ಭಾರತೀಯ ವಾಯುಪಡೆಗೆ ರಫೇಲ್​ ರಣಧೀರನ ಅಧಿಕೃತ ಸೇರ್ಪಡೆ

| Updated By: ಸಾಧು ಶ್ರೀನಾಥ್​

Updated on: Sep 10, 2020 | 11:34 AM

ಚಂಡೀಗಢ: ದೇಶದ ರಕ್ಷಣೆಗೆ ಮತ್ತಷ್ಟು ಬಲನೀಡಲಿರುವ ರಫೇಲ್​ ರಣಧೀರ ಯುದ್ಧವಿಮಾನಗಳು ಇಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಯಿತು. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಸರಳವಾಗಿ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಜೊತೆ ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಸಹ ಉಪಸ್ಥಿತರಿದ್ದರು. ಅಧಿಕೃತ ಸೇರ್ಪಡೆಗೆ ಮುನ್ನ ಸಂಪ್ರದಾಯಿಕ ಸರ್ವ ಧರ್ಮ ಪೂಜೆಯನ್ನು ನೆರವೇರಿಸಲಾಯಿತು. ದೇಶದ ಸರ್ವ ಧರ್ಮಗಳ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಪೂಜೆ ಮತ್ತು ಇತರೆ ವಿಧಿವಿಧಾನಗಳನ್ನು ನೆರವೇರಿಸಿದರು. ಪೂಜೆ ಸಮಾರಂಭದ ಬಳಿಕ ರಫೇಲ್​ […]

ಭಾರತೀಯ ವಾಯುಪಡೆಗೆ ರಫೇಲ್​ ರಣಧೀರನ ಅಧಿಕೃತ ಸೇರ್ಪಡೆ
Follow us on

ಚಂಡೀಗಢ: ದೇಶದ ರಕ್ಷಣೆಗೆ ಮತ್ತಷ್ಟು ಬಲನೀಡಲಿರುವ ರಫೇಲ್​ ರಣಧೀರ ಯುದ್ಧವಿಮಾನಗಳು ಇಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಯಿತು. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಸರಳವಾಗಿ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಜೊತೆ ಫ್ರಾನ್ಸ್​ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಸಹ ಉಪಸ್ಥಿತರಿದ್ದರು. ಅಧಿಕೃತ ಸೇರ್ಪಡೆಗೆ ಮುನ್ನ ಸಂಪ್ರದಾಯಿಕ ಸರ್ವ ಧರ್ಮ ಪೂಜೆಯನ್ನು ನೆರವೇರಿಸಲಾಯಿತು. ದೇಶದ ಸರ್ವ ಧರ್ಮಗಳ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಪೂಜೆ ಮತ್ತು ಇತರೆ ವಿಧಿವಿಧಾನಗಳನ್ನು ನೆರವೇರಿಸಿದರು.

ಪೂಜೆ ಸಮಾರಂಭದ ಬಳಿಕ ರಫೇಲ್​ ಮತ್ತು ಸುಖೋಯ್​ 30 ಯುದ್ಧವಿಮಾನಗಳು ವೈಮಾನಿಕ ಪ್ರದರ್ಶನ ಸಹ ನಡೆಸಿದವು.

Published On - 11:14 am, Thu, 10 September 20