Porsche Accident: ಅಪಘಾತದ ವೇಳೆ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ; ಅಪ್ರಾಪ್ತನ ತಂದೆಯ ಹೊಸ ವರಸೆ

|

Updated on: May 23, 2024 | 9:20 PM

ಪುಣೆಯಲ್ಲಿ ರಾತ್ರಿ ಕಂಠಪೂರ್ತಿ ಕುಡಿದು ಪೋರ್ಷೆ ಕಾರು ಚಲಾಯಿಸಿದ್ದ ಅಪ್ರಾಪ್ತ ಯುವಕ ಇಬ್ಬರ ಸಾವಿಗೆ ಕಾರಣವಾಗಿದ್ದ. ಈ ಪ್ರಕರಣದಲ್ಲಿ ಆತನ ತಂದೆಯನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ವಿಚಾರಣೆ ವೇಳೆ ಆರೋಪಿ ಬಾಲಕನ ತಂದೆ ವಿಶಾಲ್ ಅಗರ್​ವಾಲ್ ಹೊಸ ಕತೆಯೊಂದನ್ನು ಹೇಳತೊಡಗಿದ್ದಾರೆ.

Porsche Accident: ಅಪಘಾತದ ವೇಳೆ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ; ಅಪ್ರಾಪ್ತನ ತಂದೆಯ ಹೊಸ ವರಸೆ
ಪೋರ್ಷೆ ಕಾರು ಅಪಘಾತ
Follow us on

ಪುಣೆ: ಪುಣೆಯಲ್ಲಿ ರಾತ್ರಿ ಪೋರ್ಷೆ ಕಾರು (Pune Porsche Accident) ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್​ವೇರ್ ಉದ್ಯೋಗಿಗಳು ಸಾವನ್ನಪ್ಪಿದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪಬ್​ನಲ್ಲಿ ಕಂಠಪೂರ್ತಿ ಕುಡಿದು ಕಾರು ಓಡಿಸಿದ್ದ 17 ವರ್ಷದ ಬಾಲಕನಿಗೆ ಸ್ಥಳದಲ್ಲೇ ಜನರಿಂದ ಏಟುಗಳು ಬಿದ್ದಿದ್ದವು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಅಪ್ರಾಪ್ತನ ತಂದೆ ವಿಶಾಲ್ ಅಗರ್​ವಾಲ್ (Vishal Agarwal) ಅಪಘಾತ ನಡೆದ ಸಂದರ್ಭದಲ್ಲಿ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ; ನಮ್ಮ ಕಾರು ಚಾಲಕ ಆ ಕಾರನ್ನು ಓಡಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಯುವಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ಪೊಲೀಸರು ಮತ್ತೆ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ಅಪ್ರಾಪ್ತ ಆರೋಪಿ ಯುವಕ ಮತ್ತು ಅವನ ಇಬ್ಬರು ಸ್ನೇಹಿತರು ಅಪಘಾತದ ಸಮಯದಲ್ಲಿ ಚಾಲಕನೇ ಕಾರು ಓಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ; ಅಪ್ರಾಪ್ತ ಚಾಲಕನ ಜಾಮೀನು ರದ್ದು

ಪುಣೆ ಅಪಘಾತದಲ್ಲಿ ಭಾಗಿಯಾಗಿದ್ದ 17 ವರ್ಷದ ಹುಡುಗ, ಅಪಘಾತ ಸಂಭವಿಸಿದಾಗ ತನ್ನ ಕುಟುಂಬದ ಚಾಲಕ ಕಾರು ಓಡಿಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಅಪಘಾತದ ಸಮಯದಲ್ಲಿ ಅವನೊಂದಿಗಿದ್ದ ಅಪ್ರಾಪ್ತರ ಇಬ್ಬರು ಸ್ನೇಹಿತರು ಆತನ ಹೇಳಿಕೆಯನ್ನು ಬೆಂಬಲಿಸಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ ವಿಶಾಲ್ ಅಗರ್ವಾಲ್ ಅವರ ಪುತ್ರ ಇದ್ದ ಕಾರು ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದರು. ನಿನ್ನೆಯಷ್ಟೇ ಪುಣೆ ನ್ಯಾಯಾಲಯವು ಆತನಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಆತನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲು ಆದೇಶಿಸಿತ್ತು.

ಇದನ್ನೂ ಓದಿ: ಏಳು ತಿಂಗಳ ಹಿಂದೆ ಇಬ್ಬರ ಮೇಲೆ ಕಾರು ಹತ್ತಿಸಿದ್ದ 15 ವರ್ಷದ ಬಾಲಕನಿಂದ ಮತ್ತೆ ಅಪಘಾತ

ಅಪಘಾತ ಸಂಭವಿಸಿದಾಗ ತಾನೇ ಪೋರ್ಷೆ ಚಲಾಯಿಸುತ್ತಿದ್ದೆ ಎಂದು ಕುಟುಂಬದ ಚಾಲಕ ತನ್ನ ಮೊದಲ ಹೇಳಿಕೆಯಲ್ಲಿ ಹೇಳಿಕೊಂಡಿದ್ದ. ವಿಶಾಲ್ ಅಗರ್ವಾಲ್ ಅವರು ಕೂಡ ಪೋರ್ಷೆ ಕಾರನ್ನು ಚಾಲಕ ಓಡಿಸುತ್ತಿದ್ದ ಎಂದು ಹೇಳಿಕೊಂಡಿದ್ದರು.

ಈಗಾಗಲೇ ವಿಶಾಲ್ ಅಗರ್ವಾಲ್ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅಪಘಾತದ ವಿವರಗಳನ್ನು ಬಹಿರಂಗಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಅಪರಾಧ ವಿಭಾಗವು 17 ವರ್ಷದ ಬಾಲಕನ ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಕೂಡ ವಿಚಾರಣೆ ನಡೆಸುತ್ತಿದೆ. ಅವರ ಮಗ ಮತ್ತು ಮೊಮ್ಮಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ