
ಪೋಖ್ರಾನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ (Pokhran firing range) ಭಾರತ್ ಶಕ್ತಿ (Bharat Shakti) ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಭಾರತ್ ಶಕ್ತಿ ಮೂರು ಸೇವೆಗಳ ಸ್ಥಳೀಯವಾಗಿ ತಯಾರಿಸಿದ ರಕ್ಷಣಾ ಸಾಧನಗಳ ಪರಾಕ್ರಮವನ್ನು ಪ್ರದರ್ಶಿಸುತ್ತದೆ. ಸಂಯೋಜಿತ ತ್ರಿ-ಸೇವಾ ಫೈರ್‌ಪವರ್ ಮತ್ತು ಕುಶಲ ಪ್ರದರ್ಶನ ಸುಮಾರು 50 ನಿಮಿಷಗಳ ಕಾಲ ನಡೆದಿದೆ. LCA ತೇಜಸ್, ALH Mk-IV, LCH ಪ್ರಚಂಡ್, ಮೊಬೈಲ್ ಆಂಟಿ-ಡ್ರೋನ್ ಸಿಸ್ಟಮ್, BMP-II ಮತ್ತು ಅದರ ರೂಪಾಂತರಗಳು, NAMICA (ನಾಗ್ ಮಿಸೈಲ್ ಕ್ಯಾರಿಯರ್), T90 ಟ್ಯಾಂಕ್‌ಗಳು, ಧನುಷ್, K9 ವಜ್ರ ಮತ್ತು ಪಿನಾಕಾ ರಾಕೆಟ್‌ಗಳ ಪ್ರದರ್ಶನ ಇಲ್ಲಿ ನಡೆಯಲಿದೆ.
“ನಾವು ಭಾರತವನ್ನು ‘ವಿಕಸಿತ್’ ಮಾಡಲು ಬಯಸಿದರೆ, ನಾವು ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿಯೇ ಭಾರತವು ಖಾದ್ಯ ತೈಲಗಳಿಂದ ಹಿಡಿದು ಆಧುನಿಕ ವಿಮಾನಗಳವರೆಗೆ ಪ್ರತಿ ವಲಯದಲ್ಲಿ ‘ಆತ್ಮನಿರ್ಭರ’ದತ್ತ ಗಮನಹರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ 10 ವರ್ಷಗಳಲ್ಲಿ ದೇಶದ ರಕ್ಷಣಾ ಉತ್ಪಾದನೆ ದುಪ್ಪಟ್ಟಾಗಿದೆ ಅಂದರೆ ₹1 ಲಕ್ಷ ಕೋಟಿಗೂ ಹೆಚ್ಚು. ಇದರಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ 150 ಕ್ಕೂ ಹೆಚ್ಚು ರಕ್ಷಣಾ ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾಗಿದ್ದು, ನಮ್ಮ ಪಡೆಗಳು ಅವರಿಗೆ ₹1,800 ಕೋಟಿ ಮೌಲ್ಯದ ಆರ್ಡರ್‌ಗಳನ್ನು ನೀಡಲು ನಿರ್ಧರಿಸಿವೆ. ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ್’ ಭಾರತವು ಪಡೆಗಳಲ್ಲಿ ‘ಆತ್ಮವಿಶ್ವಾಸ’ದ ಭರವಸೆಯಾಗಿದೆ” ಎಂದು ಅವರು ಹೇಳಿದರು
#WATCH | Rajasthan | Prime Minister Narendra Modi, along with delegates from more than 30 countries, witnesses exercise “Bharat Shakti” at the Pokhran field firing range in Jaisalmer. pic.twitter.com/33u8BewMQU
— ANI (@ANI) March 12, 2024
ಪೋಖ್ರಾನ್ ಭಾರತದ ಆತ್ಮನಿರ್ಭರ್ (ಸ್ವಾವಲಂಬನೆ), ನಂಬಿಕೆ, ಸ್ವಾಭಿಮಾನದ ತ್ರಿಮೂರ್ತಿಗಳಿಗೆ ಸಾಕ್ಷಿಯಾಗಿದೆ ಎಂದು ‘ಭಾರತ್ ಶಕ್ತಿ’ ಪ್ರದರ್ಶನ ಬಗ್ಗೆ ಪ್ರಧಾನಿ ಮೋದಿ ಹೇಳಿದರು.”ಗಾಳಿಯಲ್ಲಿ ವಿಮಾನದ ಘರ್ಜನೆ, ಭಾರತ ಶಕ್ತಿ ವ್ಯಾಯಾಮದ ಸಮಯದಲ್ಲಿ ನೆಲದ ಮೇಲೆ ಪ್ರದರ್ಶಿಸಲಾದ ಶೌರ್ಯವು ‘ನವ ಭಾರತ’ದ ಕರೆಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಹರ್ಯಾಣದ ಜನರು ಬದಲಾವಣೆ ಬಯಸಿದ್ದಾರೆ ಎಂದ ದೀಪೇಂದರ್ ಹೂಡಾ
ಇಂದು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಅಥವಾ ಸ್ವಾವಲಂಬನೆಯಲ್ಲಿ ದಾಪುಗಾಲು ಹಾಕುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಆದರೆ 26 ವರ್ಷಗಳ ಹಿಂದೆ, ದೃಷ್ಟಿ ಮತ್ತು ಧ್ಯೇಯವು ಸ್ಪಷ್ಟವಾಗಿತ್ತು. ಅದೇನೆಂದರೆ 100% ಮೇಕ್ ಇನ್ ಇಂಡಿಯಾ.
1998 ರಲ್ಲಿ ಪೋಖ್ರಾನ್‌ನಲ್ಲಿ ಭಾರತದ ಯಶಸ್ವಿ ಪರಮಾಣು ಪರೀಕ್ಷೆಯನ್ನು ಆಚರಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತ ನರೇಂದ್ರ ಮೋದಿಯವರು ಮಾಡಿದ ಭಾಷಣದ ತುಣುಕು ಇಲ್ಲಿದೆ.@modiarchive ಎಂಬ ಎಕ್ಸ್ ಹ್ಯಾಂಡಲ್ ಈ ಭಾಷಣದ ತುಣುಕನ್ನು ಪೋಸ್ಟ್ ಮಾಡಿದೆ.
“100 Taka Swadeshi!” – 100% Made in India.
PM @narendramodi is scheduled to visit Pokhran today to witness the ‘Bharat Shakti’ exercise, a tri-services firing and manoeuvre exercise. Today, we all see India making strides in Aatmanirbharta, or self-reliance, in the defence… pic.twitter.com/ALKdkxFRNX
— Modi Archive (@modiarchive) March 12, 2024
ತಮ್ಮ ಭಾಷಣದಲ್ಲಿ ಮೋದಿ, ಈ ಪರಮಾಣು ಪರೀಕ್ಷೆಯಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ಹೇಗೆ ಭಾರತೀಯರು ಮತ್ತು ಸಂಪೂರ್ಣವಾಗಿ ಭಾರತದಲ್ಲಿ ಶಿಕ್ಷಣ ಪಡೆದವರು ಎಂಬುದನ್ನು ಮೋದಿ ಒತ್ತಿಹೇಳಿದ್ದಾರೆ. ಪರಮಾಣು ಪರೀಕ್ಷೆಯಿಂದ ಜಗತ್ತೇ ನಡುಗಿದೆ. ಇದು ಸಂಪೂರ್ಣ ಸ್ವದೇಶಿ. ಈ ಪರೀಕ್ಷೆಯಲ್ಲಿ ಇಬ್ಬರು ವಿಜ್ಞಾನಿಗಳ ಹೆಸರು ಮುನ್ನೆಲೆಗೆ ಬರುತ್ತದೆ.ಈ ವಿಜ್ಞಾನಿಗಳು ದೇಶದ ಹೊರಗಿನವರು ಅಲ್ಲ.ಇವರ ಸಂಪೂರ್ಣ ಶಿಕ್ಷಣ ಭಾರತದಲ್ಲೇ ಆಗಿತ್ತು. ಅಷ್ಟೇ ಅಲ್ಲ ಅಬ್ದುಲ್ ಕಲಾಂ ಅವರು ತಮಿಳು ಮಾಧ್ಯಮದಲ್ಲಿ ಕಲಿತವರು ಎಂದು ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:18 pm, Tue, 12 March 24