Indian Air Force: ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ನೇಮಕ
ವಾಯುಪಡೆಯ ಹಾಲಿ ಮುಖ್ಯಸ್ಥರಾದ ಏರ್ಚೀಫ್ ಮಾರ್ಷಲ್ ಆರ್.ಕೆ.ಎಸ್.ಬಧೌರಿಯಾ ಇದೇ ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದಾರೆ.
ದೆಹಲಿ: ನುರಿತ, ಅನುಭವಿ ಪೈಲಟ್ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರನ್ನು ಭಾರತೀಯ ವಾಯುಪಡೆಯ (Indian Air Force – IAF) ಮುಖ್ಯಸ್ಥರ ಸ್ಥಾನಕ್ಕೆ ನೇಮಿಸಲು ಭಾರತ ಸರ್ಕಾರ ನಿರ್ಧರಿಸಿದೆ. ವಾಯುಪಡೆಯ ಹಾಲಿ ಮುಖ್ಯಸ್ಥರಾದ ಏರ್ಚೀಫ್ ಮಾರ್ಷಲ್ ಆರ್.ಕೆ.ಎಸ್.ಬಧೌರಿಯಾ ಇದೇ ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದಾರೆ. ನಂತರ ಮುಖ್ಯಸ್ಥರ ಸ್ಥಾನದಲ್ಲಿ ವಿ.ಆರ್.ಚೌಧರಿ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ವಾಯುಪಡೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಚೌಧರಿ, ಮಿಗ್-29 ಯುದ್ಧವಿಮಾನದ ನಿಪುಣ ಪೈಲಟ್ ಎಂದೇ ಹೆಸರಾದವರು. ಆಗಸ್ಟ್ 1, 2020ರಿಂದಲೂ ಅವರು ಪಶ್ಚಿಮ ಏರ್ ಕಮಾಂಡ್ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 29, 1982ರಂದು ಫೈಟರ್ ಪೈಲಟ್ ಆಗಿ ನಿಯೋಜಿತರಾದ ಚೌಧರಿ 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ 3800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.
ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವಕ್ತಾರರು ಏರ್ ಮಾರ್ಷಲ್ ವಿವೇಕಾ ರಾಮ್ ಚೌಧರಿ ಅವರ ಪದೋನ್ನತಿಯನ್ನು ದೃಢಪಡಿಸಿದ್ದಾರೆ. ‘ಪ್ರಸ್ತುತ ವಾಯುಪಡೆಯ ಉಪಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ವಿ.ಆರ್.ಚೌಧರಿ ಅವರನ್ನು ವಾಯುಪಡೆಯ ಮುಖ್ಯಸ್ಥರಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ಆರ್.ಕೆ.ಎಸ್.ಬಧೌರಿಯಾ ಸೆ.30ರಂದು ನಿವೃತ್ತರಾಗಲಿದ್ದಾರೆ’ ಎಂದು ಹೇಳಿದ್ದಾರೆ.
Air Marshal V R Chaudhari appointed next Chief of the Air Staff. Press release: https://t.co/ZdV5qI2VcQ pic.twitter.com/HQWKmDfsea
— A. Bharat Bhushan Babu (@SpokespersonMoD) September 21, 2021
(Vivek Ram Chaudhari to be next IAF Indian Air Force Chief)
ಇದನ್ನೂ ಓದಿ: ರಕ್ಷಣಾ ವಿದ್ಯಮಾನ: ಹಗುರ ಯುದ್ಧವಿಮಾನ ತೇಜಸ್ಗೆ ಶಕ್ತಿ ತುಂಬುವ ಕಾವೇರಿ ಸುಧಾರಣೆ ಈ ಕ್ಷಣದ ತುರ್ತು
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಏರ್ಲಿಫ್ಟ್ಗೆ ನೆರವಾಗುತ್ತಿದೆ ತಜಕಿಸ್ತಾನದಲ್ಲಿರುವ ಭಾರತದ ವಾಯುನೆಲೆ
Published On - 9:02 pm, Tue, 21 September 21