ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಹೊಸದಾಗಿ ನೇಮಕಗೊಂಡ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಭವನದಲ್ಲಿ ಭೇಟಿಯಾಗಿ ಚಹಾ ಸೇವಿಸಿದ್ದಾರೆ. ತಿಂಗಳುಗಳಿಂದ ಇವರಿಬ್ಬರ ನಡುವೆ ರಾಜಕೀಯ ಜಟಾಪಟಿ ನಡೆದಿದ್ದು ಈ ಭೇಟಿ ಮೂಲಕ ಅವರಿಬ್ಬರ ಬಿಕ್ಕಟ್ಟು ಪರಿಹಾರವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
“ಪಂಜಾಬ್ ಬಿಕ್ಕಟ್ಟು ಬಗೆಹರಿದಿದೆ, ನೀವು ನೋಡಬಹುದು” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಹೇಳಿರುವುದಾಗಿ ಎಂದು ಎಎನ್‌ಐ ತಿಳಿಸಿದೆ.
Punjab crisis has been resolved, you can see: Congress leader Rahul Gandhi pic.twitter.com/1pzvs5zrEB
— ANI (@ANI) July 23, 2021
ಸಿಧು ಅವರು ತಲುಪಿದ ಕೆಲವೇ ನಿಮಿಷಗಳ ನಂತರ ಸಿಂಗ್ ಪಂಜಾಬ್ ಭವನಕ್ಕೆ ಬಂದರು ಎಂದು ಎನ್ಡಿಟಿವಿ ವರದಿ ಮಾಡಿದೆ .ಕ್ರಿಕೆಟಿಗ-ರಾಜಕಾರಣಿ ಸಿಧು ಇಂದು ಅಧಿಕಾರ ವಹಿಸಿಕೊಳ್ಳುವ ಮುನ್ನ ಈ ಚಹಾ ಪಾರ್ಟಿ ನಡೆದಿದೆ. ಮುಖ್ಯಮಂತ್ರಿಯನ್ನು ಟೀಕಿಸುತ್ತಿದ್ದ ಸಿಧು ಅವರಿಗೆ ಈ ವಾರದ ಆರಂಭದಲ್ಲಿ ಪದೋನ್ನತಿ ನೀಡಲಾಯಿತು. ಅವರು ಸುನಿಲ್ ಜಖರ್ ಬದಲಿಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡರು.
Chandigarh: Punjab Congress chief Navjot Singh Sidhu arrives at Punjab Bhawan.
CM Amarinder Singh has invited party’s MLAs, MPs & senior functionaries from the state for tea. They’ll go to Punjab Congress Bhawan for installation of new Punjab Pradesh Congress Committee team. pic.twitter.com/MopjRtI5cF
— ANI (@ANI) July 23, 2021
ಕ್ರಿಕೆಟಿಗ-ರಾಜಕಾರಣಿ ಮುಖ್ಯಮಂತ್ರಿ ಸಿಂಗ್ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದರು ಮತ್ತು ಪಕ್ಷದ ಕೇಂದ್ರ ನಾಯಕತ್ವಕ್ಕೂ ಇದನ್ನೂ ಮನವರಿಕೆ ಮಾಡಿದ್ದರು. ಸಿಂಗ್ ಅವರ ಬಡ್ತಿ ವಿಷಯದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನನ್ನ ಸಹಮತ ಇದೆ ಎಂದಿದ್ದರು ಸಿಂಗ್.
Punjab CM @capt_amarinder has invited all @INCPunjab MLAs, MPs and senior party functionaries at Punjab Bhawan for tea at 10 am on Friday. They will all then go to Punjab Congress Bhawan together from there for the installation of the new PPCC team. pic.twitter.com/fdm2XXprlP
— Raveen Thukral (@RT_MediaAdvPBCM) July 22, 2021
ನೇಮಕಾತಿಯ ನಂತರ ಸಿಧು ಅವರು ಇಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿ ಮುಖ್ಯಮಂತ್ರಿಗೆ ಪತ್ರ ಬರೆದರು. ತಮ್ಮ ಬಡ್ತಿ ವಿಚಾರದಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಪಾತ್ರವನ್ನು ಒತ್ತಿ ಹೇಳಿ ಸಿಧು,ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, “ನನಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ, ಜನರ ಪರವಾದ ಅಜೆಂಡಾ ಮಾತ್ರ ಇದೆ. ಹೀಗಾಗಿ, ನಮ್ಮ ಪಂಜಾಬ್ ಕಾಂಗ್ರೆಸ್ ಕುಟುಂಬದ ಹಿರಿಯರಾಗಿ, ದಯವಿಟ್ಟು ನೀವು ಬನ್ನಿ ಪಿಸಿಸಿಯ ಹೊಸ ತಂಡವನ್ನು ಆಶೀರ್ವದಿಸಿ ಎಂದಿದ್ದಾರೆ.
ಇದಾದನಂತರ ಮಧ್ಯಾಹ್ನ ಟ್ವೀಟ್ ಮಾಡಿದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್, “ಪಂಜಾಬ್ ಸಿಎಂ ಅವರು ಪಂಜಾಬ್ ಭವನದಲ್ಲಿ ಎಲ್ಲಾ ಶಾಸಕರು, ಸಂಸದರು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರನ್ನು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಚಹಾಕ್ಕಾಗಿ ಆಹ್ವಾನಿಸಿದ್ದಾರೆ. ಹೊಸ ಪಿಪಿಸಿಸಿ ತಂಡದ ಸ್ಥಾಪನೆಗಾಗಿ ನಂತರ ಅವರೆಲ್ಲರೂ ಒಟ್ಟಾಗಿ ಪಂಜಾಬ್ ಕಾಂಗ್ರೆಸ್ ಭವನಕ್ಕೆ ಹೋಗುತ್ತಾರೆ ಎಂದಿದ್ದಾರೆ.
Reports of @sherryontopp
seeking time to meet @capt_amarinder are completely false. No time has been sought whatsoever. No change in stance… CM won’t meet #NavjotSinghSidhu till latter publicly apologises for his personally derogatory social media attacks against him. pic.twitter.com/dJvHh8Xo0h— Raveen Thukral (@RT_MediaAdvPBCM) July 20, 2021
ಟೀಕಾ ಪ್ರಹಾರ ಮಾಡಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸದ ಹೊರತು ಸಿಧು ಅವರನ್ನು ಭೇಟಿಯಾಗಲು ಸಿಂಗ್ ನಿರಾಕರಿಸಿದ್ದರು. ಸಿಧು ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದ ನಂತರ ಸಿಂಗ್ ಕೂಡಾ ಹಠ ಬಿಟ್ಟು ಭೇಟಿಗೆ ಮುಂದಾದರು. ಮುಂದಿನ ವರ್ಷ ಪಂಜಾಬ್ನಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು- ಅಮರೀಂದರ್ ಸಿಂಗ್ ನಡುವಿನ ಶೀತಲ ಸಮರ ಅಂತ್ಯ; ನಾಳೆಯ ಟೀ ಪಾರ್ಟಿಗೆ ಹೋಗ್ತಾರಂತೆ ಪಂಜಾಬ್ ಸಿಎಂ
(Punjab CM Amarinder Singh state Congress chief Navjot Singh Sidhu met today at Punjab Bhawan over a cup of tea)
Published On - 12:19 pm, Fri, 23 July 21