‘ಭಾರತ-ಪಾಕ್-ಬಾಂಗ್ಲಾ ಸೇರಿ ಒಂದು ರಾಷ್ಟ್ರವಾಗಲಿ..’ NCP ನವಾಬ್ ಮಲ್ಲಿಕ್ ಆಶಯ
ಮುಂಬೈ: ಮೊನ್ನೆಯಷ್ಟೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮುಂದೊಂದು ದಿನ ಕರಾಚಿಯೂ ಭಾರತಕ್ಕೆ ಸೇರಲಿದೆ ಎಂದು ತಮ್ಮ ಅಖಂಡ ಭಾರತದ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದ ಬೆನ್ನಲ್ಲೇ, ಎನ್ಸಿಪಿ ಮುಖ್ಯಸ್ಥ ನವಾಬ್ ಮಲ್ಲಿಕ್ ತಮ್ಮ ಅಖಂಡ ಭಾರತದ ಪರಿಕಲ್ಪನೆ ಏನೆಂಬುದನ್ನು ಹೇಳಿದ್ದಾರೆ. ದೇವೇಂದ್ರ ಫಡ್ನವೀಸ್ ಕರಾಚಿ ಭಾರತದ ಭಾಗವಾಗಬಹುದು ಎಂದಿದ್ದಾರೆ. ಆದರೆ ನಾವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮೂರೂ ಸೇರಬೇಕು ಎಂದು ಹೇಳುತ್ತೇವೆ. ಈ ಮೂರೂ ದೇಶಗಳನ್ನು ಸೇರಿಸಿ ಒಂದು ರಾಷ್ಟ್ರ ನಿರ್ಮಾಣ ಮಾಡಲು […]
ಮುಂಬೈ: ಮೊನ್ನೆಯಷ್ಟೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮುಂದೊಂದು ದಿನ ಕರಾಚಿಯೂ ಭಾರತಕ್ಕೆ ಸೇರಲಿದೆ ಎಂದು ತಮ್ಮ ಅಖಂಡ ಭಾರತದ ಪರಿಕಲ್ಪನೆಯನ್ನು ಪ್ರಸ್ತುತ ಪಡಿಸಿದ ಬೆನ್ನಲ್ಲೇ, ಎನ್ಸಿಪಿ ಮುಖ್ಯಸ್ಥ ನವಾಬ್ ಮಲ್ಲಿಕ್ ತಮ್ಮ ಅಖಂಡ ಭಾರತದ ಪರಿಕಲ್ಪನೆ ಏನೆಂಬುದನ್ನು ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್ ಕರಾಚಿ ಭಾರತದ ಭಾಗವಾಗಬಹುದು ಎಂದಿದ್ದಾರೆ. ಆದರೆ ನಾವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮೂರೂ ಸೇರಬೇಕು ಎಂದು ಹೇಳುತ್ತೇವೆ. ಈ ಮೂರೂ ದೇಶಗಳನ್ನು ಸೇರಿಸಿ ಒಂದು ರಾಷ್ಟ್ರ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಮುಂದಾದರೆ ಖಂಡಿತ ಅದನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ. ಬರ್ಲಿನ್ ಗೋಡೆಯನ್ನೇ ಧ್ವಂಸ ಮಾಡಲು ಸಾಧ್ಯ ಎಂದಾದ ಮೇಲೆ ಭಾರತ-ಪಾಕಿಸ್ತಾನ-ಬಾಂಗ್ಲಾದೇಶವನ್ನು ಸೇರಿಸಲು ಯಾಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೊದಲು PoK ತನ್ನಿ.. ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಶಿವಸೇನಾ ಮುಖಂಡ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದು, ಕರಾಚಿಯನ್ನು ಭಾರತಕ್ಕೆ ಸೇರಿಸುವುದು ಇರಲಿ.. ಮೊದಲು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತಕ್ಕೆ ಸೇರಿಸಿ ಎಂದಿದ್ದಾರೆ.