ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೇಷರತ್ ಬೆಂಬಲ ನೀಡಿದ ರಾಹುಲ್​ ಗಾಂಧಿ

|

Updated on: Sep 19, 2023 | 11:18 AM

Women's Reservation Bill: ಮಹಿಳೆಯರಿಗೆ ಶಾಸಕಾಂಗ ಮೀಸಲಾತಿ ಒದಗಿಸುವ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್​​ ಬೇಷರತ್ತಾದ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಇದರ ಜತೆಗೆ ಪ್ರಧಾನಿ ಮೋದಿ ಅವರಿಗೆ ರಾಹುಲ್​​​ ಗಾಂಧಿ ಅವರು ಬರೆದಿರುವ ಹಳೆಯ ಪತ್ರದ ಬಗ್ಗೆಯು ಪ್ರಸ್ತಾಪಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೇಷರತ್ ಬೆಂಬಲ ನೀಡಿದ ರಾಹುಲ್​ ಗಾಂಧಿ
ರಾಹುಲ್​​ ಗಾಂಧಿ
Follow us on

ದೆಹಲಿ, ಸೆ.19: ಇಂದು ಹೊಸ ಸಂಸತ್​​ ಭವನದಲ್ಲಿ ಎರಡನೇ ದಿನದ ಸಂಸತ್​​ ವಿಶೇಷ ಅಧಿವೇಶನ (Parliament Special Session) ನಡೆಯಲಿದೆ. ನೆನ್ನೆ (ಸೆ.18)ಮೊದಲ ಅಧಿವೇಶ ಹಳೆ ಸಂಸತ್​​ ಕಟ್ಟಡದಲ್ಲಿ ನಡೆದಿದ್ದು. ಪ್ರಧಾನಿ ಮೋದಿ ಭಾಷಣ ಮಾಡುವ ಮೂಲಕ ಅನೇಕ ವಿಚಾರಗಳು ಪ್ರಸ್ತಾಪ ಮಾಡಿದ್ದರು. ಇದರ ಜತೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆದು, ಬಹುದಿನಕಾಲ ಬಾಕಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು(Women’s Reservation Bill) ಮಂಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಈ ಕ್ರಮವನ್ನು ಕಾಂಗ್ರೆಸ್​​ ಸ್ವಾಗತಿಸಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಒಮ್ಮೆ ಅಂಗೀಕಾರವಾದರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಹೆಚ್ಚಿದಂತಾಗುತ್ತದೆ.

ಇನ್ನು ಈ ಬಗ್ಗೆ ಮಾತನಾಡಿದ ರಾಹುಲ್​​ ಗಾಂಧಿ ಅವರು ಮಹಿಳೆಯರಿಗೆ ಶಾಸಕಾಂಗ ಮೀಸಲಾತಿ ಒದಗಿಸುವ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್​​ ಬೇಷರತ್ತಾದ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಇದರ ಜತೆಗೆ ಪ್ರಧಾನಿ ಮೋದಿ ಅವರಿಗೆ ರಾಹುಲ್​​​ ಗಾಂಧಿ ಅವರು ಬರೆದಿರುವ ಹಳೆಯ ಪತ್ರದ ಬಗ್ಗೆಯು ಪ್ರಸ್ತಾಪಿಸಿದ್ದಾರೆ. ನಮ್ಮ ಪ್ರಧಾನಿ ಅವರು ಮಹಿಳಾ ಸಬಲೀಕರಣಕ್ಕಾಗಿ ಹೋರಾಡುವೇ ಎಂದು ಹೇಳುತ್ತಾರೆ? ಅವರ ಪಕ್ಷ ಮೇಲೆ ಬರಲು ಮಹಿಳೆಯರೇ ಕಾರಣ, ಇದೀಗ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಮೂಲಕ ಅವರಿಗೆ ಸೇವೆ ಸಲ್ಲಿಸಲು ಒಂದು ಸಮಯ ಬಂದಿದೆ ಎಂದು ಹೇಳಿದ್ದಾರೆ.

ರಾಹುಲ್​​ ಗಾಂಧಿ ಅವರು ಮೋದಿ ಅವರಿಗೆ ಬರೆದಿರುವ ಪತ್ರ ಫೋಟೋ ಭಾರೀ ಸದ್ದು ಮಾಡುತ್ತಿದೆ. ಈ ಪತ್ರ 2018ರಂದು ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.

ಮಹಿಳೆಯರ ಶಾಸಕಾಂಗ ಮೀಸಲಾತಿಗಾಗಿ ಕಾನೂನನ್ನು ರೂಪಿಸಲು 1996ರಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಕೆಲವೊಂದು ಸಮಸ್ಯೆಗಳಿಂದ ಅದನ್ನು ಅಂಗೀಕರ ಮಾಡಲು ಸಾಧ್ಯವಾಗಿರಲಿಲ್ಲ. 2010ರಲ್ಲಿ ಯುಪಿಎ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು ಆದರೆ ಮಿತ್ರಪಕ್ಷಗಳ ಕೆಲವು ಒತ್ತಡದಿಂದಾಗಿ ಲೋಕಸಭೆಯಲ್ಲಿ ಅದನ್ನು ಮಂಡಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅಸ್ತು, ಐತಿಹಾಸಿಕ ನಿರ್ಣಯ ಕೂಗೊಂಡ ಮೋದಿ ಸರ್ಕಾರ

ರಾಹುಲ್​​ ಗಾಂಧಿ ಬರೆದಿರುವ ಪತ್ರದಲ್ಲಿ ಈ ಹಿಂದೆ ಬಿಜೆಪಿ ಮಸೂದೆಯನ್ನು ಹೇಗೆ ಬೆಂಬಲಿಸಿತು ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಇದನ್ನು ‘ಐತಿಹಾಸಿಕ ಮತ್ತು ಮಹತ್ವಪೂರ್ಣ’ ಎಂದು ಕರೆದರು ಎಂಬುದರ ಬಗ್ಗೆ ತಿಳಿಸಿದ್ದಾರೆ. ಇನ್ನು ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳು ಈ ಮಸೂದೆಯನ್ನು ಅಂಗೀಕರಿಸಲು ಒತ್ತಾಯವನ್ನು ಮಾಡಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾಯಿತ ಪ್ರತಿನಿಧಿಗಳ ಲಿಂಗ ಅನುಪಾತಗಳ ಬಗ್ಗೆ ಸಂಸತ್ತಿನಲ್ಲಿ ತಿಳಿಸಿದ್ದರು. ಸಂಸತ್ತಿನಲ್ಲಿ ಕೇವಲ 14% ಮಹಿಳೆಯರಿದ್ದರೆ, ರಾಜ್ಯ ವಿಧಾನಸಭೆಗಳಲ್ಲಿ ಕೇವಲ 10% ಇದೆ ಎಂದು ಹೇಳಿದ್ದಾರೆ. ಇದನ್ನು ಹೆಚ್ಚಿಸಲು ಮತ್ತಷ್ಟು ಸಂವಿಧಾನಿ ಕ್ರಮ ಬೇಕು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ