद-बूँद को तरसते गुजरात के हर घर को आज नल से जल मिल रहा है।
गुजरात से जल संकट दूर करने की मोदी जी की दूरदर्शिता और परिश्रम को दर्शाती इस वीडियो को हर देशवासी व विशेषकर गुजरात की युवा पीढ़ी को अवश्य देखना चाहिए। pic.twitter.com/BV4uc7dkhk
— Amit Shah (@AmitShah) November 8, 2022
ಗುಜರಾತ ರಾಜ್ಯದ ಭೂವಿನ್ಯಾಸದಲ್ಲಿನ ವ್ಯತ್ಯಯಗಳು ಮತ್ತು ವಾರ್ಷಿಕ ಮಳೆಯ ಪ್ರಮಾಣದಲ್ಲಿ ಸಾಕಷ್ಟು ಭಿನ್ನತೆಗಳಿವೆ. ಕಲ್ಲಿನಿಂದಾವೃತ ಭೂಪ್ರದೇಶ ಮತ್ತು ಕರಾವಳಿ ಪ್ರದೇಶದಿಂದಾಗಿ ರಾಜ್ಯದ ನಾಲ್ಕನೇ ಮೂರರಷ್ಟು ಭಾಗದ ಅಂತರ್ಜಲ ಬಳಕೆಗೆ ಯೋಗ್ಯವಲ್ಲ. ಇದಲ್ಲದೆ, ಮೇಲ್ಮೈ ನೀರಿನ ಪೂರೈಕೆಯು ಸೀಮಿತವಾಗಿರುವುದರಿಂದ ರಾಜ್ಯದ ಇತಿಹಾಸದಲ್ಲಿ ಬರಗಾಲ ಒಂದು ಪ್ರಮುಖ ಭಾಗವಾಗಿದೆ.
ಗುಜರಾತಿನಲ್ಲಿ ಪ್ರತಿ ವರ್ಷ ಸುರಿಯುವ ಮಳೆಯನ್ನು ನಿರ್ದಿಷ್ಟವಾದ ಚೌಕಟ್ಟಿನಲ್ಲಿ ವಿವರಿಸಲಾಗದು. ಯಾಕೆಂದರೆ ಇಲ್ಲಿ ಸುರಿಯುವ ಮಳೆಯು ಅನಿಯಮಿತವಾಗಿದೆ ಮತ್ತು ಅಸಮತೋಲನದಿದ ಕೂಡಿದೆ. ಹಾಗಾಗೇ, ರಾಜ್ಯದಲ್ಲಿ ನೀರಿನ ಹಂಚಿಕೆ ಸಮವಾಗಿಲ್ಲ. ದೇಶದ ಜನಸಂಖ್ಯೆ ಶೇಕಡ 5 ರಷ್ಟನ್ನು ಹೊಂದಿರುವ ಗುಜರಾತ ನೀರಿನ ಸಂಪನ್ಮೂಲಗಳ ವಿಷಯಕ್ಕೆ ಬಂದರೆ ಶೇಕಡ 2 ರಷ್ಟನ್ನು ಮಾತ್ರ ಹೊಂದಿದೆ.
ರಾಜ್ಯದಲ್ಲಿ ಒಟ್ಟು ನೀರಿನ ಲಭ್ಯತೆ 50 ಬಿಸಿಎಮ್ (ಬಿಲಿಯನ್ ಕ್ಯೂಬಿಕ್ ಮೀಟರ್) ಆಗಿದ್ದು, ಇದರಲ್ಲಿ ಮೇಲ್ಮೈಯಿಂದ ಹರಿದು ಹೋಗುವ ನೀರು 38 ಬಿಸಿಎಮ್ ಮತ್ತು ಉಳಿದ 12 ಬಿಸಿಎಮ್ ಅಂತರ್ಜಲವಾಗಿ ಭೂಗರ್ಭ ಸೇರುತ್ತದೆ. 38 ಬಿಸಿಎಮ್ ಮೇಲ್ಮೈ ನೀರಿನಲ್ಲಿ, 80% ಕ್ಕಿಂತ ಹೆಚ್ಚು ನೀರಾವರಿ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವುದರಿಂದ, ಕುಡಿಯುವ ಮತ್ತು ಕೈಗಾರಿಕಾ ಬಳಕೆಗಳಿಗೆ ಸೀಮಿತ ಪ್ರಮಾಣದಲ್ಲಿ ನೀರು ಲಭ್ಯವಿದೆ. ಹಾಗಾಗಿ, ಈ ಉದ್ದೇಶಗಳಿಗೆ ಅಂತರ್ಜಲ ಮೇಲೆ ಅವಲಂಬನೆಗೊಳ್ಳದೆ ಬೇರೆ ವಿಧಿಯಿರಲಿಲ್ಲ.
ನೀರಿಗೆ ಸಂಬಂಧಿಸಿದಂತೆ ಗುಜರಾತ್ ಎದುರಿಸುತ್ತಿದ್ದ ಇಂಥ ಅನೇಕ ಸಮಸ್ಯೆಗಳಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಕಂಡುಕೊಂಡ ಪರಿಹಾರವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
Published On - 2:51 pm, Tue, 8 November 22