ಪಂಜಾಬ್ ಹಾಸ್ಟೆಲ್ ಒಳಗೆ ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಗೆ ಚಾಕು ಇರಿತ

ಹಾಸ್ಟೆಲ್(Hostel)​ ಒಳಗೆ ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಗೆ ಚಾಕು ಇರಿದಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಪಂಜಾಬ್​ನ ಸಂಗ್ರೂರ್‌ನ ಲೊಂಗೋವಾಲ್‌ನಲ್ಲಿರುವ ಸಂತ ಲೊಂಗೋವಾಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಹಾಸ್ಟೆಲ್​ನಲ್ಲಿ ಈ ಘಟನೆ ವರದಿಯಾಗಿದೆ. ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯ ಘಟನೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಬೆಳಕಿಗೆ ಬಂದ ನಂತರ ಪಂಜಾಬ್ ರಾಜ್ಯ ಮಹಿಳಾ ಆಯೋಗವು ಸ್ವಯಂ ದೂರು ದಾಖಲಿಸಿದೆ.

ಪಂಜಾಬ್ ಹಾಸ್ಟೆಲ್ ಒಳಗೆ ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಗೆ ಚಾಕು ಇರಿತ
ವಿದ್ಯಾರ್ಥಿನಿ-ಸಾಂದರ್ಭಿಕ ಚಿತ್ರ
Image Credit source: Shutterstock

Updated on: Dec 03, 2025 | 7:46 AM

ಪಂಜಾಬ್, ಡಿಸೆಂಬರ್ 03: ಹಾಸ್ಟೆಲ್(Hostel)​ ಒಳಗೆ ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಗೆ ಚಾಕು ಇರಿದಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ. ಪಂಜಾಬ್​ನ ಸಂಗ್ರೂರ್‌ನ ಲೊಂಗೋವಾಲ್‌ನಲ್ಲಿರುವ ಸಂತ ಲೊಂಗೋವಾಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಹಾಸ್ಟೆಲ್​ನಲ್ಲಿ ಈ ಘಟನೆ ವರದಿಯಾಗಿದೆ. ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯ ಘಟನೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಬೆಳಕಿಗೆ ಬಂದ ನಂತರ ಪಂಜಾಬ್ ರಾಜ್ಯ ಮಹಿಳಾ ಆಯೋಗವು ಸ್ವಯಂ ದೂರು ದಾಖಲಿಸಿದೆ.

ಹಾಸ್ಟೆಲ್ ಒಳಗೆ ಸಹ ವಿದ್ಯಾರ್ಥಿಗಳು ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಗೆ ಇರಿದಿದ್ದಾರೆ ಎಂದು ವರದಿಯಾಗಿದ್ದು ವಿದ್ಯಾರ್ಥಿಗಳ ಪ್ರತಿಭಟನೆಯ ಹೊರತಾಗಿಯೂ ಸಂಸ್ಥೆಯ ಆಡಳಿತ ಮಂಡಳಿಯು ಭೀಕರ ಘಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನವೆಂಬರ್ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಪಂಜಾಬ್ ಡಿಜಿಪಿ ಮತ್ತು ಮಹಿಳಾ ಆಯೋಗವನ್ನು ಟ್ಯಾಗ್ ಮಾಡಲಾಗಿದ್ದು, ಆಯೋಗದ ಹಸ್ತಕ್ಷೇಪಕ್ಕೆ ಕಾರಣವಾಗಿದೆ. ಈ ಘಟನೆ ನವೆಂಬರ್ 12 ರಂದು ಸಂಭವಿಸಿದೆ ಎಂದು ಆಯೋಗ ಹಂಚಿಕೊಂಡ ಸಂದೇಶಗಳಲ್ಲಿ ಹೇಳಲಾಗಿದ್ದು, ಹಾಸ್ಟೆಲ್ ಒಳಗೆ ಸುರಕ್ಷತೆಯೇ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪಂಜಾಬ್ ರಾಜ್ಯ ಮಹಿಳಾ ಆಯೋಗ ಕಾಯ್ದೆ 2001 ರ ಸೆಕ್ಷನ್ 12 ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯೋಗವು, ಮಹಿಳೆಯರ ಹಕ್ಕುಗಳು, ಘನತೆ ಅಥವಾ ಭದ್ರತೆಯ ಯಾವುದೇ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ.

ಮತ್ತಷ್ಟು ಓದಿ: Video: ಹಾಸ್ಟೆಲ್​ನಲ್ಲಿ ಅನ್ನದ ಪಾತ್ರೆಯೊಳಗೆ ಕಾಲಿಟ್ಟು ಮಲಗಿದ ಕಾವಲುಗಾರ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಾನೂನಿನ ಪ್ರಕಾರ ತಕ್ಷಣದ ಕ್ರಮ ಕೈಗೊಳ್ಳಬೇಕು ಮತ್ತು ಡಿಸೆಂಬರ್ 4, 2025 ರೊಳಗೆ 48 ಗಂಟೆಗಳ ಒಳಗೆ ಆಯೋಗದ ಅಧಿಕೃತ ಇ-ಮೇಲ್‌ಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಆಯೋಗದ ಸೂಚನೆಯನ್ನು, ಸಾಮಾಜಿಕ ಮಾಧ್ಯಮ ಪೋಸ್ಟ್ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೊಗಳನ್ನು ಪ್ರಕರಣದ ಕಡತದಲ್ಲಿ ಲಗತ್ತಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತೊಂದು ಘಟನೆ
ತಂಗಿಯನ್ನ ಚುಡಾಯಿಸಿದ್ದಕ್ಕೆ ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ  ಮೆರವಣಿಗೆ ವೇಳೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ (Arrest). ಸೋದರರಾದ ಅರುಣ್ ಕುರುಬರ ಮತ್ತು ಕಿರಣ್ ಕುರುಬರ ಬಂಧಿತರು. ಆರೋಪಿಗಳ ತಂಗಿಯನ್ನ ಚುಡಾಯಿಸಿದ್ದಕ್ಕೆ ಹತ್ಯೆಗೆ ಯತ್ನಿಸಲಾಗಿದೆ. ಸುಳಿವು ಸಿಗುತ್ತಿದ್ದಂತೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿಯಲ್ಲಿ ಮೊದಲಿನಿಂದಲೂ ಎಂಇಎಸ್‌ ಪುಂಡರ ಅಟ್ಟಹಾಸ ಹೆಚ್ಚಿದೆ.

ಮರಾಠಿಗರಿಗೆ ಪಾಠ ಕಲಿಸಲೆಂದೇ ಈ ಬಾರಿ ಅದ್ಧೂರಿ ರಾಜ್ಯೋತ್ಸವ ನಡೆದಿತ್ತು. ಬೆಳಗಿನಿಂದ ರಾತ್ರಿವರೆಗೂ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆ ವೇಳೆ ಕಿಡಿಗೇಡಿಗಳು ನಗರದ ಐವರಿಗೆ ಚಾಕುವಿನಿಂದ ಇರಿದಿದ್ದಾರೆ.

ಇನ್ನು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕೆಕೆ ಕೊಪ್ಪ ಗ್ರಾಮದ ಆದಿತ್ಯ ಬೆಂಡಿಗೇರಿಗೂ ಬೆಳಗಾವಿ ಡಿಸಿ ಕಚೇರಿ ಎದುರು ದುರುಳರು ಚಾಕು ಇರಿದಿದ್ದಾರೆ. ಬಂಧಿತ ಸಹೋದರರ ತಂಗಿಯನ್ನು ಆದಿತ್ಯ ಚುಡಾಯಿಸಿದ್ದನಂತೆ. ಇದೇ ಕಾರಣಕ್ಕೆ ಬೆಳಗಾವಿಗೆ ಬಂದು ಆದಿತ್ಯನನ್ನ ಹೊಡೆದರೇ ಗೊತ್ತಾಗುವುದಿಲ್ಲ ಅಂತಾ ಹಲ್ಲೆ ಮಾಡಿ ಪರಾರಿಯಾಗಿದ್ದರು. ಆದರೆ ಇದೀಗ ಜೈಲು ಪಾಲಾಗಿದ್ದಾರೆ. ಅತ್ತ ಆದಿತ್ಯಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ