ದೆಹಲಿ ನಂತರ ಪಂಜಾಬ್‌ನ ಅಮೃತಸರ ಬಳಿ ಭೂಕಂಪ

| Updated By: Rakesh Nayak Manchi

Updated on: Nov 14, 2022 | 7:33 AM

ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಕೆಲವು ದಿನಗಳ ನಂತರ ಇಂದು ನಸುಕಿನ ಜಾವ ಪಂಜಾಬ್​ನಲ್ಲಿ ಭೂಕಂಪ ಸಂಭವಿಸಿದೆ.

ದೆಹಲಿ ನಂತರ ಪಂಜಾಬ್‌ನ ಅಮೃತಸರ ಬಳಿ ಭೂಕಂಪ
ದೆಹಲಿ ನಂತರ ಪಂಜಾಬ್‌ನ ಅಮೃತಸರ ಬಳಿ ಭೂಕಂಪ
Follow us on

ದೆಹಲಿ: ಸೋಮವಾರ (ನ.14) ಮುಂಜಾನೆ ಪಂಜಾಬ್‌ನ ಅಮೃತಸರ (Amritsar) ಬಳಿ 4.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ. ಬುಧವಾರ ಮತ್ತು ಶನಿವಾರದಂದು ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಕೆಲವು ದಿನಗಳ ನಂತರ ಈ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology-NCS)ದ ಪ್ರಕಾರ ಸೋಮವಾರ ನಸುಕಿನ 3.42ರ ಸುಮಾರಿಗೆ 120 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಪಂಜಾಬ್​ನಲ್ಲಿನ ಭೂಕಂಪದ ಬಗ್ಗೆ ಟ್ವೀಟ್ ಮಾಡಿದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ, ಇಂದು (ನ.14) 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಪಂಜಾಬ್​ನ ಕೇಂದ್ರವಾಗಿರುವ ಅಮೃತಸರದ 145 ಕಿ.ಮೀ ದೂರದಲ್ಲಿ ಮುಂಜಾನೆ 3:42:27ರ ಸಮಯ್ಕೆ 31.95 ಲ್ಯಾಟ್, 73.38 ಉದ್ದಕ್ಕೆ ಮತ್ತು 120 ಕಿಮೀ ಆಳದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ತಿಳಿದಿದೆ.

ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ನ.12 ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ. ಇದು ವಾರದಲ್ಲಿ 2ನೇ ಬಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳವಾಗಿದೆ. ನ್ಯೂ ತೆಹ್ರಿ, ಪಿಥೋರಗಢ್, ಬಾಗೇಶ್ವರ್, ಪೌರಿ ಮತ್ತು ಇತರ ಪಟ್ಟಣಗಳು ​​ಸೇರಿದಂತೆ ಉತ್ತರಾಖಂಡದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪದಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ವರದಿಯಾಗಿಲ್ಲ. ಇದಕ್ಕೂ ಮುನ್ನ ನ.8ರಂದು ನೇಪಾಳದಲ್ಲಿ ಸರಿಸುಮಾರು 6.3 ತೀವ್ರತೆಯಷ್ಟು ಭೂಕಂಪ ಸಂಭವಿಸಿತ್ತು. ಇದರಿಂದ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದರು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:33 am, Mon, 14 November 22