ಹೋಟೆಲ್​ನಲ್ಲಿ ಬಿಜೆಪಿ ಕಾರ್ಯಕ್ರಮ: ರೈತ ಪ್ರತಿಭಟನಾಕಾರರನ್ನು ನೋಡಿ ಹಿಂಬಾಗಿಲಿನಿಂದ ಪರಾರಿಯಾದ ನಾಯಕರು!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 9:42 PM

ಪ್ರತಿಭಟನಾನಿರತ ರೈತರು ಹೋಟೆಲ್​ಗೆ ಮುತ್ತಿಗೆ ಹಾಕಲು ಪ್ರಯತನ್ನಿಸಿದ್ದು, ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ!

ಹೋಟೆಲ್​ನಲ್ಲಿ ಬಿಜೆಪಿ ಕಾರ್ಯಕ್ರಮ: ರೈತ ಪ್ರತಿಭಟನಾಕಾರರನ್ನು ನೋಡಿ ಹಿಂಬಾಗಿಲಿನಿಂದ ಪರಾರಿಯಾದ ನಾಯಕರು!
ಸಾಂದರ್ಭಿಕ ಚಿತ್ರ
Follow us on

ಅಮೃತ​ಸರ: ಇಂದು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ವಿಶೇಷ ದಿನವನ್ನು ಆಚರಣೆ ಮಾಡಲು ಪಂಜಾಬ್​ ಬಿಜೆಪಿ ನಾಯಕರು ಹೋಟೆಲ್​ ಒಂದರಲ್ಲಿ ಸೇರಿದ್ದರು. ಈ ವೇಳೆ ಪ್ರತಿಭಟನಾನಿರತ ರೈತರು ಹೋಟೆಲ್​ಗೆ ಮುತ್ತಿಗೆ ಹಾಕಲು ಪ್ರಯತನ್ನಿಸಿದ್ದು, ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ!

ಫಾಗ್ವಾರದ ಹೋಟೆಲ್​ ಒಂದರಲ್ಲಿ ಬಿಜೆಪಿ ನಾಯಕರು ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಬಿಜೆಪಿ ನಾಯಕರಿಗೆ ಪೊಲೀಸ್​ ಭದ್ರತೆ ಕೂಡ ಇತ್ತು. ಇದನ್ನು ಅರಿತ ಭಾರ್ತಿ ಕಿಸಾನ್​ ಯೂನಿಯನ್​ ಹೋಟೆಲ್​ ಹೊರ ಭಾಗದಲ್ಲಿ ಪ್ರತಿಭಟೆ ನಡೆಸಿದ್ದಾರೆ.

ಕೆಲವರು ಒಳಗೆ ಸೇರಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮಕ್ಕೆ ಆಗಮಿಸುವವರಿದ್ದರು. ಕೆಲ ಬಿಜೆಪಿ ನಾಯಕರನ್ನು ಒಳಗೆ ಬಿಡಲು ರೈತ ಪ್ರತಿಭಟನಾಕಾರರು ತಡೆವೊಡ್ಡಿದ್ದಾರೆ. ಕೆಲವರು ಹೋಟೆಲ್​ ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಬಿಜೆಪಿ ನಾಯಕರು ಹೋಟೆಲ್​ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೇಳಿ ಬಂದಿದೆ.

ಈ ಹೋಟೆಲ್​ ಬಿಜೆಪಿ ಕಾರ್ಯಕರ್ತನೋರ್ವನಿಗೆ ಸೇರಿದ್ದಾಗಿದೆ. ಇವರು ಚಿಕನ್​ ಉತ್ಪನ್ನ ತಯಾರಿಸುವ ಉದ್ಯಮ ಕೂಡ ನಡೆಸುತ್ತಿದ್ದಾರೆ.ಈ ಉತ್ಪನ್ನಗಳನ್ನು ಈಗ ಬ್ಯಾನ್​ ಮಾಡುವ ಬೆದರಿಕೆಯನ್ನು ರೈತರು ಒಡ್ಡಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಪೂರೈಸಿದೆ. ಸರ್ಕಾರ ಈಗಾಗಲೇ ಕೆಲ ಸುತ್ತಿನ ಮಾತುಕತೆ ನಡೆಸಿದರೂ ಅದು ಫಲ ಕೊಡಲಿಲ್ಲ. ಈ ಬೆನ್ನಲ್ಲೇ ಪ್ರತಿಭಟನಾ ರೈತರು, ಸರ್ಕಾರ ಮುಕ್ತ ಮನಸ್ಸಿನಿಂದ ಬಂದರೆ ನಾವು ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ರವಾನೆ ಮಾಡಿದ್ದರು.

ಸರ್ಕಾರ ಮುಕ್ತ ಮನಸ್ಸಿನಿಂದ ಬಂದರೆ ನಾವು ಮಾತುಕತೆಗೆ ಸಿದ್ಧ: ಪ್ರತಿಭಟನಾ ರೈತರ ಸಂದೇಶ