Amritpal Singh: 36 ದಿನಗಳ ಕಾರ್ಯಾಚರಣೆ ಬಳಿಕ ಖಲಿಸ್ತಾನ್​ ಮುಖಂಡ ಅಮೃತ್​​ಪಾಲ್​ ಸಿಂಗ್​​ ಬಂಧನ

|

Updated on: Apr 23, 2023 | 8:18 AM

36 ದಿನಗಳ ಶೋಧ ಕಾರ್ಯಚರಣೆ ಬಳಿಕ ಕೊನೆಗೂ ಅಮೃತ್​​ಪಾಲ್ ಬಂಧಿಸಲಾಗಿದೆ. ಆರೋಪಿಯನ್ನು ಡಿಬ್ರುಗಢ ಜೈಲಿಗೆ ಕರೆದೊಯ್ಯಲಾಗುತ್ತೆ.

Amritpal Singh: 36 ದಿನಗಳ ಕಾರ್ಯಾಚರಣೆ ಬಳಿಕ ಖಲಿಸ್ತಾನ್​ ಮುಖಂಡ ಅಮೃತ್​​ಪಾಲ್​ ಸಿಂಗ್​​ ಬಂಧನ
ಖಲಿಸ್ತಾನ್​ ಮುಖಂಡ ಅಮೃತ್​​ಪಾಲ್​ ಸಿಂಗ್​​
Follow us on

ಪಂಜಾಬ್: ಖಲಿಸ್ತಾನ್​ ಮುಖಂಡ, ವಾರಿಸ್​ ಪಂಜಾಬ್ ದೆ ಸಂಘಟನೆ ಮುಖ್ಯಸ್ಥ ಅಮೃತ್​​ಪಾಲ್​ ಸಿಂಗ್​ನನ್ನು(Amritpal Singh) ಪಂಜಾಬ್​ನ ಮೊಗ ಬಳಿ ಬಂಧಿಸಲಾಗಿದೆ. ಮೊಗ ಬಳಿಯ ಗುರುದ್ವಾರದಲ್ಲಿ ಅಡಗಿಕೊಂಡಿದ್ದ ಅಮೃತ್​​ಪಾಲ್​ನನ್ನು ಪಂಚಾಬ್ ಪೊಲೀಸರು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯನ್ನು ಡಿಬ್ರುಗಢ ಜೈಲಿಗೆ ಕರೆದೊಯ್ಯಲಾಗುತ್ತೆ. 36 ದಿನಗಳ ಶೋಧ ಕಾರ್ಯಚರಣೆ ಬಳಿಕ ಕೊನೆಗೂ ಅಮೃತ್​​ಪಾಲ್ ಬಂಧಿಸಲಾಗಿದೆ.

ಪಂಜಾಬ್ ಪೊಲೀಸರು ಮಾರ್ಚ್ 18 ರಿಂದ ಅಮೃತಪಾಲ್ ಸಿಂಗ್ ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದರು. ಅಂದಿನಿಂದ ಈತ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಇತ್ತೀಚೆಗಷ್ಟೇ ಅಮೃತ್​ಪಾಲ್ ಸಿಂಗ್​ನ ಪತ್ನಿ ಕಿರಿಣ್​ದೀಪ್​ ಕೌರ್​ಳನ್ನು ಪಂಜಾಬ್ ಪೊಲೀಸರು ಅಮೃತ್​ಸರ್​​ನ ಶ್ರೀ ಗುರುರಾಮ್​ ದಾಸ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಕಿರಿಣ್​ದೀಪ್ ಲಂಡನ್​ಗೆ ಹಾರಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾರ್ಚ್​ 18ರಂದು ಅಮೃತ್​ಪಾಲ್ ಸಿಂಗ್​​ನನ್ನು ಪಂಜಾಬ್​​ನ ನಾಕೋಡರ್​ ಬಳಿ ಬಂಧಿಸಲು ಪೊಲೀಸರು ಬಲೆಬೀಸಿದ್ದರು. ಆದರೆ ಅಂದು ಕ್ಷಣದಲ್ಲಿ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದ. ಅಂದಿನಿಂದ ಇಲ್ಲಿಯವರೆಗೂ ಸುಮಾರು 36 ದಿನಗಳಿಂದ ಪೊಲೀಸರಿಂದ ತಲೆ ಮರಿಸಿಕೊಂಡಿದ್ದ ಅಮೃತ್​ಪಾಲ್​ನನ್ನು ಬಂಧಿಸಲಾಗಿದೆ. ಇನ್ನು ಈತನ ಹಲವು ಸಹಚರರು, ವಾರಿಸ್​ ಪಂಜಾಬ್ ದೆ ಸಂಘಟನೆಯ ಅನೇಕ ಸದಸ್ಯರನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ಸಿಂಗ್ ಯೂಟ್ಯೂಬ್​ ಲೈವ್​ ಬಂದು ಹೇಳಿದ್ದೇನು?

ಈ ಹಿಂದೆ ವಿಡಿಯೋ ಮಾಡಿ ಸವಾಲು ಹಾಕಿದ್ದ ಅಮೃತ್​ಪಾಲ್

ನನ್ನನ್ನು ಬಂಧಿಸುವುದು ಸರಕಾರದ ಉದ್ದೇಶವಾಗಿದ್ದರೆ ಈ ವೇಳೆಗೆ ಅವರು ನನ್ನನ್ನು ಬಂಧಿಸಿರುತ್ತಿದ್ದರು. ಸರಕಾರವು ನನ್ನನ್ನು ಮನೆಯಿಂದ ಬಂಧಿಸಿದ್ದರೆ ನಾವು ಅದನ್ನು ಒಪ್ಪುತ್ತಿದ್ದೆವು. ಆದರೆ ಲಕ್ಷಾಂತರ ಪಡೆಗಳನ್ನು ಸುತ್ತುವರಿಸಿ ನನ್ನನ್ನು ಬಂಧಿಸಲು ಸರ್ಕಾರ ಪ್ರಯತ್ನಿಸಿದೆ. ನನ್ನ ಬಂಧನವು ದೇವರ ಕೈಯಲ್ಲಿದೆ. ನಾನು ಜಗತ್ತಿನ ತುತ್ತ ತುದಿಯಲ್ಲಿದ್ದೇನೆ. ನನಗೆ ಯಾರೂ ಏನೂ ಮಾಡಲಾಗದು ಎಂದು ಕೆಲ ತಿಂಗಳ ಹಿಂದೆ ವಿಡಿಯೋ ಲೈವ್ ಮಾಡಿ ಅಮೃತ್ ಸಿಂಗ್ ಸವಾಲು ಹಾಕಿದ್ದ.

ಅಧಿಕೃತ ಮೂಲಗಳ ಪ್ರಕಾರ, ಅಮೃತಪಾಲ್ ಸಿಂಗ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ವಿದೇಶದಲ್ಲಿರುವ ಕೆಲವು ಭಯೋತ್ಪಾದಕ ಗುಂಪುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ದೇಶಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 8:18 am, Sun, 23 April 23