AICC ಅಧ್ಯಕ್ಷೆಯಾಗಲು ಪ್ರಿಯಾಂಕಾ ನಿರಾಸಕ್ತಿ, ಅಸಲಿ ಕಾರಣ ಇದು!

| Updated By: ಸಾಧು ಶ್ರೀನಾಥ್​

Updated on: Aug 24, 2020 | 11:38 AM

ದೆಹಲಿ: ಹಾಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ್ದು ಈ ನಡುವೆ ಮುಂದಿನ ಎಐಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ವಿಷಯ ಕುತೂಹಲ ಕೆರಳಿಸಿದೆ. ಈ ನಡುವೆ ಎಐಸಿಸಿ ಅಧ್ಯಕ್ಷೆಯಾಗಲು ಪ್ರಿಯಾಂಕಾ ಗಾಂಧಿ ನಿರಾಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದತ್ತ ಮಾತ್ರ ಪ್ರಿಯಾಂಕಾ ಗಾಂಧಿ ಚಿತ್ತವಿದ್ದು ಅಲ್ಲಿ ಹೆಚ್ಚು ಗಮನ ಹರಿಸಲು ಇಚ್ಛಿಸುತ್ತಿದ್ದಾರಂತೆ. ಕಳೆದ ಲೋಕಸಭೆ ಚುನಾವಣೆ ವೇಳೆ Upಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಯಿತು. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ […]

AICC ಅಧ್ಯಕ್ಷೆಯಾಗಲು ಪ್ರಿಯಾಂಕಾ ನಿರಾಸಕ್ತಿ, ಅಸಲಿ ಕಾರಣ ಇದು!
Follow us on

ದೆಹಲಿ: ಹಾಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಸೂಚನೆ ನೀಡಿದ್ದು ಈ ನಡುವೆ ಮುಂದಿನ ಎಐಸಿಸಿ ಅಧ್ಯಕ್ಷರು ಯಾರಾಗುತ್ತಾರೆ ಎಂಬ ವಿಷಯ ಕುತೂಹಲ ಕೆರಳಿಸಿದೆ. ಈ ನಡುವೆ ಎಐಸಿಸಿ ಅಧ್ಯಕ್ಷೆಯಾಗಲು ಪ್ರಿಯಾಂಕಾ ಗಾಂಧಿ ನಿರಾಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದತ್ತ ಮಾತ್ರ ಪ್ರಿಯಾಂಕಾ ಗಾಂಧಿ ಚಿತ್ತವಿದ್ದು ಅಲ್ಲಿ ಹೆಚ್ಚು ಗಮನ ಹರಿಸಲು ಇಚ್ಛಿಸುತ್ತಿದ್ದಾರಂತೆ. ಕಳೆದ ಲೋಕಸಭೆ ಚುನಾವಣೆ ವೇಳೆ Upಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಬೇಕಾಯಿತು. ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತು ಪ್ರಧಾನ ಕಾರ್ಯದರ್ಶಿಯಾದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಹೀಗಾಗಿ, 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಉತ್ತರಪ್ರದೇಶದಲ್ಲಿ ಬಹುಮತದಿಂದ ಗೆಲ್ಲಿಸಲು ಪ್ರಿಯಾಂಕಾ ಅದರ ಬಗ್ಗೆ ಗಮನ ಹರಿಸಲು ಇಚ್ಛಿಸಿದ್ದಾರೆ.

ಜೊತೆಗೆ, ಪ್ರಿಯಾಂಕಾ ಗಾಂಧಿಗೆ ತಮ್ಮ ಪತಿ ರಾಬರ್ಟ್ ವಾದ್ರಾನೇ ಹೊರೆಯಾಗುವ ಸಾಧ್ಯತೆಯಿದೆ. ಪ್ರಿಯಾಂಕಾ ಒಂದು ವೇಳೆ ಎಐಸಿಸಿ ಅಧ್ಯಕ್ಷರಾದರೇ ರಾಬರ್ಟ್ ವಾದ್ರಾ ವಿರುದ್ಧದ ಭೂ ಹಗರಣ ವಿಚಾರ ಪ್ರಸ್ತಾಪವಾಗುತ್ತೆ. ಇದರಿಂದ ಪ್ರಿಯಾಂಕಾಗೆ ಇರಿಸು-ಮುರಿಸಾಗುವ ಆಗುವ ಸಾಧ್ಯತೆಯಿದೆ. ಇದಲ್ಲದೆ, ಹರಿಯಾಣದ ಭೂ ಹಗರಣ ತನಿಖೆಯು ಸಹ ಚುರುಕು ಆಗಬಹುದು. ಆದ್ದರಿಂದ ಇದು ರಾಬರ್ಟ್ ವಾದ್ರಾಗೆ ಸಂಕಷ್ಟ ತರಲಿದೆ ಎಂದು ಪ್ರಿಯಾಂಕಾರಿಗೆ ಭಾಸವಾಗಿದೆ.

ರಾಬರ್ಟ್ ವಾದ್ರಾ ಹರಿಯಾಣಾದಲ್ಲಿ ಭೂ ಪರಿವರ್ತನೆ ಮಾಡಿಸಿಕೊಂಡು ಭಾರಿ ಲಾಭ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ, ಅದರ ಕುರಿತು ED ತನಿಖೆ ನಡೆಯುತ್ತಿದ್ದು ತನಿಖೆ ಪೂರ್ಣಗೊಳಿಸಿ ವಾದ್ರಾರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಹೀಗಾಗಿ ಎಐಸಿಸಿ ಅಧ್ಯಕ್ಷೆಯಾಗಲು ಪ್ರಿಯಾಂಕಾ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.