Cheetahs Task force: ಚೀತಾಗಳ ಮೇಲ್ವಿಚಾರಣೆ ಮಾಡಲು ಕಾರ್ಯಪಡೆ ರಚನೆ, ಚೀತಾಗಳನ್ನು ನೀವು ಯಾವಾಗ ನೋಡಬಹುದು?

ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚಿರತೆಗಳನ್ನು ನೋಡಿಕೊಳ್ಳಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಒಂಬತ್ತು ಸದಸ್ಯರ ಕಾರ್ಯಪಡೆಯನ್ನು ರಚಿಸಿದೆ.

Cheetahs Task force: ಚೀತಾಗಳ ಮೇಲ್ವಿಚಾರಣೆ ಮಾಡಲು ಕಾರ್ಯಪಡೆ ರಚನೆ, ಚೀತಾಗಳನ್ನು ನೀವು ಯಾವಾಗ ನೋಡಬಹುದು?
Cheetahs
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 08, 2022 | 11:50 AM

ಮಧ್ಯಪ್ರದೇಶ: ಸೆಪ್ಟೆಂಬರ್‌ನಲ್ಲಿ ನಂಬಿಯಾದಿಂದ (Nambia )ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚಿರತೆಗಳನ್ನು ನೋಡಿಕೊಳ್ಳಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಒಂಬತ್ತು ಸದಸ್ಯರ ಕಾರ್ಯಪಡೆಯನ್ನು ರಚಿಸಿದೆ. ವರದಿಗಳ ಪ್ರಕಾರ, ಕಾರ್ಯಪಡೆಯು ಎಲ್ಲಾ ಚೀತಾಗಳ (cheetahs) ಆರೋಗ್ಯವನ್ನು ನೋಡಿಕೊಳ್ಳುತ್ತದೆ ಮತ್ತು ಅವುಗಳ ಬೇಟೆಯ ಕೌಶಲ್ಯ ಮತ್ತು ಹೊಸ ಆವಾಸಸ್ಥಾನಕ್ಕೆ ಅವುಗಳ ಹೊಂದಾಣಿಕೆಯನ್ನು ಪರಿಶೀಲಿಸುತ್ತದೆ.

ಕಾರ್ಯಪಡೆಯು ಕ್ವಾರಂಟೈನ್ ಬೋಮಾಗಳಿಂದ ಹುಲ್ಲುಗಾವಲು ಮತ್ತು ತೆರೆದ ಅರಣ್ಯ ಪ್ರದೇಶಗಳಿಗೆ ಚೀತಾಗಳನ್ನು ಬಿಡುಗಡೆ ಮಾಡುವುದನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಪರಿಸರ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮೂಲಕ ಚೀತಾ ಕಾರ್ಯಪಡೆಯ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲಾಗುತ್ತದೆ. ಅಧಿಕಾರಿಗಳು ಕಾರ್ಯಪಡೆಗೆ ಸಾಧ್ಯವಿರುವ ಎಲ್ಲ ಸಹಾಯವನ್ನೂ ಮಾಡುತ್ತಾರೆ.

ಸಚಿವಾಲಯದ ಪ್ರಕಾರ, ವಿಶೇಷ ಕಾರ್ಯಪಡೆಯನ್ನು ಎರಡು ವರ್ಷಗಳ ಅವಧಿಗೆ ಮಾಡಲಾಗಿದೆ ಮತ್ತು ಅಗತ್ಯವಿದ್ದಾಗ ಚಿರತೆ ಪರಿಚಯ ಪ್ರದೇಶಕ್ಕೆ ನಿಯಮಿತವಾಗಿ ಭೇಟಿ ನೀಡುವ ಉಪಸಮಿತಿಯನ್ನು ಸಹ ನೇಮಿಸುತ್ತದೆ. ಸಮಿತಿಯು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ ಅಂಚಿನ ಪ್ರದೇಶಗಳಲ್ಲಿ ಮತ್ತು ಇತರ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಲಹೆಗಳನ್ನು ನೀಡುತ್ತದೆ.

ಟಾಸ್ಕ್ ಫೋರ್ಸ್ ಸಮಿತಿಯು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್, ಮಧ್ಯಪ್ರದೇಶ – ಸದಸ್ಯ, ಅಲೋಕ್ ಕುಮಾರ್, ಡಾ ಅಮಿತ್ ಮಲ್ಲಿಕ್, ಇನ್ಸ್‌ಪೆಕ್ಟರ್ ಜನರಲ್, ಎನ್‌ಟಿಸಿಎ, ನವದೆಹಲಿ – ಸದಸ್ಯರನ್ನು ಮುಂತಾದ ಅಧಿಕಾರಿಗಳನ್ನು ಒಳಗೊಂಡಿದೆ. ಡಾ ವಿಷ್ಣು ಪ್ರಿಯಾ, ವಿಜ್ಞಾನಿ, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ ಇತರರು ಇದರಲ್ಲಿ ಇರುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೊ ಪ್ರಸಾರವಾದ ಮನ್ ಕಿ ಬಾತ್‌ನಲ್ಲಿ ಕಾರ್ಯಪಡೆ ರಚಿಸಲಾಗುವುದು ಮತ್ತು ಕುನೋ ಪಾರ್ಕ್‌ನಲ್ಲಿ ಚಿರತೆಗಳನ್ನು ಜನರು ಯಾವಾಗ ನೋಡಬಹುದು ಎಂಬುದನ್ನು ಅದು ನಿರ್ಧರಿಸುತ್ತದೆ ಎಂದು ಹೇಳಿದ ಕೆಲವು ದಿನಗಳ ನಂತರ ಕಾರ್ಯಪಡೆ ರಚನೆಯಾಗಿದೆ. ಇದೀಗ ಸಾರ್ವಜನಿಕರಿಗೆ ಸದ್ಯದಲ್ಲೇ ಚೀತಾವನ್ನು ನೋಡಲು ಭಾಗ್ಯ ಇದೆ ಎಂದು ಈ ಮೂಲಕ ಸರ್ಕಾರದ ಮೂಲಗಳು ತಿಳಿಸಿದೆ.