ದೆಹಲಿ, ಪುಣೆಯಲ್ಲಿ ಪೊಲೀಸರ ಬೃಹತ್ ಕಾರ್ಯಾಚರಣೆ, 2,500 ಕೋಟಿ ರೂ. ಮೌಲ್ಯದ ಡ್ರಗ್ಸ್​ ಪತ್ತೆ

ಪೊಲೀಸರು ಪುಣೆ, ದೆಹಲಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ 2,500 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಅಫೀಮು ಸಾಗಿಸುತ್ತಿದ್ದಾಗ ದಾಳಿ ನಡೆಸಿ 2,500 ಕೋಟಿ ರೂ.ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ.

ದೆಹಲಿ, ಪುಣೆಯಲ್ಲಿ ಪೊಲೀಸರ ಬೃಹತ್ ಕಾರ್ಯಾಚರಣೆ, 2,500 ಕೋಟಿ ರೂ. ಮೌಲ್ಯದ ಡ್ರಗ್ಸ್​ ಪತ್ತೆ
ಮಾದಕ ವಸ್ತುಗಳು

Updated on: Feb 21, 2024 | 10:27 AM

ಎರಡು ದಿನಗಳ ಕಾಲ ಪುಣೆ ಮತ್ತು ದೆಹಲಿಯಲ್ಲಿ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಅಂದಾಜು 2,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ 1,100 ಕೆಜಿಯಷ್ಟು ನಿಷೇಧಿತ ಡ್ರಗ್(Drug) ಮೆಫೆಡ್ರೋನ್ (MD) ಅನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಪುಣೆಯಲ್ಲಿ ಮೂವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸುವುದರೊಂದಿಗೆ ಕಾರ್ಯಾಚರಣೆ ಪ್ರಾರಂಭವಾಯಿತು, ಜೊತೆಗೆ 700 ಕೆಜಿ ಮೆಫೆಡ್ರೋನ್ ವಶಪಡಿಸಿಕೊಳ್ಳಲಾಯಿತು. ಈ ವ್ಯಕ್ತಿಗಳ ನಂತರದ ವಿಚಾರಣೆಯು ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿನ ಗೋಡೌನ್‌ಗಳಿಂದ ಹೆಚ್ಚುವರಿ 400 ಕೆಜಿ ಸಿಂಥೆಟಿಕ್ ಉತ್ತೇಜಕವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಪುಣೆಯ ಮಿಯಾವ್, ಮಿಯಾವ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.

100 ಕೋಟಿ ರೂ. ಮೌಲ್ಯದ ಡ್ರಗ್ಸ್​ ಉಪ್ಪಿನ ಪ್ಯಾಕೆಟ್​ನಲ್ಲಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಭವ್ ಅಲಿಯಾಸ್ ಪಿಂತ್ಯ ಭರತ್ ಮಾನೆ, ಅಜಯ್ ಅಮರನಾಥ್ ಕೊರ್ಸಿಯಾ ಮತ್ತು ಹೈದರ್ ಶೇಖ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯಲ್ಲಿ ವಿಶೇಷವಾಗಿ ಕುರ್ಕುಂಭ್ MIDC ಪ್ರದೇಶದಲ್ಲಿ ಸಂಗ್ರಹಿಸಲಾಗಿತ್ತು. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೊಲೀಸರು ಐದು ವ್ಯಕ್ತಿಗಳನ್ನು ಬಂಧಿಸಿದ್ದಾರೆ, ಇದರಲ್ಲಿ ಮೂವರು ಕೊರಿಯರ್‌ಗಳು ಮತ್ತು ಇಬ್ಬರು ವಿಚಾರಣೆಯಲ್ಲಿದ್ದಾರೆ.

ಪೊಲೀಸ್ ಕಮಿಷನರ್ ಕುಮಾರ್ ಮಾತನಾಡಿ, ಭಾನುವಾರ ಮೂವರನ್ನು ಬಂಧಿಸಲಾಗಿದ್ದು, ಅವರಿಂದ 3.85 ಕೋಟಿ ಮೌಲ್ಯದ ಸುಮಾರು 1.75 ಕೆಜಿ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಸಮಯದಲ್ಲಿ ನಾವು ಎರಡು ಗೋದಾಮುಗಳನ್ನು ಕಂಡುಕೊಂಡಿದ್ದೇವೆ, ಅಲ್ಲಿ ಇನ್ನೂ 55 ಕೆಜಿ ಎಂಡಿ ಕಂಡುಬಂದಿದೆ. ಮೂವರ ವಿಚಾರಣೆಯಿಂದ ದೊರೆತ ಮಾಹಿತಿ ಆಧರಿಸಿ ಕುರ್ಕುಂಭ್ ಎಂಐಡಿಸಿ ಪ್ರದೇಶದಲ್ಲಿ ಮತ್ತೊಂದು ಕಾರ್ಯಾಚರಣೆ ನಡೆಸಿ ಅಲ್ಲಿನ ಘಟಕದಿಂದ ಸುಮಾರು 550 ಕೆ.ಜಿ ಎಂ.ಡಿ. ವಶಪಡಿಸಿಕೊಳ್ಳಲಾಗಿದೆ.

ಮತ್ತಷ್ಟು ಓದಿ: ವಶಪಡಿಸಿಕೊಂಡ ಡ್ರಗ್ಸ್​, ಗಾಂಜಾವನ್ನ ಪೋಲೀಸರು ಏನ್ಮಾಡ್ತಾರೆ! ಇಲ್ಲಿದೆ ವಿವರ

ಇದುವರೆಗೆ ಸುಮಾರು 1100 ಕೋಟಿ ರೂಪಾಯಿ ಮೌಲ್ಯದ 600 ಕೆಜಿಗೂ ಹೆಚ್ಚು ಮೆಫೆಡ್ರೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ವಿದೇಶಿ ವ್ಯಕ್ತಿಯೊಬ್ಬ ಮಾರಾಟ ಮಾಡಲು ನೀಡಿದ್ದ ಎಂದು ಒಬ್ಬರು ಬಾಯ್ಬಿಟ್ಟಿದ್ದಾರೆ. ಸ್ಥಳದಲ್ಲಿ 52 ಕೆಜಿ ಮೆಫೆಡ್ರೋನ್ ಮಾದಕ ದ್ರವ್ಯ, ಸೆಂಕ್ ಬ್ಯಾಗ್, ಎರಡು ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ