ಬೆಳಗ್ಗೆ ಊರಿಗೆ ಬರ್ತೆನೆಂದು ತಾಯಿಗೆ ಮಾತು ಕೊಟ್ಟಿದ್ದ ಮಗಳು ಹಾಸ್ಟೆಲ್ನಲ್ಲಿ ನಿಗೂಢ ಸಾವು
ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ನೇಣುಬಿಗಿದ ಸ್ಥಿತಿ ಯಲ್ಲಿ ಯುವತಿ ಶವ ಪತ್ತೆಯಾಗಿದ್ದರೂ ಸಹ ಸಾವಿನ ಸುತ್ತ ನೂರೆಂಟು ಅನುಮಾನ ಹುಟ್ಟಿಕೊಂಡಿವೆ. ರಾತ್ರಿ ತಾಯಿಗೆ ಕರೆ ಮಾಡಿ ಬೆಳಗ್ಗೆ ಮನೆಗೆ ಬರುತ್ತೇನೆಂದು ಹೇಳಿದ್ದ ಯುವತಿ, ಏಕಾಏಕಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶಿವಮೊಗ್ಗ, (ನವೆಂಬರ್ 05): ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ಅಂಬೇಡ್ಕರ್ ವಸತಿನಿಯಲದಲ್ಲಿ ನಡೆದಿದೆ. ವನಿಷಾ (21) ಮೃತ ವಿದ್ಯಾರ್ಥಿನಿ . ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಟೆರೆಸ್ ಮೇಲೆ ವನಿಷಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನಿಷಾ ಮೃತದೇಹ ಹಾಸ್ಟೆಲ್ ಮಹಡಿ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಶಿವಮೊಗ್ಗದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸ್ಯಾಂಗ ಮಾಡುತ್ತಿದ್ದ ವನಿಷಾ (21) ಇನ್ನೇನು ಕಾಲೇಜ್ ಹೋಗುವ ಸಮಯದಲ್ಲಿ ತಿಂಡಿ ಮಾಡಿಕೊಂಡು ಹಾಸ್ಟೆಲ್ ಟೆರೇಸ್ ಮೇಲೆ ಹೋಗಿದ್ದಾಳೆ. ಆದ್ರೆ, ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮನಿಷಾ ಶವ ಪತ್ತೆಯಾಗಿದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 38ರ ಮಹಿಳೆಯ ಕಾಮದಾಹಕ್ಕೆ 19 ವರ್ಷದ ಯುವಕ ಬಲಿ: ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣು
ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಇದ್ದಳು. ಹತ್ತಿರದಲ್ಲೇ ಇರುವ ತನ್ನ ಊರಿಗೆ ಬಂದು ಹೋಗುತ್ತಿದ್ದಳು. ಆದ್ರೆ ಏಕಾಏಕಿ ಮಗಳು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದ್ರೆ ಹೆತ್ತವರಿಗೆ ನಂಬಲು ಆಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತ ಯಾವುದೇ ಅಂತಹ ದೊಡ್ಡ ಸಮಸ್ಯೆ ಅವಳಿಗೆ ಇರಲಿಲ್ಲ ಎನ್ನುವುದು ಪೋಷಕರು ಮಾತು. ಹೀಗಾಗಿ ಹಾಸ್ಟೆಲ್ ನಲ್ಲೇ ನೇಣು ಹಾಕಿಕೊಂಡಿರುವುದು ನೂರೆಂಟು ಅನುಮಾನಗಳನ್ನು ಹುಟ್ಟಿಹಾಕಿದೆ.
ಸಾಯುವ ಹಿಂದಿನ ರಾತ್ರಿ ಮನಿಷಾ ಫೋನಿನಲ್ಲಿ ತಾಯಿ ಜೊತೆ ಮಾತನಾಡಿದ್ದು, ಬೆಳಗ್ಗೆ ಊರಿಗೆ ಬರುತ್ತೇನೆಂದು ಹೇಳಿದ್ದಳು. ಆದ್ರೆ, ಬೆಳಗ್ಗೆ ಊರಿಗೆ ಶವವಾಗಿ ಹೋಗಿದ್ದಾಳೆ. ಬಡತನ ನಡುವೆ ಮಗಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ದೊಡ್ಡ ಸವಾಲು ಅಗಿತ್ತು. ಈಗ ಮಗಳ ಸಾವನಿಂದ ತಾಯಿಗೆ ದಿಕ್ಕೇ ತೋಚದಂತಾಗಿದೆ.
ವನಿಷಾ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಬಡತನ ನಡುವೆ ಬಿಎಸ್ಸಿ ವ್ಯಾಸ್ಯಾಂಗ ಮಾಡುತ್ತಿದ್ದಳು. ಆದ್ರೆ ನಿನ್ನೆ ಮತ್ತು ಇಂದು ಹಾಸ್ಟೆಲ್ ವಾರ್ಡನ್ ಸ್ವಪ್ನಾ ಎಲ್ಲಾ ವಿದ್ಯಾರ್ಥಿನಿಯರ ಮುಂದೆ ಮನಿಷಾಗೆ ಬೈದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸೋದರ ಮಾವ ಮಂಜುನಾಥ್ ನೇರ ಆರೊಪಿಸಿದ್ದಾರೆ.
ಮನಿಷಾ ಸಾವಿನ ಬಳಿಕ ವಾರ್ಡನ್, ಕುಟುಂಬಸ್ಥರಿಗೆ ಕರೆ ಮಾಡಿ ಮಾತ್ರೆ ತೆಗೆದುಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದಾರೆ. ಆದ್ರೆ, ನೇಣು ಹಾಕಿಕೊಂಡಿರುವ ಸಂಗತಿ ಬಿಟ್ಟು ಮಾತ್ರೆ ಎಂದು ವಾರ್ಡನ್ ಹೇಳಿದ್ದು ಯಾಕೇ ಎನ್ನುವುದು ಮೃತಳ ಸಂಬಂಧಿಕರ ಪ್ರಶ್ನೆಯಾಗಿದ್ದು, ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇನ್ನು ಸ್ಥಳಕ್ಕೆ ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಈ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿ ವಿದ್ಯಾರ್ಥಿನಿಯ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.
Published On - 7:40 pm, Wed, 5 November 25



