
ನವದೆಹಲಿ, ಜನವರಿ 14: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ PSLV-C62 ಮಿಷನ್‌ನ ವೈಫಲ್ಯವು ಎಲ್ಲರಿಗೂ ಬೇಸರ ತಂದಿದೆ. 16 ಪ್ಯಾಸೆಂಜರ್ಸ್ಗಳನ್ನು ಹೊತ್ತು ಹೊರಟಿದ್ದ ರಾಕೆಟ್(Rocket)ನಲ್ಲಿ ಕೇವಲ ಕಿಡ್ ಮಾತ್ರ ಬದುಕುಳಿದಿದೆ. ಇಲ್ಲಿ ಪ್ಯಾಸೆಂಜರ್ಸ್ ಎಂದರೆ 16 ಉಪಗ್ರಹಗಳು ಎಂದರ್ಥ. ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್‌ನ “KID” ಕ್ಯಾಪ್ಸುಲ್ ದುರಂತದಿಂದ ಬದುಕುಳಿದಿದೆ.
ಈ ಫುಟ್‌ಬಾಲ್ ಗಾತ್ರದ ಕ್ಯಾಪ್ಸುಲ್ ದುರಂತದಿಂದ ಬದುಕುಳಿಯುವುದಲ್ಲದೆ, ಭೂಮಿಗೆ ಡೇಟಾವನ್ನು ಹಿಂತಿರುಗಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ರಾಕೆಟ್‌ನ ಮೂರನೇ ಹಂತದಲ್ಲಿ ವೈಫಲ್ಯ ಎದುರಾಗಿತ್ತು. ಮುಖ್ಯ ಉಪಗ್ರಹವು ಬಾಹ್ಯಾಕಾಶವನ್ನು ತಲುಪುವುದನ್ನು ತಡೆಯಿತು.
ಆದಾಗ್ಯೂ, ಈ ಸಣ್ಣ, 25 ಕಿಲೋಗ್ರಾಂ ಕ್ಯಾಪ್ಸುಲ್ 28 ಗ್ರಾಂನ ಅಗಾಧ ಒತ್ತಡವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದು ತೀವ್ರವಾದ ಶಾಖದ ನಡುವೆ ಮೂರು ನಿಮಿಷಗಳ ಕಾಲ ನಿರಂತರ ಸಂಕೇತಗಳನ್ನು ಕಳುಹಿಸಿತು.
ಮತ್ತಷ್ಟು ಓದಿ: India’s Space Mission: ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ತುಂಬಿಸುವ ಸಾಮರ್ಥ್ಯವಿರುವ ಎರಡನೇ ದೇಶವಾಗುವತ್ತ ಭಾರತ ಧಾಪುಗಾಲು
ಜನವರಿ 12, 2026ರಂದು ಶ್ರೀಹರಿಕೋಟಾದಿಂದ ಇಸ್ರೋ PSLV-C62 ರಾಕೆಟ್ ಉಡಾವಣೆ ಮಾಡಿತ್ತು. ರಾಕೆಟ್‌ನ ಮೂರನೇ ಹಂತದಲ್ಲಿನ ದೋಷವು ಇಡೀ ಕಾರ್ಯಾಚರಣೆಯನ್ನೇ ತಲೆಕೆಳಗಾಗಿ ಮಾಡಿತ್ತು. ಈ ರಾಕೆಟ್16 ಉಪಗ್ರಹಗಳನ್ನು ಹೊತ್ತು ಹೊರಟಿತ್ತು.
ಮುಖ್ಯ ಉಪಗ್ರಹಗಳು ನಾಶವಾದರೂ ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್‌ನ ‘KID’ ಕ್ಯಾಪ್ಸುಲ್ನಿಂದ ಬೇರ್ಪಡುವಲ್ಲಿ ಯಶಸ್ವಿಯಾಯಿತು. ಅದರ ಮೂಲಮಾದರಿಯು ತೀವ್ರವಾದ ಶಾಖ ಮತ್ತು ಒತ್ತಡವನ್ನು ತಡೆದುಕೊಳ್ಳುತ್ತದೆ. ಕ್ಯಾಪ್ಸುಲ್ ಕಾರ್ಯನಿರ್ವಹಿಸುತ್ತಲೇ ಇತ್ತು ಮಾತ್ರವಲ್ಲದೆ ಮೂರು ನಿಮಿಷಗಳ ಕಾಲ ಟೆಲಿಮೆಟ್ರಿ ಡೇಟಾವನ್ನು ಕಳುಹಿಸಿತು. ವಿಜ್ಞಾನಿಗಳು ಈಗ ಕ್ಯಾಪ್ಸುಲ್‌ನ ಮಾರ್ಗವನ್ನು ಪುನರ್ನಿರ್ಮಿಸಲು ಈ ಡೇಟಾವನ್ನು ಬಳಸುತ್ತಿದ್ದಾರೆ.
ಇದನ್ನು ಫ್ರೆಂಚ್ ಕಂಪನಿ ರೈಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಉಪಗ್ರಹ ಸೇವೆ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಬಳಸಬಹುದಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಕಂಪನಿಯು ಗುರಿಯಾಗಿದೆ.
ಭವಿಷ್ಯದಲ್ಲಿ ಸುರಕ್ಷಿತ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಈ ಡೇಟಾವು ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ವಿಜ್ಞಾನಿಗಳ ನಂಬಿಕೆಯಾಗಿದೆ.
PSLV-C62 ಮಿಷನ್ 2026 ರ ಇಸ್ರೋದ ಮೊದಲ ಪ್ರಮುಖ ಮಿಷನ್ ಆಗಿತ್ತು. ಈ ರಾಕೆಟ್ ಡಿಆರ್ಡಿಒದ ಪ್ರಾಥಮಿಕ ಉಪಗ್ರಹ EOS-N1 (ಅನ್ವೇಷ) ಜೊತೆಗೆ ಭಾರತ ಮತ್ತು ವಿದೇಶಗಳಿಂದ ಬಂದ 15 ಇತರ ಸಣ್ಣ ಪೇಲೋಡ್‌ಗಳನ್ನು ಹೊತ್ತೊಯ್ದಿತು. ಮೂರನೇ ಹಂತದ (PS3) ಸಮಯದಲ್ಲಿ ಸಮಸ್ಯೆ ಎದುರಾಗಿತ್ತು ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಈ ತಾಂತ್ರಿಕ ದೋಷವು ರಾಕೆಟ್ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪುವ ಕನಸನ್ನು ಭಗ್ನಗೊಳಿಸಿತ್ತು.
ಇಸ್ರೋ ಇನ್ನೂ ಔಪಚಾರಿಕವಾಗಿ ಇದನ್ನು ಸಂಪೂರ್ಣ ವೈಫಲ್ಯ ಎಂದು ಘೋಷಿಸದಿದ್ದರೂ, ಪ್ರಾಥಮಿಕ ಉಪಗ್ರಹಗಳ ನಷ್ಟವನ್ನು ದೃಢಪಡಿಸಲಾಗಿದೆ. ಈ ನಿರಾಶೆಯ ನಡುವೆ, ಸ್ಪ್ಯಾನಿಷ್ ಕ್ಯಾಪ್ಸುಲ್‌ನ ಯಶಸ್ಸು ವಿಜ್ಞಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ