AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆ ಭಯ: ಮುಂಜಾಗ್ರತಾ ಕ್ರಮ, ಎಲ್ಲಾ ಬಂದ್ ಬಂದ್.. ಎಲ್ಲೆಲ್ಲಿ?

ದೆಹಲಿ: ವರ್ಷಾಂತ್ಯಕ್ಕೆ ವ್ಯಾಕ್ಸಿನ್ ಬರಲಿ, ಬರದಿರಲಿ ಕೊರೊನಾ ತಡೆಗಟ್ಟಲು ಮತ್ತೆ ಲಾಕ್​ಡೌನ್ ನಿಯಮಗಳನ್ನು ಹಲವು ರಾಜ್ಯಗಳು ಜಾರಿಗೊಳಿಸಿವೆ. ದೇಶದೆಲ್ಲೆಡೆ ಕೊರೊನಾ ಎರಡನೆ ಅಲೆ ಏಳುವ ಭಯದ ನಡುವೆಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ದೆಹಲಿಯ ಎರಡು ಮಾರುಕಟ್ಟೆ ಬಂದ್! ಸದಾ ಗಿಜಿಗುಡುತ್ತಿದ್ದ ದೆಹಲಿಯ ಪಂಜಾಬ್ ಬಸ್ತಿ ಮತ್ತು ಜನತಾ ಮಾರುಕಟ್ಟೆಗಳನ್ನು ನವೆಂಬರ್ 30ರವರೆಗೆ ಮುಚ್ಚುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಸಾಮಾಜಿಕ ಅಂತರ ನಿಯಮಗಳನ್ನು ಸಾರ್ವಜನಿಕರು ಪಾಲಿಸದ ಕಾರಣ ಈ ನಿಯಮ ಜಾರಿಗೊಳಿಸಲಾಗಿದೆ. ಟೆಸ್ಟ್ ಮಾಡಿಸದವರಿಗೆ […]

ಕೊರೊನಾ ಎರಡನೇ ಅಲೆ ಭಯ: ಮುಂಜಾಗ್ರತಾ ಕ್ರಮ, ಎಲ್ಲಾ ಬಂದ್ ಬಂದ್.. ಎಲ್ಲೆಲ್ಲಿ?
Follow us
ಆಯೇಷಾ ಬಾನು
|

Updated on:Nov 23, 2020 | 12:21 PM

ದೆಹಲಿ: ವರ್ಷಾಂತ್ಯಕ್ಕೆ ವ್ಯಾಕ್ಸಿನ್ ಬರಲಿ, ಬರದಿರಲಿ ಕೊರೊನಾ ತಡೆಗಟ್ಟಲು ಮತ್ತೆ ಲಾಕ್​ಡೌನ್ ನಿಯಮಗಳನ್ನು ಹಲವು ರಾಜ್ಯಗಳು ಜಾರಿಗೊಳಿಸಿವೆ. ದೇಶದೆಲ್ಲೆಡೆ ಕೊರೊನಾ ಎರಡನೆ ಅಲೆ ಏಳುವ ಭಯದ ನಡುವೆಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ.

ದೆಹಲಿಯ ಎರಡು ಮಾರುಕಟ್ಟೆ ಬಂದ್! ಸದಾ ಗಿಜಿಗುಡುತ್ತಿದ್ದ ದೆಹಲಿಯ ಪಂಜಾಬ್ ಬಸ್ತಿ ಮತ್ತು ಜನತಾ ಮಾರುಕಟ್ಟೆಗಳನ್ನು ನವೆಂಬರ್ 30ರವರೆಗೆ ಮುಚ್ಚುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಸಾಮಾಜಿಕ ಅಂತರ ನಿಯಮಗಳನ್ನು ಸಾರ್ವಜನಿಕರು ಪಾಲಿಸದ ಕಾರಣ ಈ ನಿಯಮ ಜಾರಿಗೊಳಿಸಲಾಗಿದೆ.

ಟೆಸ್ಟ್ ಮಾಡಿಸದವರಿಗೆ ಪ್ರವೇಶವಿಲ್ಲ, ಆದಿತ್ಯನಾಥ್ ಕಟ್ಟುನಿಟ್ಟಿನ ನಿರ್ಧಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ಪಕ್ಕದ ಯುಪಿ ಸರ್ಕಾರ ಎಚ್ಚೆತ್ತಿದೆ. ದೆಹಲಿಯಿಂದ ಬಸ್, ರೈಲು ಮತ್ತು ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ಒಳಗಾಗಲು ಸೂಚಿಸಿದೆ. ಟೆಸ್ಟ್ ಮಾಡಿಸದ ಪ್ರಯಾಣಿಕರಿಗೆ ಉತ್ತರ ಪ್ರದೇಶ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.

ಲಾಕ್​ಡೌನ್ ಸುಳಿವು ನೀಡಿದ ಪವಾರ್ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ರಾಜ್ಯದಲ್ಲಿ ಲಾಕ್​ಡೌನ್ ಘೋಷಿಸುವ ಸುಳಿವು ನೀಡಿದ್ದಾರೆ. ದೀಪಾವಳಿಯ ಆಚರಣೆಗೆ ಜನಜಂಗುಳಿ ಹೆಚ್ಚಿತ್ತು. ಸಾಮಾಜಿಕ ಅಂತರವನ್ನು ಪಾಲಿಸದೇ ಜನರು ಹಬ್ಬ ಆಚರಿಸಿದ್ದರು. ಹೀಗಾಗಿ, ಲಾಕ್​ಡೌನ್ ಘೋಷಿಸುವ ಕುರಿತು ಎಲ್ಲ ಇಲಾಖೆಗಳ ಜೊತೆ ಸಂಪರ್ಕದಲ್ಲಿದ್ದೇನೆ. 8-10 ದಿನಗಳಲ್ಲಿ ಈ ಕುರಿತು ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Published On - 11:39 am, Mon, 23 November 20

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್