ಫಲಾನುಭವಿಗಳು ಕೊರೊನಾ ಲಸಿಕೆ ವದಂತಿ ದೂರವಾಗಿಸಿ..ಪ್ರಧಾನಿ ನರೇಂದ್ರ ಮೋದಿ ಕರೆ

ವಾರಣಾಸಿಯ ಕೊರೊನಾ ಲಸಿಕೆ ಫಲಾನುಭವಿಗಳ ಜತೆ ವರ್ಚುವಲ್ ಸಂವಾದ ನಡೆಸಿದ ಅವರು, ಕೇವಲ ವಾರಣಾಸಿಯಲ್ಲೊಂದೇ 20 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಫಲಾನುಭವಿಗಳು ಕೊರೊನಾ ಲಸಿಕೆ ವದಂತಿ ದೂರವಾಗಿಸಿ..ಪ್ರಧಾನಿ ನರೇಂದ್ರ ಮೋದಿ ಕರೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated By: ರಾಜೇಶ್ ದುಗ್ಗುಮನೆ

Updated on: Jan 22, 2021 | 4:23 PM

ವಾರಣಾಸಿ: ಕೊರೊನಾ ಲಸಿಕೆಯಿಂದ ದೊಡ್ಡ ಅಡ್ಡ ಪರಿಣಾಮವಿಲ್ಲ ಎಂದು ಸಾಬೀತಾಗಿದೆ. ದೇಶದಲ್ಲಿ ತಯಾರಿಸಿದ ಲಸಿಕೆ ಮೇಲೆ ಭರವಸೆಯಿಡಿ. ಫಲಾನುಭವಿಗಳು ಲಸಿಕೆ ಕುರಿತ ವದಂತಿ ಹೋಗಲಾಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ವಾರಣಾಸಿಯ ಕೊರೊನಾ ಲಸಿಕೆ ಫಲಾನುಭವಿಗಳ ಜತೆ ವರ್ಚುವಲ್ ಸಂವಾದ ನಡೆಸಿದ ಅವರು, ಕೇವಲ ವಾರಣಾಸಿಯಲ್ಲೊಂದೇ 20 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಜನರಿಗೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ದೇಶದಲ್ಲಿ ಬೇಗನೇ ಲಸಿಕೆ ನೀಡಿಕೆಗೆ ಚಾಲನೆ ನೀಡಲು ಒತ್ತಡವಿತ್ತು. ಆದರೆ ವಿಜ್ಞಾನಿಗಳು ಒಪ್ಪಿದ ನಂತರವಷ್ಟೇ ಲಸಿಕೆ ಅಭಿಯಾನ ಪ್ರಾರಂಭಿಸಿದೆವು. ಆಸ್ಪತ್ರೆಗಳ ನಡುವೆ ಲಸಿಕೆ ನೀಡಿಕೆ ಬಗ್ಗೆ ಸ್ಪರ್ಧೆ ಶುರುವಾಗಲಿ ಎಂದ ಅವರು ಆರೋಗ್ಯ ಕಾರ್ಯಕರ್ತರ ಬಳಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

ಭಾರತ್ ಬಯೋಟೆಕ್ ನ‌ ಕೋವ್ಯಾಕ್ಸಿನ್ ಲಸಿಕೆಯ 3 ನೇ ಹಂತದಲ್ಲಿದ್ದು, ವೈದ್ಯಕೀಯ ಪ್ರಯೋಗ ನಡೆಸಲಾಗುತ್ತಿದೆ. ಈಗಾಗಲೇ 3 ನೇ ಹಂತದಲ್ಲಿ ಮೊದಲ ಡೋಸ್ ನೀಡಿಕೆ ಮುಕ್ತಾಯವಾಗಿದೆ. ಮಾರ್ಚ್ ವೇಳೆಗೆ 3 ನೇ ಹಂತದ ಪ್ರಯೋಗದ ಫಲಿತಾಂಶ ಲಭ್ಯ ಸಾಧ್ಯತೆಯಿದೆ ಎಂದು ಭಾರತ್ ಬಯೋಟೆಕ್​ನ ಸಿಎಂಡಿ ಸುಚಿತ್ರಾ ಎಲಾ ತಿಳಿಸಿದ್ದಾರೆ.

ಲಸಿಕೆಗೆ ಹೆದರಬೇಡಿ, ತಪ್ಪು ಮಾಹಿತಿಗೆ ಕಿವಿಗೊಡಬೇಡಿ -ಆರೋಗ್ಯ ಸಚಿವ ಡಾ.ಕೆ.ಸುಧಾಕರ್