ಚಂಡೀಗಢ: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಸುಮಾರು ಎರಡು ತಿಂಗಳ ಪ್ರತಿಭಟನೆಯ ನಂತರ ಪಂಜಾಬ್ನ ವಿವಿಧ ರೈತ ಸಂಘಟನೆಗಳು ರೈಲು ಸಂಚಾರ ತಡೆಯನ್ನು ಇಂದು ಸಂಜೆ ವೇಳೆಗೆ ತೆರವುಗೊಳಿಸಿ, ರೈಲು ಸೇವೆಗೆ ಅವಕಾಶ ನೀಡಲು ಮುಂದಾಗಿದೆ.
ಸೆಪ್ಟೆಂಬರ್ 24 ರಿಂದ ರೈತರು ಆರಂಭಿಸಿದ ರೈಲ್ವೆ ರೋಕೋ ಪ್ರತಿಭಟನೆ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ರೈಲು ಸೇವೆ ಸ್ಥಗಿತಗೊಂಡಿತ್ತು. ಆದರೆ, ಪಂಜಾಬ್ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರೈತ ಸಂಘಟನೆಗಳಿಗೆ ಸರ್ಕಾರ ಮನವಿ ಸಲ್ಲಿಸಿತು. ಹಾಗಾಗಿ, ಸರ್ಕಾರದ ಮನವಿಗೆ ಸ್ಪಂದಿಸಿದ ಸಂಘಟನೆಗಳು ಸರಕು ಮತ್ತು ಪ್ರಯಾಣಿಕ ಟ್ರೈನ್ಗಳ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಮಂಗಳವಾರದಿಂದ 17 ಮೇಲ್ ಮತ್ತು ಎಕ್ಸ್ಪ್ರೆಸ್ ಟ್ರೈನ್ಗಳೊಂದಿಗೆ ರೈಲು ಸೇವೆಗಳು ಪುನರಾರಂಭಗೊಳಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.