ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 08, 2020 | 7:57 PM

ಪಂಜಾಬಿ ವಲಸೆಗಾರರು ಭಾನುವಾರ ಆಯೋಜಿಸಿದ್ದ ಲಂಡನ್ ಕಿಸಾನ್ ಱಲಿಯಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಎಸ್​ಎಫ್​ಜೆಯ ಕಾರ್ಯಕಾರಿ ಸದಸ್ಯ ಪರಮಜಿತ್ ಸಿಂಗ್ ಪಮ್ಮಾ ಪಾಲ್ಗೊಂಡಿದ್ದರು.

ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ
ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿಖ್ ಸಮುದಾಯ
Follow us on

ಲಂಡನ್: ಅಮೆರಿಕದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (ಎಸ್​ಎಫ್​ಜೆ) ಸೋಮವಾರ ಲಂಡನ್, ಬರ್ಮಿಂಗ್​ಹ್ಯಾಮ್, ಫ್ರಾಂಕ್​ಫರ್ಟ್, ವಯಾಂಕೋವರ್, ಟೊರೊಂಟೊ, ವಾಷಿಂಗ್​ಟನ್, ಸ್ಯಾನ್ ಫಾನ್ಸಿಸ್ಕೊ ಮತ್ತು ನ್ಯೂಯಾರ್ಕ್​ನಲ್ಲಿನ ಭಾರತೀಯ ರಾಯಬಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದೆ. ಪಂಜಾಬ್ ರೈತರ ಱಲಿಗೆ ಡಿಸೆಂಬರ್ 10ರಂದು ಬೆಂಬಲ ನೀಡುವುದಾಗಿ ತಿಳಿಸಿದೆ.

ಪಂಜಾಬಿ ವಲಸೆಗಾರರು ಭಾನುವಾರ ಆಯೋಜಿಸಿದ್ದ ಲಂಡನ್ ಕಿಸಾನ್ ಱಲಿಯಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಎಸ್​ಎಫ್​ಜೆಯ ಕಾರ್ಯಕಾರಿ ಸದಸ್ಯ ಪರಮಜಿತ್ ಸಿಂಗ್ ಪಮ್ಮಾ ಮತ್ತು ಕೆಲವು ಬೆಂಬಲಿಗರು ನೀಲಿ ಮತ್ತು ಹಳದಿ ಖಲಿಸ್ತಾನಿ ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಪಂಜಾಬ್ ರೈತರ ದುಸ್ಥಿತಿಗೆ ಖಲಿಸ್ತಾನ್ ಮಾತ್ರ ಪರಿಹಾರ ಎಂದು ಹೇಳಿಕೊಂಡ ಎಸ್​ಎಫ್​ಜೆ ಸಲಹೆಗಾರ ಗುರುಪ್ರತಾಪ್ ಸಿಂಗ್ ಪನ್ನೂ,  ನ್ಯೂಯಾರ್ಕ್​ನಲ್ಲಿ ಮಾನವ ಹಕ್ಕುಗಳ ದಿನದಂದು ಭಾರತೀಯ ರಾಯಬಾರಿ ಕಚೇರಿಗೆ ಮುತ್ತಿಗೆ ಹಾಕುವಂತೆ ಕರೆ ನೀಡಿದ್ದೇವೆ ಎಂದು ಹೇಳಿದರು.

Delhi Chaloಗೆ ಸಿಗುತ್ತಿದೆ ರಾಷ್ಟ್ರವ್ಯಾಪಿ ಬೆಂಬಲ: ಪಂಜಾಬ್​ ಕೃಷಿಕರಿಗೆ ದೊರೆಯಲಿದೆ ಕರುನಾಡ ರೈತರ ಬಲ