Gold Man ಹೃದಯಾಘಾತಕ್ಕೆ ಬಲಿ, ಅಂತ್ಯಕ್ರಿಯೆಗೆ ಬೆರಳೆಣಿಕೆಯಷ್ಟು ಜನ
ಪುಣೆ: ಇಡೀ ದೇಶಕ್ಕೆ ಗೋಲ್ಡ್ ಮ್ಯಾನ್ ಎಂದೇ ಚಿರಪರಿಚಿತನಾಗಿದ್ದ ಸಾಮ್ರಾಟ್ ಮೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾಮ್ರಾಟ್ ಮೋಜ್ ಪುಣೆಯಲ್ಲಿ ಪ್ರಸಿದ್ಧ ಉದ್ಯಮಿಯಾಗಿದ್ದರು. ಸುಮಾರು 10 ಕೆಜಿಯಷ್ಟು ಚಿನ್ನವನ್ನು ತಮ್ಮ ಕೈಗೆ, ಕುತ್ತಿಗೆಗೆ ಹಾಕಿಕೊಳ್ಳುತ್ತಿದ್ದರು. ಚಿಕ್ಕ ಬಂಗಾರದ ಓಲೆ ಖರೀದಿಸಲು ಕಷ್ಟವಿರುವಾಗ 10ಕೆಜಿ ಚಿನ್ನ ಧರಿಸುತ್ತಾರೆ ಎಂದು ಇವರನ್ನು ಜನ ಗೋಲ್ಡ್ ಮ್ಯಾನ್ ಎಂದೇ ಗುರುತಿಸುತ್ತಿದ್ದರು. ಹಾಗೂ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆದರೆ 39ರ ವಯಸ್ಸಿನ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಸಾಮ್ರಾಟ್ ಮೋಜ್ ಮೇ […]
ಪುಣೆ: ಇಡೀ ದೇಶಕ್ಕೆ ಗೋಲ್ಡ್ ಮ್ಯಾನ್ ಎಂದೇ ಚಿರಪರಿಚಿತನಾಗಿದ್ದ ಸಾಮ್ರಾಟ್ ಮೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಾಮ್ರಾಟ್ ಮೋಜ್ ಪುಣೆಯಲ್ಲಿ ಪ್ರಸಿದ್ಧ ಉದ್ಯಮಿಯಾಗಿದ್ದರು. ಸುಮಾರು 10 ಕೆಜಿಯಷ್ಟು ಚಿನ್ನವನ್ನು ತಮ್ಮ ಕೈಗೆ, ಕುತ್ತಿಗೆಗೆ ಹಾಕಿಕೊಳ್ಳುತ್ತಿದ್ದರು.
ಚಿಕ್ಕ ಬಂಗಾರದ ಓಲೆ ಖರೀದಿಸಲು ಕಷ್ಟವಿರುವಾಗ 10ಕೆಜಿ ಚಿನ್ನ ಧರಿಸುತ್ತಾರೆ ಎಂದು ಇವರನ್ನು ಜನ ಗೋಲ್ಡ್ ಮ್ಯಾನ್ ಎಂದೇ ಗುರುತಿಸುತ್ತಿದ್ದರು. ಹಾಗೂ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆದರೆ 39ರ ವಯಸ್ಸಿನ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಸಾಮ್ರಾಟ್ ಮೋಜ್ ಮೇ 5 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಪುಣೆಯ ಯರವಾಡ ಪ್ರದೇಶದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಲಾಕ್ಡೌನ್ನಿಂದಾಗಿ ಅವರ ಅಂತ್ಯಸಂಸ್ಕಾರಕ್ಕೆ ಕೆಲವೇ ಆಪ್ತರು ಭಾಗಿಯಾಗಿದ್ರು.
Published On - 6:54 am, Fri, 8 May 20