AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ಗಂಡ ನಾಪತ್ತೆ, ಮೈದುನನ ಜತೆ ಪತ್ನಿ ಮದುವೆ, 25 ವರ್ಷಗಳ ಬಳಿಕ ಬಂದ ಮೊದಲ ಪತಿ

ದ್ದಕ್ಕಿದ್ದಂತೆ ಗಂಡ ನಾಪತ್ತೆಯಾಗಿದ್ದ, ಕುಟುಂಬದವರು ಮಹಿಳೆಯನ್ನು ಮೈದುನನಿಗೆ ಕೊಟ್ಟು ಮದುವೆ(Marriage) ಮಾಡಿದ್ದರು. ಈಗ 25 ವರ್ಷಗಳ ಬಳಿಕ ಮೊದಲ ಪತಿ ಮನೆಗೆ ಮರಳಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ.25 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಿದ್ದಾರೆ. ಪಂಜಾಬ್ ನಿವಾಸಿಯಾದ ಈ ವ್ಯಕ್ತಿ ನಹ್ತೌರ್ ಮಾರುಕಟ್ಟೆಯಲ್ಲಿ ಪತ್ತೆಯಾದಾಗಿದ್ದಾರೆ. ಮೂರು ದಿನಗಳ ಹಿಂದೆ, ನಹ್ತೌರ್‌ನ ನಯಾ ಬಜಾರ್‌ನಲ್ಲಿ ಹರಿದ ಬಟ್ಟೆ ಮತ್ತು ಉದ್ದನೆಯ ಗಡ್ಡವನ್ನು ಬಿಟ್ಟಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಅಲೆದಾಡುತ್ತಿರುವುದನ್ನು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಇದ್ದಕ್ಕಿದ್ದಂತೆ ಗಂಡ ನಾಪತ್ತೆ, ಮೈದುನನ ಜತೆ ಪತ್ನಿ ಮದುವೆ, 25 ವರ್ಷಗಳ ಬಳಿಕ ಬಂದ ಮೊದಲ ಪತಿ
ಸಾಂದರ್ಭಿಕ ಚಿತ್ರImage Credit source: Culturalindia.net
ನಯನಾ ರಾಜೀವ್
|

Updated on: Apr 07, 2026 | 11:34 AM

Share

ಬಿಜ್ನೋರ್, ಏಪ್ರಿಲ್ 07: ಇದ್ದಕ್ಕಿದ್ದಂತೆ ಗಂಡ ನಾಪತ್ತೆಯಾಗಿದ್ದ, ಕುಟುಂಬದವರು ಮಹಿಳೆಯನ್ನು ಮೈದುನನಿಗೆ ಕೊಟ್ಟು ಮದುವೆ(Marriage) ಮಾಡಿದ್ದರು. ಈಗ 25 ವರ್ಷಗಳ ಬಳಿಕ ಮೊದಲ ಪತಿ ಮನೆಗೆ ಮರಳಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ನಡೆದಿದೆ.25 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಿದ್ದಾರೆ.

ಪಂಜಾಬ್ ನಿವಾಸಿಯಾದ ಈ ವ್ಯಕ್ತಿ ನಹ್ತೌರ್ ಮಾರುಕಟ್ಟೆಯಲ್ಲಿ ಪತ್ತೆಯಾದಾಗಿದ್ದಾರೆ. ಮೂರು ದಿನಗಳ ಹಿಂದೆ, ನಹ್ತೌರ್‌ನ ನಯಾ ಬಜಾರ್‌ನಲ್ಲಿ ಹರಿದ ಬಟ್ಟೆ ಮತ್ತು ಉದ್ದನೆಯ ಗಡ್ಡವನ್ನು ಬಿಟ್ಟಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಅಲೆದಾಡುತ್ತಿರುವುದನ್ನು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಪ್ರತಾಪ್ ಸಿಂಗ್ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಮ್ಮ ಹೆಸರು ಹನ್ಸಾ ಸಿಂಗ್ ಮತ್ತು ಅವರ ಮನೆ ವಿಳಾಸವನ್ನು ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಶಿವದಯಾಳ್ ವಾಲಾ ಗ್ರಾಮ ಎಂದು ನೀಡಿದ್ದರು. ಪೋಲೀಸರು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ್ದರು, 72 ಗಂಟೆಗಳಲ್ಲಿ, ಹನ್ಸಾ ಸಿಂಗ್ ಅವರ ಸಹೋದರ ಮತ್ತು ಗ್ರಾಮದ ಮುಖ್ಯಸ್ಥ ನಹ್ತೌರ್‌ಗೆ ಬಂದಿದ್ದರು.

ಮತ್ತಷ್ಟು ಓದಿ: ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ

ಸಹೋದರನಿಗೆ ಸಹ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ಹನ್ಸಾ ತನ್ನ ಬಾಲ್ಯದ ನೆನಪುಗಳು ಮತ್ತು ಹೆಸರುಗಳನ್ನು ಹೇಳಿದಾಗ, ಎಲ್ಲರೂ ಕಣ್ಣೀರು ಹಾಕಿದ್ದಾರೆ.ಹಂಸಾ ಸಿಂಗ್ ಚೇತರಿಸಿಕೊಂಡಿರುವುದು ಅಷ್ಟೇ ಸಂತೋಷವನ್ನು ತಂದಿದೆ, ಅಷ್ಟೇ ಗೊಂದಲವನ್ನೂ ತಂದಿದೆ. ಮದುವೆಯಾದ ಕೇವಲ ಎರಡು ವರ್ಷಗಳ ನಂತರ ಹಂಸಾ ಕಾಣೆಯಾದರು.

ಕುಟುಂಬವು ಮೂರು ವರ್ಷಗಳ ಕಾಲ ಕಾಯುತ್ತಿತ್ತು ಮತ್ತು ನಂತರ ಹಂಸಾ ಸತ್ತಿದ್ದಾರೆಂದು ಭಾವಿಸಿತ್ತು.ಅವರ ಪತ್ನಿ ವಿಮಲಾ ದೇವಿಯನ್ನು ಅವರ ಕಿರಿಯ ಸಹೋದರ ಸುಖ ಸಿಂಗ್‌ಗೆ ಮದುವೆ ಮಾಡಿಕೊಟ್ಟರು. ಕಳೆದ 22 ವರ್ಷಗಳಿಂದ, ವಿಮಲಾ ತನ್ನ ಈಗಿನ ಪತಿ ಸುಖ ಸಿಂಗ್ ಜೊತೆ ವಾಸಿಸುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳು ಮತ್ತು ವಿವಾಹಿತ ಮಗಳಿದ್ದಾರೆ. ಹಂಸಾ ಸಿಂಗ್ ಈಗ ತನ್ನ ಕುಟುಂಬದೊಂದಿಗೆ ಪಂಜಾಬ್‌ಗೆ ತೆರಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More