UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ. ತಮಿಳುನಾಡಿನ […]

UPSC ಪರೀಕ್ಷೆಯಲ್ಲಿ Rank ಪಡೆದ ಈ ಪುರಾಣ ಸುಂದರಿ ವಿಶೇಷತೆ ಏನು ಗೊತ್ತಾ!?
Follow us
ಆಯೇಷಾ ಬಾನು
|

Updated on:Aug 14, 2020 | 10:26 AM

ಮದುರೈ: ಯುಪಿಎಸ್​ಸಿ ಪರೀಕ್ಷೆಯಲ್ಲಿ Rank ಪಡೆದು ಯಶಸ್ವಿಯಾಗುವುದು ಸುಲಭ ಸಾಧ್ಯದ ಸಾಧನೆಯಲ್ಲ. ಇದಕ್ಕೆ ಕಠಿಣ ಪರಿಶ್ರಮ, ಶ್ರದ್ಧೆ, ದೃಢ ಸಂಕಲ್ಪ ಅತಿ ಮುಖ್ಯ. ಈಗ ನಾವು ಹೇಳಲು ಹೊರಟಿರುವ ಕಥೆ ಸಾಧಕಿಯೊಬ್ಬಳ ಅಸಾಧಾರಣವಾದ ಸ್ಪೂರ್ತಿದಾಯಕ ಕಥೆ. ಮಹಾರಾಷ್ಟ್ರದ ಉಲ್ಹಾಸ್ ನಗರ ನಿವಾಸಿ ಪ್ರಾಂಜಲ್ ಪಾಟೀಲ್, ಯಾರೆಂದು ನಿಮಗೆಲ್ಲ ಗೊತ್ತೇ ಇರುತ್ತೆ. ಪ್ರಾಂಜಲ್ ಮೊದಲ ದೃಷ್ಟಿ ಹೀನ ಮಹಿಳಾ ಐಎಎಸ್ ಅಧಿಕಾರಿ. ಇದೇ ದಾರಿಯಲ್ಲಿ ಸಾಗಿ ಬಂದ ಮತ್ತೊಬ್ಬ ಸಾಧಕಿಯನ್ನು ನಾವು ಈಗ ನಿಮಗೆ ಪರಿಚಯ ಮಾಡಿಕೊಡುತ್ತಿದ್ದೇವೆ.

ತಮಿಳುನಾಡಿನ ಮದುರೈ ನಿವಾಸಿ 25 ವರ್ಷದ ಪುರಾಣ ಸುಂದರಿ ಅವರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ ತನ್ನ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ 286ನೇ Rank ಪಡೆದು ಕೀರ್ತಿ ಪತಾಕೆ ಹಾರಿಸಿದ್ದಾರೆ. ಸುಂದರಿ ಅವರ ಈ ಸಾಧನೆಗೆ ಟ್ವಿಟ್ಟರ್​ನಲ್ಲಿ ಅಪಾರ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗಿದೆ. ಮತ್ತು ಅವರ ಕಥೆಯನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹಂಚಿಕೊಂಡಿದ್ದಾರೆ.

“ತಮಿಳುನಾಡಿನ 25 ವರ್ಷ ವಯಸ್ಸಿನ ದೃಷ್ಟಿಹೀನ ಪುರಾಣ ಸುಂದರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಕನಸುಗಳ ಬೆನ್ನಟ್ಟುವುದನ್ನು ನಾವು ಎಂದಿಗೂ ನಿಲ್ಲಿಸಬಾರದು”   ಎಂದು ಕೈಫ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪುರಾಣ ಸುಂದರಿ ಐಎಎಸ್ ಆಕಾಂಕ್ಷಿಗಳಿಗೆ  ದಾರಿದೀಪ! ಸುಂದರಿ ತನ್ನ ಯಶಸ್ಸನ್ನು ಹೆತ್ತವರಿಗೆ ಅರ್ಪಿಸಿದ್ದಾರೆ. ನನ್ನ ಪೋಷಕರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ನನ್ನ ಯಶಸ್ಸನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಇದು ನನ್ನ 4ನೇ ಪ್ರಯತ್ನ, ನಾನು ಈ ಪರೀಕ್ಷೆಗೆ 5 ವರ್ಷಗಳಷ್ಟು ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು  ಮಾಧ್ಯಮದ ಜೊತೆ ಮಾತನಾಡುವ ವೇಳೆ ಸುಂಥಾರಿ ಹೇಳಿದ್ದಾರೆ.

ಪುರಾಣ ಸುಂದರಿ ಅವರು ಮೂರು ಬಾರಿ ಸೋತರೂ ಛಲ ಬಿಡದೆ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕತ್ತಲನ್ನೇ ಕಾಣುತ್ತಿದ್ದ ಕಣ್ಣುಗಳು ಈಗ ಬೆಳಕಿನೆಡೆಗೆ ಸಾಗುತ್ತಿವೆ. ಅವರ ಈ ಸಾಧನೆ ಯುವ ಜನಾಂಗಕ್ಕೆ ಮಾದರಿಯಾಗಿದೆ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸೋಣ.

Published On - 10:02 am, Fri, 14 August 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?