
ರಿಗಾ, ನವೆಂಬರ್ 07: ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar)ಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ. ರಿಗಾದಲ್ಲಿ ನಡೆದ ರ‍್ಯಾಲಿಯಲ್ಲಿ ಸಭ್ಯತೆಯನ್ನು ಮರೆತು ವರ್ತಿಸಿದ್ದಾರೆ. ‘‘ನೀವು ನೆಮ್ಮದಿಯಿಂದ ನಿವೃತ್ತರಾಗಲು ಸಾಧ್ಯವಿಲ್ಲ, ಜ್ಞಾನೇಶ್ ಕುಮಾರ್ ಅವರ ಹೆಸರನ್ನು ನೀವು ಎಂದಿಗೂ ಮರೆಯಬಾರದು ಎಂದು ನಾನು ಸಾವ್ಝನಿಕರಲ್ಲಿ ಮನವಿ ಮಾಡುತ್ತೇನೆ’’ ಎಂದ ಪ್ರಿಯಾಂಕಾ ಎಸ್ಎಸ್ ಸಂಧು ಹಾಗೂ ವಿವೇಕ್ ಜೋಶಿ ಹೆಸರುಗಳನ್ನು ಕೂಡ ಹೇಳಿದ್ದಾರೆ.
‘‘ಹರಿಯಾಣದಲ್ಲಿ ಮತಗಳನ್ನು ಹೇಗೆ ಕದಿಯಲಾಗಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ, ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಎಂಬ ಮೂರು ಹೆಸರುಗಳನ್ನು ನೆನಪಿಟ್ಟುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ’’ ಎಂದರು.
ಸಾರ್ವಜನಿಕರೇ ನಮ್ಮ ತಾಯಿ ಎಂದು ಹೇಳಿದ ಪ್ರಿಯಾಂಕಾ, ತಾಯಿ ತುಂಬಾ ಉದಾರಳು,ಆದರೆ ಅವರಿಗೆ ದ್ರೋಹ ಬಗೆದರೆ ಅದು ಸರಿಯಲ್ಲ, ಸಾರ್ವಜನಿಕರು ಕ್ಷಮಿಸುವುದಿಲ್ಲ. ಜ್ಞಾನೇಶ್ ಕುಮಾರ್, ಎಸ್.ಎಸ್. ಸಂಧು ಮತ್ತು ವಿವೇಕ್ ಜೋಶಿ ಅವರ ಹೆಸರುಗಳನ್ನು ಸಾರ್ವಜನಿಕರು ಎಂದಿಗೂ ಮರೆಯುವುದಿಲ್ಲ. ನಿವೃತ್ತರಾಗಿ ಶಾಂತಿಯಿಂದ ಬದುಕುತ್ತಾರೆ ಎಂದು ಭಾವಿಸಿದರೆ, ಆ ಆಲೋಚನೆಯನ್ನು ಈಗಲೇ ಕೈಬಿಡುವುದು ಒಳಿತು ಎಂದು ಬೆದರಿಕೆ ಹಾಕಿದ್ದಾರೆ.
ಮತ್ತಷ್ಟು ಓದಿ: ತಮಗೆ ಎಲ್ಲಾ ರಾಜಕೀಯ ಪಕ್ಷಗಳು ಒಂದೇ; ಭೇದ ಭಾವ ಮಾಡಲು ಹೇಗೆ ಸಾಧ್ಯ?: ವಿಪಕ್ಷಗಳ ‘ಆರೋಪ’ಕ್ಕೆ ಚುನಾವಣಾ ಆಯೋಗ ಉತ್ತರ
ಚುನಾವಣಾ ಆಯೋಗದ ವಿರುದ್ಧದ ಆರೋಪವೇನು?
ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದರು. ಅದರಲ್ಲಿ 2024 ರ ಹರಿಯಾಣ ವಿಧಾನಸಭಾ ಚುನಾವಣೆಯನ್ನು 25 ಲಕ್ಷ ಮತಗಳನ್ನು ನಕಲಿ ಮತಗಳ ಮೂಲಕ ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದರು. ರಾಹುಲ್ ಗಾಂಧಿ ಅವರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಯವರ ಹೇಳಿಕೆಗಳು ರಾಜಕೀಯ ವಿರೋಧಿಗಳಿಂದ ಟೀಕೆಗೆ ಗುರಿಯಾಗಿದ್ದು, ರಾಜಕೀಯ ಭಾಷಣದ ಮಿತಿಗಳು ಮತ್ತು ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಬೆದರಿಕೆ ಹಾಕುವ ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಬಿಹಾರದ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತವು 121 ಕ್ಷೇತ್ರಗಳನ್ನು ಒಳಗೊಂಡಿದೆ ಮತ್ತು ಎರಡನೇ ಹಂತವು ನವೆಂಬರ್ 11 ರಂದು ಉಳಿದ 122 ಕ್ಷೇತ್ರಗಳನ್ನು ಒಳಗೊಂಡಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Fri, 7 November 25