AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಯ ವಶಕ್ಕೆ ಪಡೆಯುತ್ತಿದ್ದಂತೆ ಬೃಹತ್ ಕಿಂಗ್ಸ್‌ವೇ ಕ್ಯಾಂಪ್ ಗೇಟ್ ಹತ್ತಿದ ಪ್ರಿಯಾಂಕಾ ಗಾಂಧಿ, ಫಿಟ್‌ನೆಸ್‌ಗೆ ನೆಟ್ಟಿಗರು ಫಿದಾ

ರಾಹುಲ್ ಗಾಂಧಿಯವರ ವಶದ ನಂತರ, ಪ್ರಿಯಾಂಕಾ ಗಾಂಧಿ ಕಿಂಗ್ಸ್‌ವೇ ಕ್ಯಾಂಪ್ ಗೇಟ್ ಹತ್ತಿ ಒಳನುಗ್ಗಿದ ದೃಶ್ಯ ವೈರಲ್ ಆಗಿದೆ. 'ಇಂಡಿ' ಮೈತ್ರಿಕೂಟದ ಪ್ರತಿಭಟನೆ ವೇಳೆ ನಡೆದ ಈ ಸಾಹಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಮತದಾರರ ಪಟ್ಟಿ ಲೋಪದ ಆರೋಪದ ಹಿನ್ನೆಲೆಯಲ್ಲಿ ಈ ಧರಣಿ ನಡೆದಿತ್ತು. ಪ್ರಿಯಾಂಕಾ ಗಾಂಧಿಯವರ ಈ ಕ್ರಮ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿಯ ವಶಕ್ಕೆ ಪಡೆಯುತ್ತಿದ್ದಂತೆ ಬೃಹತ್ ಕಿಂಗ್ಸ್‌ವೇ ಕ್ಯಾಂಪ್ ಗೇಟ್ ಹತ್ತಿದ ಪ್ರಿಯಾಂಕಾ ಗಾಂಧಿ, ಫಿಟ್‌ನೆಸ್‌ಗೆ ನೆಟ್ಟಿಗರು ಫಿದಾ
ಪ್ರಿಯಾಂಕಾ ಗಾಂಧಿ
ನಯನಾ ರಾಜೀವ್
|

Updated on: Oct 07, 2026 | 10:26 AM

Share

ನವದೆಹಲಿ, ಅಕ್ಟೋಬರ್ 07: ಚುನಾವಣಾ ಆಯೋಗದ (ECI)ಕಚೇರಿಯತ್ತ ‘ಇಂಡಿ’ ಮೈತ್ರಿಕೂಟ ನಡೆಸಿದ ಪ್ರತಿಭಟನಾ ಮೆರವಣಿಗೆಯ ವೇಳೆ ರಾಜಕೀಯ ನಾಟಕೀಯ ಬೆಳವಣಿಗೆಗಳು ನಡೆದಿವೆ. ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ ಇರಿಸಿದ್ದಾಗ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿನ ಬೃಹತ್ ಗೇಟ್ ಹತ್ತಿ ಒಳಪ್ರವೇಶಿಸಿ ಸ್ವತಃ ಬಾಗಿಲನ್ನು ತೆರೆದಿದ್ದಾರೆ. ಈ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ

ಸೀರೆಯಲ್ಲಿಯೇ ಗೇಟ್ ಹತ್ತಿ ಇಳಿದ ಪ್ರಿಯಾಂಕಾ ಅವರ ಸಾಹಸಕ್ಕೆ ನೆಟ್ಟಿಗರು ಮಾರುಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಇವರನ್ನು ಹೆಣ್ಣು ಹುಲಿ ಎಂದು ಬಣ್ಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

9 ಗಂಟೆಗಳ ಹೈವೋಲ್ಟೇಜ್ ಧರಣಿ

ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯತ್ತ ಹೊರಟಿದ್ದ 300ಕ್ಕೂ ಹೆಚ್ಚು ವಿಪಕ್ಷ ಸಂಸದರನ್ನು ಆಕಾಶವಾಣಿ ಭವನ ಮತ್ತು ನೀತಿ ಆಯೋಗದ ಬಳಿ ಪೊಲೀಸರು ತಡೆದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಸ್ತೆಯಲ್ಲೇ ಕುಳಿತು ಸುಮಾರು ಒಂಬತ್ತು ಗಂಟೆಗಳ ಕಾಲ ಧರಣಿ ನಡೆಸಿದರು. ಸಂಜೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸ್ ಬಸ್ ಮೂಲಕ ಉತ್ತರ ದೆಹಲಿಯ ಕಿಂಗ್ಸ್‌ವೇ ಕ್ಯಾಂಪ್‌ಗೆ ಕರೆದೊಯ್ದರು.

ಮತ್ತಷ್ಟು ಓದಿ: ಚುನಾವಣಾ ಆಯೋಗದ ಕಚೇರಿ ಚಲೋ: ಆಕಾಶವಾಣಿ ಭವನದ ಬಳಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ತಡೆದ ದೆಹಲಿ ಪೊಲೀಸರು

ಪ್ರತಿಭಟನೆಗೆ ಮುಖ್ಯ ಕಾರಣವೇನು?

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ದೇಶಾದ್ಯಂತ ಕೋಟ್ಯಂತರ ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗಿದೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಈ ಪ್ರಕ್ರಿಯೆಯು ಆಡಳಿತಾರೂಢ ಬಿಜೆಪಿಗೆ ಅನುಕೂಲ ಮಾಡಿಕೊಡುವಂತಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು ಹಿಡಿದಿದೆ.

ಪೋಸ್ಟ್

ಆಯೋಗ ಮತ್ತು ಸರ್ಕಾರದ ಸ್ಪಷ್ಟನೆ

ಮತದಾರರ ಪಟ್ಟಿ ಪರಿಷ್ಕರಣೆ ನಿಯಮಾನುಸಾರವೇ ನಡೆದಿದ್ದು, ಯಾವುದೇ ಅರ್ಹ ಮತದಾರರನ್ನು ಅನ್ಯಾಯವಾಗಿ ಕೈಬಿಟ್ಟಿಲ್ಲ ಎಂದು ಚುನಾವಣಾ ಆಯೋಗ ಮತ್ತು ಬಿಜೆಪಿ ಸ್ಪಷ್ಟಪಡಿಸಿವೆ. ವಿರೋಧ ಪಕ್ಷಗಳು ಅನಗತ್ಯ ರಾಜಕೀಯ ಗಿಮಿಕ್ ಮಾಡುತ್ತಿವೆ ಎಂದು ಆಡಳಿತ ಪಕ್ಷ ಆರೋಪಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More