ಪುಣೆ: ಕೊರೊನಾ ಸೋಂಕು ಎಗ್ಗಿಲ್ಲದೆ ಹರಡುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜನರಿಗೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಡ್ಡಾಯ ಮಾಡಿದೆ. ಹಾಗಾಗಿ ಮಾರುಕಟ್ಟೆಗೆ ವಿಧವಿಧವಾದ ಡಿಸೈನರ್ ಮಾಸ್ಕ್ಗಳು ಲಗ್ಗೆ ಇಟ್ಟಿವೆ.
ಆದ್ರೆ, ಮಹಾರಾಷ್ಟ್ರದ ಪುಣೆಯ ನಿವಾಸಿಯೊಬ್ಬರು ಸ್ವಲ್ಪ ಸ್ಟೈಲಿಶ್ ಆಗಿರೋ ಮಾಸ್ಕ್ ಧರಿಸೋಕೆ ಮುಂದಾಗಿದ್ದಾರೆ. ಹೌದು, ಪುಣೆಯ ಪಿಂಪ್ರಿ-ಚಿಂಚವಾಡದ ನಿವಾಸಿ ಶಂಕರ್ ಕುರಾಡೆ ತಮಗಾಗಿ ಅಪ್ಪಟ ಚಿನ್ನದಿಂದ ತಯಾರಿಸಲಾದ ಮಾಸ್ಕ್ ಒಂದನ್ನು ಖರೀದಿಸಿದ್ದಾರೆ. ಇದರ ವಿನ್ಯಾಸ ಎಷ್ಟು ಅದ್ಭುತವಾಗಿದೆ ಎಂದರೆ ಇದನ್ನು ಬಂಗಾರದಿಂದ ಮಾಡಿದ್ರೂ ಮಾಸ್ಕ್ನಲ್ಲಿ ಪುಟ್ಟ ಪುಟ್ಟ ರಂಧ್ರಗಳಿದೆ. ಹಾಗಾಗಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗೋದಿಲ್ಲ ಅಂತಾ ಶಂಕರ್ ಹೇಳಿಕೊಂಡಿದ್ದಾರೆ.
ಅಂದ ಹಾಗೆ, ಈ ಮಾಸ್ಕ್ನ ಬೆಲೆ ಎಷ್ಟು ಗೊತ್ತಾ..? ಬರೋಬ್ಬರಿ 2.89 ಲಕ್ಷ. ಆದರೆ, ಶಂಕರ್ಗೆ ಇದು ಹೆಚ್ಚು ಹೊರೆಯಾಗಿಲ್ಲವಂತೆ. ಬಂಗಾರಕ್ಕಿಂತ ಹೆಚ್ಚು ಬೆಲೆ ಬಾಳುವ ಜೀವದ ಎದುರು ಈ ಮಾಸ್ಕ್ ದುಬಾರಿಯೇ? ಆದರೆ, ಇದು ನಿಜಕ್ಕೂ ರೋಗಾಣುವನ್ನು ತಡೆಯಲು ಎಷ್ಟರ ಮಟ್ಟಿಗೆ ಸಮರ್ಥವಾಗಿ ಕೆಲಸಮಾಡುತ್ತೆ ಅನ್ನೋದು ಎಲ್ಲರ ಸಂಶಯ.