AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿಯ ‘ಲಾಠಿ’ ಮ್ಯಾಜಿಕ್‌ಗೆ ಬಾಲಿವುಡ್‌ ಫಿದಾ! ಅಡ್ರೆಸ್‌ ಕೊಡಿ ಅಂದ್ರು ಸೋನು ಸೂದ್‌..

[lazy-load-videos-and-sticky-control id=”g0Z86zK1YbE”] ಪುಣೆ: ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಗಲ್ಲಿ ಗಲ್ಲಿಯಲ್ಲಿ ವಿಧ ವಿಧವಾದ ಪ್ರತಿಭೆಗಳು ಸಿಗುತ್ತವೆ. ಆದ್ರೆ ಹುಡುಕಬೇಕಷ್ಟೆ. ಆದ್ರೆ ಇಂಥ ಪ್ರತಿಭೆಗಳನ್ನ ಹುಡುಕೋದು ಈಗ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ ಯಾಕಂದ್ರೆ ಇದು ಇಂಟರ್‌ನೆಟ್‌ ಯುಗ. ಥಟ್ಟಂತ ಪೋಟೋನೋ, ವಿಡಿಯೋನೋ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು. ಕ್ಷಣಾರ್ಧದಲ್ಲಿ ವೈರಲ್‌ ಆಗುತ್ತೆ. ಇಂಥದ್ದೇ ಒಂದು ಘಟನೆ ಈಗ ಪುಣೆಯ ಅಜ್ಜಿಯನ್ನು ದಿನಬೆಳಗಾಗುವುದರಲ್ಲಿ ಸ್ಟಾರ್‌ ಮಾಡಿದೆ. ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಬಾಲಿವುಡ್‌ ಫಿದಾ ಹೌದು ಪುಣೆಯ […]

ಅಜ್ಜಿಯ 'ಲಾಠಿ' ಮ್ಯಾಜಿಕ್‌ಗೆ ಬಾಲಿವುಡ್‌ ಫಿದಾ! ಅಡ್ರೆಸ್‌ ಕೊಡಿ ಅಂದ್ರು ಸೋನು ಸೂದ್‌..
Guru
| Updated By: |

Updated on:Jul 26, 2020 | 12:40 AM

Share

[lazy-load-videos-and-sticky-control id=”g0Z86zK1YbE”]

ಪುಣೆ: ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಗಲ್ಲಿ ಗಲ್ಲಿಯಲ್ಲಿ ವಿಧ ವಿಧವಾದ ಪ್ರತಿಭೆಗಳು ಸಿಗುತ್ತವೆ. ಆದ್ರೆ ಹುಡುಕಬೇಕಷ್ಟೆ. ಆದ್ರೆ ಇಂಥ ಪ್ರತಿಭೆಗಳನ್ನ ಹುಡುಕೋದು ಈಗ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ ಯಾಕಂದ್ರೆ ಇದು ಇಂಟರ್‌ನೆಟ್‌ ಯುಗ. ಥಟ್ಟಂತ ಪೋಟೋನೋ, ವಿಡಿಯೋನೋ ಮಾಡಿ ಸೋಷಿಯಲ್‌ ಮಿಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು. ಕ್ಷಣಾರ್ಧದಲ್ಲಿ ವೈರಲ್‌ ಆಗುತ್ತೆ. ಇಂಥದ್ದೇ ಒಂದು ಘಟನೆ ಈಗ ಪುಣೆಯ ಅಜ್ಜಿಯನ್ನು ದಿನಬೆಳಗಾಗುವುದರಲ್ಲಿ ಸ್ಟಾರ್‌ ಮಾಡಿದೆ.

ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಬಾಲಿವುಡ್‌ ಫಿದಾ ಹೌದು ಪುಣೆಯ ಗಲ್ಲಿಯೊಂದರಲ್ಲಿ ಲಾಠಿ ಕತ್ತಿ ಎನ್ನುವ ಕಲೆಯನ್ನ ಪ್ರದರ್ಶನ ಮಾಡುತ್ತಾ ಜೀವನೋಪಾಯ ಮಾಡುವ ಅಜ್ಜಿಯ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಷ್ಟೇ ಅಲ್ಲ ಸ್ವತಃ ಬಾಲಿವುಡ್‌ ಹಾಗೂ ಸೌತ್‌ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಸೋನು ಸೂದ್‌ ಕೂಡಾ ಅಜ್ಜಿಯ ಈ ಲಾಠಿ ಕತ್ತಿ ಮ್ಯಾಜಿಕ್‌ಗೆ ಮಾರು ಹೋಗಿದ್ದಾನೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸೋನು ಸೂದ್‌, ಈ ಅಜ್ಜಿಯ ವಿಳಾಸ ಯಾರ ಹತ್ತಿರಾವಾದ್ರೂ ಇದ್ರೆ ನನಗೆ ಕಳಿಸಿ. ನಾನು ಅಜ್ಜಿಯೊಂದಿಗೆ ಸೇರಿ ಮಹಿಳೆಯರ ಸೆಲ್ಫ್‌ ಡಿಫೆನ್ಸ್‌ ಸ್ಕೂಲ್‌ ಓಪನ್‌ ಮಾಡುತ್ತೆನೆ ಎಂದಿದ್ದಾನೆ.

ಹರಿಯಾಣಾದ ಶೂಟರ್‌ ಅಜ್ಜಿ ಚಂದ್ರು ತೋಮರ್‌ ಮೆಚ್ಚುಗೆ ಇಷ್ಟೇ ಅಲ್ಲ ಅಜ್ಜಿಯ ಈ ಖ್ಯಾತಿ ಈಗ ದೇಶ ವಿದೇಶಗಳಿಗೂ ಹಬ್ಬಿದೆ. ‘ಸಾಂಡ್‌ ಕಿ ಆಂಖ್‌’ ಸಿನಮಾಕ್ಕೆ ಮೂಲ ಪ್ರೇರಣೆಯಾಗಿರುವ ಹರಿಯಾಣಾದ ಖ್ಯಾತ ಶೂಟರ್‌ ಅಜ್ಜಿ ಚಂದ್ರೂ ತೋಮರ್‌ ಕೂಡಾ ಪುಣೆಯ ಅಜ್ಜಿಯ ಲಾಠಿ ಕತ್ತಿಯ ಮ್ಯಾಜಿಕ್‌ಗೆ ಮಾರು ಹೋಗಿದ್ದಾಳೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಚಂದ್ರೂ ತೋಮರ್‌ ಈ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಜಯ್‌ ಹೋ, ತನ್ನ ಲಾಠಿಯಿಂದ ಈಕೆ ಯಾರ ನೀರನ್ನು ಬೇಕಾದ್ರೂ ಇಳಿಸಬಲ್ಲಳು ಎಂದು ಟ್ವೀಟ್‌ ಮಾಡಿದ್ದಾಳೆ.

ಲಾಠಿ ಕಲೆಯಿಂದಲೇ ಅಜ್ಜಿಯ ಜೀವನೋಪಾಯ ಅಂದ ಹಾಗೆ ಈ ಅಜ್ಜಿಯ ವಯಸ್ಸು ಈಗ 85 ವರ್ಷ. ಈಕೆಯ ಹೆಸರು ಶಾಂತಾಬಾಯಿ ಪವಾರ್‌. ಪುಣೆಯ ನಿಮ್ರತಿ ಎನ್ನುವ ಏರಿಯಾದ ಜೋಪಡಿ ಪಟ್ಟಿಯಲ್ಲಿ ವಾಸವಾಗಿದ್ದಾಳೆ. ಈಕೆ ಎಂಟು  ವರ್ಷದ ಬಾಲಕಿಯಾಗಿದ್ದಾಗ ಈ ಕಲೆಯನ್ನ ಆಕೆಯ ತಂದೆಯಿಂದ ಕಲಿತಳಂತೆ. ಆಗಿನಿಂದ ಇದೇ ರೀತಿ ಪುಣೆಯ ಗಲ್ಲಿ ಗಲ್ಲಿಗಳಲ್ಲಿ ತನ್ನ ಕಲೆಯನ್ನ ಪ್ರದರ್ಶನ ಮಾಡಿ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾಳೆ. ಅಷ್ಟೇ ಅಲ್ಲ ಇದೇ ಆದಾಯದಲ್ಲಿಯೇ ಮೊಮ್ಮಕ್ಕಳನ್ನ ಶಾಲೆಗೆ ಕಳಿಸುತ್ತಿದ್ದು, ಓದಿನ ಎಲ್ಲ ಖರ್ಚನ್ನುೂ ಭರಿಸುತ್ತಾಳಂತೆ.

ಪುಣೆಯ ಗಲ್ಲಿಗಳೇ ಅಜ್ಜಿಯ ಕರ್ಮಭೂಮಿ ಈ ಅಜ್ಜಿ ಕೊರೊನಾದ ಸಂಕಷ್ಟದ ಸಮಯದಲ್ಲೂ ಪುಣೆಯ ರಸ್ತೆಗಳಲ್ಲಿ ತನ್ನ ಕಲೆಯನ್ನ ಪ್ರದರ್ಶನ ಮಾಡುತ್ತಿದ್ದಳು. ಇದು ಅವಳಿಗೆ ಅನಿವಾರ್ಯ ಕೂಡಾ ಯಾಕಂದ್ರೆ ಇದೇ ಅವಳಿಗೆ ಬದುಕಿನ ಆಧಾರ. ಇದನ್ನು ಮೊದಲು ಗಮಿಸಿದ ಹತಿಂದರ್‌ ಎನ್ನುವ ವ್ಯಕ್ತಿ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಟ್ವೀಟ್‌ ಮಾಡಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಇದು ವೈರಲ್‌ ಆಗಿದೆ. ಕೇವಲ ಸೋನು ಸೂದ್‌ ಮಾತ್ರವಲ್ಲ ಮತ್ತೊಬ್ಬ ಬಾಲಿವುಡ್‌ ನಟ ರಿತೇಶ್‌ ದೇಶಮುಖ್‌ ಕೂಡಾ ಇದನ್ನು ಗಮನಿಸಿ ತನ್ನ ಸಹಾಯ ಹಸ್ತ ಚಾಚಿದ್ದಾನೆ.

Published On - 8:37 pm, Fri, 24 July 20