ದೆಹಲಿ: ಇಂದಿನಿಂದ ಸಂಸತ್‌ನ ಬಜೆಟ್ ಅಧಿವೇಶನ ಆರಂಭವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇದಕ್ಕೂ ಮೊದಲು ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ ಭವನದ ಬಳಿ ಮಾತನಾಡಿದ್ದಾರೆ. ಈ ದಶಕದ ಮೊದಲ ಅಧಿವೇಶನ ಆರಂಭವಾಗುತ್ತಿದೆ. ಭಾರತದ ಭವಿಷ್ಯದ ದೃಷ್ಟಿಯಿಂದ ಚರ್ಚೆಗಳು ನಡೆಯಲಿ ಎಂದು ಪ್ರಧಾನಿ ಮಾತನಾಡಿದ್ದಾರೆ.
ಇಂದು ಈ ದಶಕದ ಮೊದಲ ಅಧಿವೇಶನವ ಪ್ರಾರಂಭವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ನಾವು ಈಡೇರಿಸಬೇಕಿದೆ. ಅದಕ್ಕಾಗಿ, ರಾಷ್ಟ್ರದ ಮುಂದೆ ಒಂದು ಸುವರ್ಣಾವಕಾಶ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಬಳಿ ಹೇಳಿಕೆ ನೀಡಿದರು. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರಮೋದಿ ಮಾತನಾಡಿದರು.
ಸಂಸತ್ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತು
ಆತ್ಮನಿರ್ಭರ ಭಾರತ ಕೇವಲ ಭಾರತದಲ್ಲಿ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಯೋಜನೆಯಲ್ಲ. ಬದಲಾಗಿ, ಇದು ಭಾರತೀಯರ ಜೀವನ ಗುಣಮಟ್ಟವನ್ನೂ ಅಭಿವೃದ್ಧಿಪಡಿಸುವ, ದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸುವ ಯೋಜನೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು. ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣದ ಬಳಿಕ ಅವರು ಮಾತನಾಡಿದರು. ಕೃಷಿ ವಿಷಯದಲ್ಲಿ ನಾವು ಸ್ವಾವಲಂಬಿಗಳಾಗುವ ಮೂಲಕ ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಬಲ ತುಂಬಬೇಕು ಎಂದು ವೆಂಕಯ್ಯ ನಾಯ್ಡು ಹೇಳಿದರು.
ಸಂಸತ್ ಭವನದ ಭಾಷಣ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ಮೋದಿ ಸಂಸತ್ ಭವನದಿಂದ ವಿರಮಿಸಿದರು
Delhi: President Ram Nath Kovind leaves from the Parliament House after his Address at the joint session of the Parliament concludes. Vice President M Venkaiah Naidu and Prime Minister Narendra Modi also with him.#BudgetSession pic.twitter.com/m7CoX0hLjn
— ANI (@ANI) January 29, 2021
ಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ: ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
Published On - 1:07 pm, Fri, 29 January 21