ಲಖನೌ: ಮಹಾಂತ ಅಖಾಡ ಪರಿಷತ್ ಅಧ್ಯಕ್ಷ ನರೇಂದ್ರ ಗಿರಿ ಅವರ ಕೋಣೆಯಲ್ಲಿ ಪತ್ತೆಯಾಗಿರುವ 11 ಪುಟಗಳ ಮರಣಪತ್ರವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಿರಿಯ ಸ್ವಾಮೀಜಿ ನರೇಂದ್ರ ಗಿರಿ ಅವರಿಗೆ ಬರೆಯಲು ಬರುತ್ತಿರಲಿಲ್ಲ. ಅವರು ಬಾಯ್ಮಾತಿನಲ್ಲಿಯೇ ಆಡಳಿತ ನಿರ್ವಹಿಸುತ್ತಿದ್ದರು ಎಂದು ಪ್ರಕರಣದ ಪ್ರಮುಖ ಆರೋಪಿ ಆನಂದ್ ಗಿರಿ ಹೇಳಿದ್ದಾರೆ.
ಆದರೆ ಮಹಾಂತರ ಶಿಷ್ಯರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ನರೇಂದ್ರ ಗಿರಿ ಅವರಿಗೆ ಓದಲು ಬರೆಯಲು ಬರುತ್ತಿತ್ತು. ಅವರು ಸ್ವತಃ ಗಂಟೆಗಟ್ಟಲೆ ಸುಂದರಕಾಂಡ ಪಾರಾಯಣ ಮಾಡುತ್ತಿದ್ದರು ಎಂದು ಶಿಷ್ಯರಾದ ಜಿತೇಂದ್ರ ಸರಸ್ವತಿ ಮತ್ತು ಸರ್ವೇಶ ತ್ರಿವೇದಿ ತಿಳಿಸಿದ್ದಾರೆ.
ನರೇಂದ್ರ ಗಿರಿ ಅವರು ಬರೆದಿದ್ದಾರೆ ಎನ್ನಲಾದ ಮರಣಪತ್ರದ ಮುಖ್ಯ ಅಂಶಗಳಿವು..
‘ಹರಿದ್ವಾರದಿಂದ ನನಗೆ ಮಾಹಿತಿ ಬಂದಿದೆ. ಕಂಪ್ಯೂಟರ್ ಬಳಸಿ ಆನಂದ್ ಗಿರಿ ನನ್ನ ಚಿತ್ರವನ್ನು ಮಹಿಳೆಯೊಬ್ಬರೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ಇರುವಂತೆ ಹೊಂದಾಣಿಕೆ ಮಾಡಿ ವೈರಲ್ ಮಾಡಲು ಯತ್ನಿಸುತ್ತಿದ್ದಾನೆ. ಮಹಾರಾಜ್ ಅದೆಷ್ಟು ದಿನ ತಾವು ಮುಗ್ಧರು ಎಂದು ಸಾಬೀತುಪಡಿಸಿಕೊಳ್ಳಲು ಸಾಧ್ಯ ಎಂದು ಆನಂದ್ ಗಿರಿ ಅವರಿವರ ಬಳಿ ಮಾತನಾಡಿರುವುದು ಗೊತ್ತಾಗಿದೆ. ನನಗೆ ಸಿಗುತ್ತಿರುವ ಗೌರವವನ್ನು ಏಕಾಏಕಿ ಕಳೆದುಕೊಂಡರೆ ನಾನು ಈ ಸಮಾಜದಲ್ಲಿ ಹೇಗೆ ಬದುಕಲಿ? ಸಾಯುವುದೇ ಒಳ್ಳೆಯದು. ಅದಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ನರೇಂದ್ರ ಗಿರಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
(Questions Around Mahant Narendra Giri Suicide Note What are the Contents of death note)
ಇದನ್ನೂ ಓದಿ: ಬಾಗಂಬರಿ ಮಠದಲ್ಲಿ ಡೆತ್ನೋಟ್ ಪತ್ತೆ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು
ಇದನ್ನೂ ಓದಿ: ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು ಪ್ರಕರಣ; ಆನಂದ್ ಗಿರಿ ವಿರುದ್ಧ ಎಫ್ಐಆರ್ ದಾಖಲು