ಭೋಪಾಲ್: ಮೇ 9 ರಂದು ಮಧ್ಯಪ್ರದೇಶ (Madhya Pradesh) ಪೊಲೀಸ್ ಭಯೋತ್ಪಾದನಾ ನಿಗ್ರಹ ದಳದಿಂದ (ATS) ಭೇದಿಸಲ್ಪಟ್ಟ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಯ ಹಿಜ್ಬ್-ಉತ್-ತಹ್ರೀರ್ (HuT) ನ ಮೊದಲ ಭಾರತೀಯ ಘಟಕವು ಧಾರ್ಮಿಕ ಪರಿವರ್ತನೆಯ ಕೋನವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಐವರು ಶಂಕಿತರು ಹಿಂದೂ ಹುಡುಗಿಯರನ್ನು ಮದುವೆಯಾಗಿದ್ದರು, ಇವರಲ್ಲಿ ಇಬ್ಬರು ಪುರುಷರು ಕೆಲವೇ ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದರು ಎಂದು ಎನ್ಡಿಟಿವಿ ವರದಿ ಮಾಡಿದೆ. ಭೋಪಾಲ್ ಮೂಲದ ಜಿಮ್ ತರಬೇತುದಾರ ಯಾಸಿರ್ ಖಾನ್ ಮತ್ತು ಹೈದರಾಬಾದ್ ಮೂಲದ ಮೊಹಮ್ಮದ್ ಸಲೀಂ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳು. ಮೊಹಮ್ಮದ್ ಸಲೀಂ ರಾಜಕಾರಣಿ ಕುಟುಂಬದಿಂದ ನಡೆಸುತ್ತಿರುವ ಹೈದರಾಬಾದ್‌ನ ಕಾಲೇಜೊಂದರಲ್ಲಿ ಫಾರ್ಮಸಿ ಉಪನ್ಯಾಸಕರಾಗಿದ್ದರು. ಮೊಹಮ್ಮದ್ ಸಲೀಂ ( ಸೌರಭ್ ರಾಜ್ ವೈದ್ಯ), ಅಬ್ದುರ್ ರೆಹಮಾನ್ ( ದೇವಿ ನಾರಾಯಣ ಪಾಂಡಾ) ಮತ್ತು ಮೊಹಮ್ಮದ್ ಅಬ್ಬಾಸ್ ಅಲಿ ( ಬೇನು ಕುಮಾರ್) ಸೇರಿದಂತೆ ಐವರು ಆರೋಪಿಗಳು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
2000 ರ ಆರಂಭದಲ್ಲಿ ಭೋಪಾಲ್‌ನ ಖಾಸಗಿ ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದಾಗ ತಮ್ಮ ಮಗನ ಹಿರಿಯ ಸಹೋದ್ಯೋಗಿ ಡಾ.ಕಮಲ್ ಬ್ರೈನ್‌ವಾಶ್ ಮಾಡಿ “ಸಲೀಂ” ಆಗಿ ಪರಿವರ್ತಿಸಿದರು ಎಂದು ಭೋಪಾಲ್‌ನ ಬೆರಾಸಿಯಾ ಪ್ರದೇಶದಲ್ಲಿರುವ ಮೊಹಮ್ಮದ್ ಸಲೀಂ ಪೋಷಕರು ಆರೋಪಿಸಿದ್ದಾರೆ. ನಮ್ಮ ಐದು ಮಕ್ಕಳಲ್ಲಿ ಅವನು ನಮಗೆ ಒಬ್ಬನೇ ಮಗ. ಡಾ. ಕಮಲ್ ಎಂಬಾತ ಅವನನ್ನು ಇಸ್ಲಾಂಗೆ ಬದಲಾಯಿಸಲು ಬ್ರೈನ್ ವಾಶ್ ಮಾಡಿದ್ದಾನೆ. ವಿವಾದಾತ್ಮಕ ಮೂಲಭೂತವಾದಿ ಇಸ್ಲಾಮಿಕ್ ಬೋಧಕ ಡಾ. ಜಾಕಿರ್ ನಾಯ್ಕ್ ಅವರ ವಿಡಿಯೊಗಳು ನಮ್ಮ ಮಗನನ್ನು ಇಸ್ಲಾಂಗೆ ಪರಿವರ್ತಿಸಲು ಮತ್ತಷ್ಟು ಕೊಡುಗೆ ನೀಡಿವೆ ಎಂದು ಅವರ ತಂದೆ ಹೇಳಿದರು.
ನಾವು ಯಾವುದೇ ರೀತಿಯಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅಲ್ಲ, ಆದರೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತೇವೆ. ನಮ್ಮ ದೇಶದ ವಿರುದ್ಧ ಜನರನ್ನು ಬ್ರೈನ್‌ವಾಶ್ ಮಾಡುವ ಇಸ್ಲಾಂ ರೀತಿಗೆ ನಮ್ಮ ವಿರೋಧವಿದೆ. 2010 ರಿಂದ ಆತ ನಮ್ಮ ಧರ್ಮ ಮತ್ತು ಸಂಸ್ಕೃತಿಯ ವಿರುದ್ಧ ಮಾತನಾಡಲು ಪ್ರಾರಂಭಿಸಿದ. ನಬಿ (ಪ್ರವಾದಿ) ಬಗ್ಗೆ ಏನನ್ನೂ ಕೇಳಲು ಸಿದ್ಧರಿರಲಿಲ್ಲ. ನಬಿಯ ನಂಬಿಕೆಗಳನ್ನು ವಿರೋಧಿಸಿದ್ದಕ್ಕಾಗಿ ಒಮ್ಮೆ ನನ್ನ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಬಹುಶಃ 2011 ಅಥವಾ 2012 ರಲ್ಲಿ ಬಾರಾಬಂಕಿಯ ಇಸ್ಲಾಂ ಧರ್ಮ ಪ್ರಚಾರಕರು ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮಗ ಮತ್ತು ಸೊಸೆಗೆ ಇಸ್ಲಾಮಿಕ್ ಕಲಿಮಾವನ್ನು ಓದುವಂತೆ ಮಾಡಿದರು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡರು ಎಂದು ಸಲೀಂ ಅಪ್ಪ ಹೇಳಿದ್ದಾರೆ. ನನ್ನ ಮಗ 2010-11ರಲ್ಲಿ ಸಿರಿಯಾಕ್ಕೆ ಹೋಗಲು ಯೋಜಿಸುತ್ತಿದ್ದ ಎಂದು ಅವರು ಹೇಳಿದರು.
ಇದನ್ನೂ ಓದಿ: Rozgar Mela: ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಉದ್ಯೋಗದ ಸ್ವರೂಪವು ಬದಲಾಗಿದೆ: ನರೇಂದ್ರ ಮೋದಿ
ಆತ ತಮ್ಮ ಸಹೋದರಿಯರಿಂದ ರಕ್ಷಾ ಬಂಧನದಂದು ರಾಖಿಗಳನ್ನು ಕಟ್ಟುವುದನ್ನು ನಿಲ್ಲಿಸಿದ. ಆತ ಇತರ ಧಾರ್ಮಿಕ ತತ್ವಗಳನ್ನು ಅನುಸರಿಸುವುದನ್ನು ಮುಂದುವರೆಸಿದಾಗ ಮತ್ತು ನಮ್ಮ ಧರ್ಮ ಮತ್ತು ನಂಬಿಕೆಗಳನ್ನು ಅಗೌರವಿಸಿದಾಗ, ನಮ್ಮ ಮನೆಯಿಂದ ಹೊರಹೋಗುವಂತೆ ಕೇಳುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ ಎಂದು ಸಲೀಂನ ಅಪ್ಪ ಹೇಳಿದ್ದಾರೆ.
ಮನೆಯಿಂದ ಹೊರಬಂದ ನಂತರ, ಎಂ.ಫಾರ್ಮಾ-ಪದವಿ ಹೊಂದಿರುವ ಸೌರಭ್ ಸಲೀಂ ಆಗಿ ಮರಳಿ ಬಂದು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಮೊದಲು ಕೆಲವು ವರ್ಷಗಳ ಕಾಲ ಭೋಪಾಲ್‌ನಲ್ಲಿ ವಾಸಿಸುತ್ತಿದ್ದರು. ನಂತರ 2019-20 ರಲ್ಲಿ ಅಲ್ಲಿನ ಪ್ರಮುಖ ಕಾಲೇಜಿನಲ್ಲಿ ಕೆಲಸ ಪಡೆದ ನಂತರ ಹೈದರಾಬಾದ್‌ಗೆ ಸ್ಥಳಾಂತರಗೊಂಡರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಪೊಲೀಸರು ಆಪಾದಿತ HuT ಮಾಡ್ಯೂಲ್ ಅನ್ನು ಭೇದಿಸಿರುವ ಬಗ್ಗೆ ಮಾತನಾಡುತ್ತಾ, ‘ದಿ ಕೇರಳ ಸ್ಟೋರಿ’ ಮಧ್ಯಪ್ರದೇಶದಲ್ಲಿ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. HuT ಚೀನಾ, ಜರ್ಮನಿ, ರಷ್ಯಾ, ಬಾಂಗ್ಲಾದೇಶ ಮತ್ತು ಟರ್ಕಿ ಸೇರಿದಂತೆ 16 ರಾಷ್ಟ್ರಗಳಲ್ಲಿ ನಿಷೇಧಿಸಲಾದ ಒಂದು ಮೂಲಭೂತ ಇಸ್ಲಾಮಿಕ್ ಗುಂಪು. ಮುಸ್ಲಿಮರನ್ನು ಒಗ್ಗೂಡಿಸಲು ಮತ್ತು ಜಾಗತಿಕವಾಗಿ ಷರಿಯಾವನ್ನು ಜಾರಿಗೆ ತರಲು ಇಸ್ಲಾಮಿಕ್ ಕ್ಯಾಲಿಫೇಟ್ ಅನ್ನು ಮರುಸ್ಥಾಪಿಸುವುದು ಈ ಸಂಘಟನೆಯ ಗುರಿಯಾಗಿದೆ.
ಮೇ 9 ರಂದು ತೆಲಂಗಾಣ ಪೊಲೀಸರ ಸಹಾಯದಿಂದ ಭೋಪಾಲ್, ಛಿಂದ್ವಾರಾ ಮತ್ತು ಹೈದರಾಬಾದ್‌ನಿಂದ ಎಟಿಎಸ್‌ನಿಂದ ಈ ಗುಂಪಿಗೆ ಸಂಬಂಧಿಸಿದ ಹದಿನಾರು ಮಂದಿಯನ್ನು ಬಂಧಿಸಲಾಯಿತು. ಅವರು ಮೇ 19 ರವರೆಗೆ ಎಟಿಎಸ್ ರಿಮಾಂಡ್‌ನಲ್ಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ