ಪಾಕಿಸ್ತಾನದ ಮತ್ತೊಂದು ಕರಾಳ ಕೃತ್ಯ ಬಯಲು, ಅಂತಾರಾಷ್ಟ್ರೀಯ ಗಡಿ ಪಕ್ಕದಲ್ಲೇ ಸುರಂಗ ಪತ್ತೆ
ದೆಹಲಿ: ಟೆರರಿಸ್ಟ್ ಫ್ಯಾಕ್ಟರಿ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನ ಎಕ್ಸ್ಪೋರ್ಟ್ ಮಾಡೋ ಖಯಾಲಿ ಮುಂದುವರಿಸಿದೆ. ಇದಿಷ್ಟೇ ಆಗಿದ್ರೆ ನಮ್ಮ ವೀರ ಯೋಧರು ಆ ಉಗ್ರರನ್ನ ನೇರ ನರಕಕ್ಕೆ ಕಳಿಸುತ್ತಿದ್ರು ಬಿಡಿ. ಆದ್ರೆ ಹೀಗೆ ಉಗ್ರರನ್ನ ಭಾರತದೊಳಗೆ ನುಸುಳುವಂತೆ ಸಹಾಯ ಮಾಡಲು ರಣಹೇಡಿ ಪಾಕ್ ಬೆಂಬಲದಿಂದ ಜಮ್ಮುಕಾಶ್ಮೀರದ ಗಡಿಯಲ್ಲಿ ಬೃಹತ್ ಸುರಂಗ ಕೊರೆದಿರುವುದು ಕನ್ಫರ್ಮ್ ಆಗಿದೆ. ಪಾಪಿ ಪಾಕಿಸ್ತಾನ ಮತ್ತೊಂದು ನಾಮಧೇಯ ಟೆರರಿಸ್ಟ್ ಫ್ಯಾಕ್ಟರಿ. ಏಕೆಂದರೆ ಪಾಕಿಗಳು ತಾವು ನೆಮ್ಮದಿಯಾಗಿ ಇರೋದಿಲ್ಲ, ನೆರೆಹೊರೆ ದೇಶಗಳಿಗೂ ನೆಮ್ಮದಿ ಕೊಡೋದಿಲ್ಲ. ಅದ್ರಲ್ಲೂ ಭಾರತದ […]
ದೆಹಲಿ: ಟೆರರಿಸ್ಟ್ ಫ್ಯಾಕ್ಟರಿ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನ ಎಕ್ಸ್ಪೋರ್ಟ್ ಮಾಡೋ ಖಯಾಲಿ ಮುಂದುವರಿಸಿದೆ. ಇದಿಷ್ಟೇ ಆಗಿದ್ರೆ ನಮ್ಮ ವೀರ ಯೋಧರು ಆ ಉಗ್ರರನ್ನ ನೇರ ನರಕಕ್ಕೆ ಕಳಿಸುತ್ತಿದ್ರು ಬಿಡಿ. ಆದ್ರೆ ಹೀಗೆ ಉಗ್ರರನ್ನ ಭಾರತದೊಳಗೆ ನುಸುಳುವಂತೆ ಸಹಾಯ ಮಾಡಲು ರಣಹೇಡಿ ಪಾಕ್ ಬೆಂಬಲದಿಂದ ಜಮ್ಮುಕಾಶ್ಮೀರದ ಗಡಿಯಲ್ಲಿ ಬೃಹತ್ ಸುರಂಗ ಕೊರೆದಿರುವುದು ಕನ್ಫರ್ಮ್ ಆಗಿದೆ.
ಪಾಪಿ ಪಾಕಿಸ್ತಾನ ಮತ್ತೊಂದು ನಾಮಧೇಯ ಟೆರರಿಸ್ಟ್ ಫ್ಯಾಕ್ಟರಿ. ಏಕೆಂದರೆ ಪಾಕಿಗಳು ತಾವು ನೆಮ್ಮದಿಯಾಗಿ ಇರೋದಿಲ್ಲ, ನೆರೆಹೊರೆ ದೇಶಗಳಿಗೂ ನೆಮ್ಮದಿ ಕೊಡೋದಿಲ್ಲ. ಅದ್ರಲ್ಲೂ ಭಾರತದ ವಿಚಾರಕ್ಕೆ ಬಂದ್ರೆ ಪಾಕಿಗಳಿಗೆ ಈ ಉರಿಉರಿ ಒಂದಿಷ್ಟು ಜಾಸ್ತಿನೇ ಕಾಡುತ್ತೆ. ಹೀಗೆ ಭಾರತವನ್ನೇ ಟಾರ್ಗೆಟ್ ಮಾಡಿ ಪಾಕಿಗಳು ಮಾಡುತ್ತಿದ್ದ ಮತ್ತೊಂದು ಖತರ್ನಾಕ್ ಕೆಲಸ ಬಟಾಬಯಲಾಗಿದೆ.
ಅಂತಾರಾಷ್ಟ್ರೀಯ ಗಡಿ ಬೇಲಿ ಪಕ್ಕದಲ್ಲೇ ಪಾಕ್ ಜಾಲ! ಅಷ್ಟಕ್ಕೂ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಕಾಶ್ಮೀರದಲ್ಲಿ ಉಗ್ರರನ್ನ ಸದೆಬಡಿಯಲು ‘ಆಪರೇಷನ್ ಆಲ್ ಔಟ್’ ಕಾರ್ಯಾಚರಣೆಯನ್ನ ಭಾರತೀಯ ಸೇನೆ ಯಶಸ್ವಿಯಾಗಿ ನಡೆಸುತ್ತಿದೆ. ಭಾರತೀಯ ಸೇನೆಯ ಉಗ್ರರ ವಿರುದ್ಧದ ಕಾರ್ಯಾಚರಣೆ ನಡುವೆ ಕಣಿವೆ ರಾಜ್ಯಕ್ಕೆ ಮತ್ತಷ್ಟು ಭಯೋತ್ಪಾದಕರನ್ನು ನುಸುಳಿಸಲು ಪಾಕಿಸ್ತಾನ ಸುರಂಗದ ಮೊರೆ ಹೋಗಿದೆ. ಅಂತಾರಾಷ್ಟ್ರೀಯ ಗಡಿ ಬೇಲಿಯ ಕೆಳಭಾಗದಲ್ಲಿ ಪಾಕಿ ಉಗ್ರ ಪಡೆ ನಿರ್ಮಿಸಿದ್ದ ಸುರಂಗ ಪತ್ತೆಯಾಗಿದೆ. ಸುರಂಗವೊಂದನ್ನು ಗಡಿ ಭದ್ರತಾ ಪಡೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಪಾಕ್ ಸಂಚಿನಿಂದ ಎಚ್ಚುತ್ತಿರುವ ಬಿಎಸ್‌ಎಫ್, ಭಾರಿ ಸಂಖ್ಯೆಯಲ್ಲಿ ಭಾರತಕ್ಕೆ ಉಗ್ರರನ್ನು ಅಟ್ಟಲು ಹಾಗೂ ಮಾದಕ ವಸ್ತು, ಶಸ್ತ್ರಾಸ್ತ್ರ ಸಾಗಣೆಗೆ ಇನ್ನಷ್ಟು ಸುರಂಗ ತೋಡಲಾಗಿದೆಯೇ ಎಂಬುದನ್ನ ಶೋಧಿಸಲು ಯೋಜನೆ ರೂಪಿಸಿದೆ.
ನೆಲದಡಿಯಿಂದ ಉಗ್ರ ಕ್ರಿಮಿಗಳನ್ನು ರವಾನಿಸುತ್ತಿತ್ತಾ ಪಾಪಿ ಪಾಕ್? ಅಂತಾರಾಷ್ಟ್ರೀಯ ಗಡಿ ರೇಖೆಯಾಗಿರುವ ಜಮ್ಮುವಿನ ಸಾಂಬಾ ವಲಯದಲ್ಲಿ ಈ ಸುರಂಗ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಬಿಎಸ್‌ಎಫ್ ಯೋಧರು ಪಹರೆ ನಡೆಸುತ್ತಿದ್ದಾಗ ಕೆಲ ಸ್ಥಳದಲ್ಲಿ ಮಣ್ಣು ಕುಸಿದಿದ್ದು ಗಮನಕ್ಕೆ ಬಂದಿತ್ತು. ಅನುಮಾನಗೊಂಡ ಯೋಧರು, ಯಂತ್ರಗಳ ಮೂಲಕ ಸ್ಥಳದಲ್ಲಿ ಮಣ್ಣು ಹೊರತೆಗೆದಾಗ ಸುರಂಗ ಪತ್ತೆಯಾಗಿದೆ. ಈ ಸುರಂಗ ಭಾರತ ಗಡಿ ಬೇಲಿಯಿಂದ ಕೇವಲ 100 ಮೀಟರ್ ದೂರದಲ್ಲಿದ್ದು 20 ಮೀಟರ್ ಉದ್ದವಿತ್ತು. ಸುರಂಗದಿಂದ ಪಾಕಿಸ್ತಾನದ ಗಡಿ ನೆಲೆ ಗುಲ್ಜಾರ್ ಕೇವಲ 700 ಮೀಟರ್ ದೂರದಲ್ಲಿದೆ.
ಒಟ್ನಲ್ಲಿ ಸುರಂಗ ಪತ್ತೆಯಾದ ಬೆನ್ನಲ್ಲೇ, ಗಡಿಯ ಇಂಚಿಂಚು ಜಾಗವನ್ನೂ ಪರಿಶೀಲನೆ ಮಾಡಲು ಭಾರತೀಯ ಪಡೆಗಳು ಸಿದ್ಧವಾಗಿವೆ. ಈ ಘಟನೆ ಪಾಪಿ ಪಾಕಿಸ್ತಾನದ ಉಗ್ರ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದ್ದು ಸುರಂಗ ಪತ್ತೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನವನ್ನ ಮತ್ತೊಮ್ಮೆ ಹರಾಜು ಹಾಕಿದೆ.