
ಪುದುಚೇರಿ: ಪುದುಚೇರಿ (Puducherry) ಮುಖ್ಯಮಂತ್ರಿ ಎನ್ ರಂಗಸಾಮಿ (N Rangasamy) ಅವರು ಸೋಮವಾರ ₹10,696.61 ಕೋಟಿ ತೆರಿಗೆ ಮುಕ್ತ ಬಜೆಟ್ (budget) ಮಂಡನೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಮನೆಗಾಗಿ ಉಚಿತ ಭೂಮಿಯ ಪಟ್ಟಾ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುವ ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವುದು ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.
ಬಜೆಟ್ನಲ್ಲಿನ ಪ್ರಮುಖ ಘೋಷಣೆಗಳು
ಸ್ವಾತಂತ್ರ್ಯ ಹೋರಾಟಗಾರರರಿಗೆ ಉಚಿತ ಮನೆ
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಬಜೆಟ್ ಮಂಡಿಸಿದ ರಂಗಸಾಮಿ, ದೇಶ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿರುವಾಗ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಮನೆಗಾಗಿ ಪಟ್ಟಾ ವಿತರಿಸಲು ಆಡಳಿತ ನಿರ್ಧರಿಸಿದೆ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಮತ್ತು ಸೈಕಲ್
ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆಯ XI ಮತ್ತು XIIನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ಗಳನ್ನು ಹಂತ ಹಂತವಾಗಿ ವಿತರಿಸಲಾಗುವುದು ಎಂದಿದ್ದಾರೆ. ಅದೇ ವೇಳೆ ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ಪುದುಚೇರಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯ
ಪುದುಚೇರಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಈ ವಿವಿಗೆ ಶಂಕು ಸ್ಥಾಪನೆಗಾಗಿ ಮೋದಿ ಅವರನ್ನು ಆಹ್ವಾನಿಸಲಾಗುವುದು. ಈ ಯೋಜನೆಗಾಗಿ ಅಗತ್ಯವಾದ ಜಮೀನನ್ನು ಈಗಲೇ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಪ್ರದೇಶದ ಅಭಿವೃದ್ಧಿಗಾಗಿ ಶಾಸಕರಿಗೆ 2 ಕೋಟಿ ಅನುದಾನ
ಶಾಸಕರ ಸ್ಥಳೀಯ ಪ್ರದೇಶದ ಅಭಿಲೃದ್ಧಿ ಯೋಜನೆ ಅಡಿಯಲ್ಲಿ ಪ್ರತಿ ಸದಸ್ಯರಿಗೂ 2 ಕೋಟಿ ಅನದಾನ ನೀಡಲಾಗುವುದು. ಈ ಹಣವನ್ನು ಅವರು ಪ್ರಸ್ತುತ ವರ್ಷದಲ್ಲಿ ಅವರ ಕ್ಷೇತ್ರದ ಅಭಿವೃದ್ಧಿಗಾಗಿ ವಿನಿಯೋಗಿಸಬೇಕಿದೆ.
ಕರೈಕಲ್ ಮತ್ತು ಶ್ರೀಲಂಕಾ ನಡುವೆ ನೌಕೆ
ಕರೈಕಲ್ ಬಂದರು ಮತ್ತು ಶ್ರೀಲಂಕಾದ ಕಂಕೇಸಂತುರಿ ಬಂದರು ನಡುವೆ ನೌಕೆ ಸೇವೆ ಈ ವರ್ಷ ಆರಂಭಿಸುವುದಾಗಿ ಹೇಳಿದ್ದಾರೆ
ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ
ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಕೆಳದರ್ಜೆ ಮತ್ತು ಮೇಲ್ದರ್ಜೆ ಡಿವಿಷನಲ್ ಕ್ಲರ್ಕ್ ಹುದ್ದೆಗಳನ್ನು ಈ ವರ್ಷಾಂತ್ಯಕ್ಕೆ ಮುನ್ನ ಭರ್ತಿ ಮಾಡಲಾಗುವುದು
ಬಜೆಟ್ ಗಾತ್ರ, ಆದಾಯ
#Puducherry CM N Rangasamy presents Rs 10,696 crore budget for 2022-23 in territorial Assembly today.
— All India Radio News (@airnewsalerts) August 22, 2022
2022-23 ವರ್ಷದ ಬಜೆಟ್ ಗಾತ್ರ ₹10,696.61 ಕೋಟಿ, ಇಲ್ಲಿನ ಆದಾಯವನ್ನು ₹6,557.23 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರದಿಂದ ₹1,729.77 ಕೋಟಿ ಸಹಾಯ ಲಭಿಸಲಿದ್ದು, ಕೇಂದ್ರ ರಸ್ತೆ ನಿಧಿಯಿಂದ ₹20 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಡಿಯಿಂದ ₹500 ಅನುದಾನ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿನ ವಿತ್ತೀಯ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ₹ 1,889.61 ಕೋಟಿಗಳಷ್ಟು ಸಾಲವನ್ನು ಅನುಮೋದಿಸಿದೆ. ಹಣಕಾಸು ಖಾತೆಯನ್ನು ಹೊಂದಿರುವ ರಂಗಸಾಮಿ ಮಾರ್ಚ್ 31, 2022 ರಂತೆ ಕೇಂದ್ರಾಡಳಿತ ಪ್ರದೇಶದ ಒಟ್ಟು ಬಾಕಿ ಸಾಲವು ₹9,859.20 ಕೋಟಿಯಾಗಿದೆ ಎಂದು ಹೇಳಿದರು.
ನಮ್ಮ ಹಣಕಾಸಿನ ಸಂಪನ್ಮೂಲಗಳ ಹೆಚ್ಚಿನ ಭಾಗವು ಸಂಬಳ, ಪಿಂಚಣಿ, ಹಿಂದಿನ ಸಾಲಗಳ ಮರುಪಾವತಿ ಮತ್ತು ಬಡ್ಡಿ ಪಾವತಿಗಳಂತಹ ವೆಚ್ಚಗಳನ್ನು ಪೂರೈಸಲು ವ್ಯಯಿಸಲಾಗುತ್ತದೆಎಂದು ಅವರು ಹೇಳಿದರು.
ವೆಚ್ಚ
2022-23ನೇ ಹಣಕಾಸು ವರ್ಷಕ್ಕೆ ₹ 10,696.61 ಕೋಟಿ ಬಜೆಟ್‌ನಲ್ಲಿ ₹ 2,312.77 ಕೋಟಿ ಮೊತ್ತವನ್ನು ವೇತನಕ್ಕಾಗಿ (21.62%) ಪಿಂಚಣಿಗೆ ₹1,122.32 ಕೋಟಿ (ಶೇ.10.49), ಸಾಲ ಮತ್ತು ಬಡ್ಡಿ ಪಾವತಿಗೆ ₹2,311.61 ಕೋಟಿ (ಶೇ.21.61) ಸಾಲ ಮತ್ತು ಬಡ್ಡಿ ಪಾವತಿಗೆ ₹1,440 ಕೋಟಿ (ಶೇ.13.46) ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ತಮ್ಮ 75 ನಿಮಿಷಗಳ ಭಾಷಣದಲ್ಲಿ ಹೇಳಿದರು.
ರಂಗಸಾಮಿ ಅವರು ಸರ್ಕಾರದ ಇತರ ಪ್ರಮುಖ ವೆಚ್ಚಗಳ ಬಗ್ಗೆ ಹೇಳುತ್ತಾ, ವೃದ್ಧಾಪ್ಯ ವೇತನ (ವಯಸ್ಸಾದ ನಾಗರಿಕರಿಗೆ ನೆರವು) ಮತ್ತು ಇತರ ಕಲ್ಯಾಣ ಯೋಜನೆಗಳಿಗೆ ₹ 1,400 ಕೋಟಿ (13.09%), ಸಮಾಜಕ್ಕೆ ಸಹಾಯಧನ ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳು, ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರ ಸಂಸ್ಥೆಗಳು ₹1,333.19 ಕೋಟಿಗಳಷ್ಟು (12.46%)ವ್ಯಯಿಸಲಾಗುತ್ತದೆ. ಹಿಂದಿನ ಹಣಕಾಸು ವರ್ಷದಲ್ಲಿ (2021-22) ಮಾಡಿದ ವೆಚ್ಚವು ₹ 9,793.29 ಕೋಟಿಗಳಾಗಿದ್ದು, ಇದು ಪರಿಷ್ಕೃತ ಅಂದಾಜಿನ 94.04% ರಷ್ಟು ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ ನಂತರ ಸ್ಪೀಕರ್ ಆರ್ ಸೆಲ್ವಂ ಅವರು ಸದನವನ್ನು ಮುಂದೂಡಿದರು. ಮಂಗಳವಾರ ಬೆಳಗ್ಗೆ 9.30ಕ್ಕೆ ಸದನ ಮತ್ತೆ ಸೇರಲಿದೆ.
Published On - 5:01 pm, Mon, 22 August 22