AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheetahs: ಕುನೊ ಉದ್ಯಾನವನದಲ್ಲಿ ಮೊದಲ ಬಾರಿ ಚಿತಾಲ್ ಜಿಂಕೆ ಬೇಟೆಯಾಡಿದ ಚೀತಾಗಳು

ಎರಡು ಗಂಡು ಚಿರತೆಗಳಾದ 'ಫ್ರೆಡ್ಡಿ' ಮತ್ತು 'ಎಲ್ಟನ್' ಅನ್ನು ನವೆಂಬರ್ 5 ರ ಸಂಜೆ ಕ್ವಾರಂಟೈನ್‌ನಿಂದ ದೊಡ್ಡ ಆವರಣಕ್ಕೆ ಈ ಚೀತಾಗಳನ್ನು ಬಿಡಲಾಗಿದೆ. ಇದರ ಬೇಟೆಗಾಗಿ ಮಚ್ಚೆಯುಳ್ಳ ಜಿಂಕೆ ತರಲಾಗಿದೆ.

Cheetahs: ಕುನೊ ಉದ್ಯಾನವನದಲ್ಲಿ ಮೊದಲ ಬಾರಿ ಚಿತಾಲ್ ಜಿಂಕೆ ಬೇಟೆಯಾಡಿದ ಚೀತಾಗಳು
Cheetahs
TV9 Web
| Edited By: |

Updated on:Nov 08, 2022 | 2:00 PM

Share

ಕುನೋ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ತರಲಾಗಿದ್ದ ಎರಡು ಚೀತಾಗಳು 51 ದಿನಗಳ ನಂತರ ಚಿತಾಲ್ ಜಿಂಕೆ  ಬೇಟೆಯಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 51 ದಿನಗಳ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದೊಳಗೆ ನವೆಂಬರ್ 6ರ ಮಧ್ಯರಾತ್ರಿಯಲ್ಲಿ ಆಫ್ರಿಕಾದ ಎರಡು ಚೀತಾಗಳು ತಮ್ಮ ಮೊದಲ ಬೇಟೆಯನ್ನು ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ಎರಡು ಗಂಡು ಚಿರತೆಗಳಾದ ‘ಫ್ರೆಡ್ಡಿ’ ಮತ್ತು ‘ಎಲ್ಟನ್’ ಅನ್ನು ನವೆಂಬರ್ 5 ರ ಸಂಜೆ ಕ್ವಾರಂಟೈನ್‌ನಿಂದ ದೊಡ್ಡ ಆವರಣಕ್ಕೆ ಈ ಚೀತಾಗಳನ್ನು ಬಿಡಲಾಗಿದೆ. ಇದರ ಬೇಟೆಗಾಗಿ ಮಚ್ಚೆಯುಳ್ಳ ಜಿಂಕೆ ತರಲಾಗಿದೆ. ಕುನೋದಲ್ಲಿ ಚೀತಾಗಳನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿ ಮೈಲಿಗಲ್ಲು ಮಹತ್ವದ್ದಾಗಿದೆ. ಚೀತಾಗಳು ಈ ಮೊದಲು ಮಚ್ಚೆಯುಳ್ಳ ಜಿಂಕೆಯನ್ನು ಕಂಡಿಲ್ಲ, ಇದು ಈ ಜಿಂಕೆಗಳಿಗೆ ಮೊದಲ ಅನುಭವ ಮತ್ತು ಹೊಸ ಆಹಾರವಾಗಿದೆ.

ಚೀತಾಗಳನ್ನು ಬಿಡಲಾದ ಆವರಣವು ಚೀಟಲ್, ನೀಲಿ ಬುಲ್, ನಾಲ್ಕು ಕೊಂಬಿನ ಹುಲ್ಲೆ, ಕಾಡುಹಂದಿ ಮತ್ತು ಭಾರತೀಯ ಗಸೆಲ್ ಬೇಟೆಯ ಪ್ರಮುಖ ಆಹಾರಗಳು. ಇದನ್ನು ಮತ್ತೆ ವಿಸ್ತರಿಸಬಹುದು ಎಂದು ಮಧ್ಯಪ್ರದೇಶದ ಮುಖ್ಯ ವನ್ಯಜೀವಿ ವಾರ್ಡನ್ ಜೆಎಸ್ ಚೌಹಾಣ್ ಹೇಳಿದರು. ಚೀತಾಗಳು ನವೆಂಬರ್ 5 ರಂದು ಬೇಟೆ ಮಾಡಲು ಈ ಚೀತಾಗಳನ್ನು ಹೊರಗೆ ಬಿಟ್ಟಿದ್ದಾರೆ. ಅದು ವಿಫಲವಾಯಿತು, ಆದರೆ ನವೆಂಬರ್ 6-7 ರ ಮಧ್ಯರಾತ್ರಿಯಲ್ಲಿ ಚೀತಾ ಬೇಟೆಯಾಡಿದೆ.

ಇದನ್ನು ಓದಿ: Cheetahs Task force: ಚೀತಾಗಳ ಮೇಲ್ವಿಚಾರಣೆ ಮಾಡಲು ಕಾರ್ಯಪಡೆ ರಚನೆ, ಚೀತಾಗಳನ್ನು ನೀವು ಯಾವಾಗ ನೋಡಬಹುದು?

ಐದು ಹೆಣ್ಣು ಮತ್ತು ಮೂರು ಗಂಡು ನಮೀಬಿಯಾದಿಂದ ಚೀತಾಗಳನ್ನು ತರಲಾಗಿದೆ. ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ತಜ್ಞರು ರೂಪಿಸಿದ ಪ್ರೋಟೋಕಾಲ್ ಪ್ರಕಾರ, ಚಿರತೆಗಳನ್ನು ಮೊದಲು ಒಂದು ತಿಂಗಳ ಕಾಲ ಕ್ವಾರಂಟೈನ್ ಆವರಣದಲ್ಲಿ ಇರಿಸಲಾಯಿತು. ಈ ಕಾರಣಕ್ಕೆ ಅವುಗಳಿಗೆ ಎಮ್ಮೆ ಮಾಂಸವನ್ನು ನೀಡಲಾಗುತ್ತಿತ್ತು.

Published On - 2:00 pm, Tue, 8 November 22

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು