ರಾಹುಲ್ ಗಾಂಧಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ

|

Updated on: Mar 24, 2023 | 1:03 PM

ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸುವ ಮೂಲಕ, ರಾಹುಲ್ ಗಾಂಧಿ  ಜಾತಿವಾದಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಅವರ ಇತ್ತೀಚಿನ ಟೀಕೆ ಬಗ್ಗೆ ಆಶ್ಚರ್ಯವೇನಿಲ್ಲ, ಕಳೆದ ಹಲವು ವರ್ಷಗಳಿಂದ ಅವರ ರಾಜಕೀಯ ಭಾಷಣಗಳ ಮಟ್ಟವೂ ಕೆಳಗಿಳಿದಿದೆ ಎಂದ ನಡ್ಡಾ.

ರಾಹುಲ್ ಗಾಂಧಿ ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ
ಜೆಪಿ ನಡ್ಡಾ
Follow us on

ದೆಹಲಿ: ರಾಹುಲ್ ಗಾಂಧಿಗೆ(Rahul Gandhi) ಸತ್ಯಗಳಲ್ಲದ ಕಪೋಲಕಲ್ಪಿತ ಆರೋಪಗಳನ್ನು ಮಾಡುವ ಅಭ್ಯಾಸವಿದೆ. ಅವರಿಗೆ ತಿಳುವಳಿಕೆ ಕಡಿಮೆ ಇದ್ದರೂ ಭಾರೀ ಅಹಂಕಾರವಿದೆ ಎಂದಿದ್ದಾರೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda). ಮೋದಿ ಸರ್​​ನೇಮ್ (Modi Surname) ಟೀಕೆಗಳ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆಯಾದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಟಾಪಟಿ ನಡುವೆ ಸರಣಿ ಟ್ವೀಟ್‌ ಮಾಡಿದ ನಡ್ಡಾ, ಸುಳ್ಳು, ವೈಯಕ್ತಿಕ ನಿಂದನೆ ಮತ್ತು ನಕಾರಾತ್ಮಕ ರಾಜಕೀಯವು ರಾಹುಲ್ ನ ರಾಜಕೀಯಕ್ಕೆ ಅವಿಭಾಜ್ಯ ಘಟಕವಾಗಿದೆ ಎಂದು ಆರೋಪಿಸಿದರು.2019ರಲ್ಲಿ ಅವರು ಅಮೇಠಿಯಲ್ಲಿ ಸೋತಿದ್ದು ಮತ್ತು ದೇಶದಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು 2024 ರ ಲೋಕಸಭೆ ಚುನಾವಣೆಯಲ್ಲಿ ಜನರು ಅವರಿಗೆ ನೀಡಲಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.

ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸುವ ಮೂಲಕ, ರಾಹುಲ್ ಗಾಂಧಿ  ಜಾತಿವಾದಿ ಮನಸ್ಥಿತಿಯನ್ನು ತೋರಿಸಿದ್ದಾರೆ. ಅವರ ಇತ್ತೀಚಿನ ಟೀಕೆ ಬಗ್ಗೆ ಆಶ್ಚರ್ಯವೇನಿಲ್ಲ, ಕಳೆದ ಹಲವು ವರ್ಷಗಳಿಂದ ಅವರ ರಾಜಕೀಯ ಭಾಷಣಗಳ ಮಟ್ಟವೂ ಕೆಳಗಿಳಿದಿದೆ ಎಂದು ಅವರು ಹೇಳಿದರು. ರಾಹುಲ್ ತಮ್ಮ ಹೇಳಿಕೆಗಳ ಬಗ್ಗೆ ಕ್ಷಮೆಯಾಚಿಸಲು ನ್ಯಾಯಾಲಯ ಮತ್ತು ಸಮುದಾಯದ ಸಲಹೆಗಳನ್ನು ಪದೇ ಪದೇ ನಿರ್ಲಕ್ಷಿಸಿದ್ದಾರೆ. ಈ ಅವಮಾನಕ್ಕೆ ಇಡೀ ಇತರೆ ಹಿಂದುಳಿದ ವರ್ಗಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲಿವೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.


ಅವರು ಪದೇ ಪದೇ ಒಬಿಸಿಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಾಗಿ ಸೂರತ್ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದೆ. ಆದರೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅವರ ದುರಹಂಕಾರದ ಕಾರಣದಿಂದ ಆ ಹೇಳಿಕೆ ಪರವಾಗಿಯೇ ನಿಂತುಕೊಂಡಿದೆ.

ಹೊಸದಾಗಿ ಸಿದ್ಧಪಡಿಸಿದ ಕಾಂಗ್ರೆಸ್ ಅಧ್ಯಕ್ಷರಾಗಿ, 2019 ರ ಲೋಕಸಭೆ ಚುನಾವಣೆಗೆ ಗಾಂಧಿಯವರ ಪ್ರಮುಖ ವಿಷಯವೆಂದರೆ ರಫೇಲ್ ಹಗರಣ ಆಗಿತ್ತು. ಅವರ ನಕಾರಾತ್ಮಕ ರಾಜಕೀಯ ಮತ್ತು ಅವರೇ ಉಂಟು ಮಾಡಿದ ರಫೇಲ್ ಹಗರಣವು ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಎದುರಿಸಿತು. ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯ, ಗೌರವಾನ್ವಿತ ಸುಪ್ರೀಂಕೋರ್ಟ್ ರಫೇಲ್ ವಿಷಯದ ಬಗ್ಗೆ ಸ್ಪಷ್ಟವಾದ ತೀರ್ಪು ನೀಡಿದ್ದು ಗಾಂಧಿ ಎತ್ತಿದ ಭ್ರಷ್ಟಾಚಾರದ ಕತೆಯನ್ನು ನಂಬಲಿಲ್ಲ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡ ನಡ್ಡಾ, ರಾಹುಲ್ ಗಾಂಧಿ ಅವರು ರಫೇಲ್ ವಿಚಾರದಲ್ಲಿ ತಪ್ಪುದಾರಿಗೆಳೆಯುವ ಹಕ್ಕುಗಳಿಗಾಗಿ ಸುಪ್ರೀಂಕೋರ್ಟ್‌ನಿಂದ ಕೂಡ ಛೀಮಾರಿ ಹಾಕಿದ್ದು ಅವರ ಕಪೋಲಕಲ್ಪಿತ ಆರೋಪಗಳಿಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದಿತ್ತು.
ತಮ್ಮ ಪಕ್ಷದೊಳಗಿನ ಹಿರಿಯ ನಾಯಕರ ಆಕ್ಷೇಪದ ನಡುವೆಯೂ ರಾಹುಲ್ ಗಾಂಧಿ “ಚೌಕಿದಾರ್ ಚೋರ್ ಹೈ” ಘೋಷಣೆಯನ್ನು ಕೂಗಿದರು ಎಂದು ಬಿಜೆಪಿ ಅಧ್ಯಕ್ಷರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾರಂತಹ ಉತ್ತಮ ನಾಯಕನನ್ನು ಕಳೆದುಕೊಂಡಿದ್ದು ಹೇಗೆ? ಆಜಾದ್ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳಿವು

ರಾಹುಲ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ತಮ್ಮ ಸ್ವಂತ ಕ್ಷೇತ್ರದಲ್ಲಿ (ಅಮೇಠಿ) ಸೋತರು. ದೇಶದಲ್ಲಿ ಕಾಂಗ್ರೆಸ್ ಇಲ್ಲದಾಯಿತು. ಈಗ ರಾಹುಲ್ ಗಾಂಧಿಯವರು ಇಡೀ ಒಬಿಸಿ ಸಮುದಾಯವನ್ನು ಕಳ್ಳರು ಎಂದು ಕರೆದಿದ್ದಾರೆ. ನ್ಯಾಯಾಲಯದಲ್ಲಿ ಹಿನ್ನಡೆ ಆದರೂ ಅವರು ಕ್ಷಮೆಯಾಚಿಸಲು ನಿರಾಕರಿಸುತ್ತಾರೆ. ಹೀಗೆ ಒಬಿಸಿಗಳ ಮೇಲಿನ ಅವರ ದ್ವೇಷವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ. 2019 ರಲ್ಲಿ ಭಾರತದ ಜನರು ಅವರನ್ನು ಕ್ಷಮಿಸಲಿಲ್ಲ, 2024 ರಲ್ಲಿ ಶಿಕ್ಷೆ ಇನ್ನಷ್ಟು ಕಠಿಣವಾಗಲಿದೆ ಎಂದು ನಡ್ಡಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ