ಸ್ಮೃತಿ ಇರಾನಿ ಬಗ್ಗೆ ಅವಹೇಳನ ಬೇಡ ಎಂದ ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿದ ಅಮೇಠಿ ಸಂಸದ

|

Updated on: Jul 13, 2024 | 1:13 PM

“ರಾಹುಲ್ ಗಾಂಧಿ ಹೇಳಿದ್ದು ಸರಿ. ಅವರು ತನ್ನ ಮಿತಿಯೊಳಗೆ ಇರುತ್ತಾರೆ. ನಾನು ಅವರ ಹೇಳಿಕೆಯನ್ನು ಒಪ್ಪುತ್ತೇನೆ. ಸೋಲು ಗೆಲುವುಗಳು ಜೀವನದ ಒಂದು ಭಾಗ. ನಾವು ಯಾರೊಬ್ಬರ ವಿರುದ್ಧ ಅಂತಹ ಭಾಷೆಯನ್ನು ಬಳಸಬಾರದು ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅಮೇಠಿ ಸಂಸದ ಕಿಶೋರಿ ಲಾಲ್ ಶರ್ಮಾ ಹೇಳಿದ್ದಾರೆ.

ಸ್ಮೃತಿ ಇರಾನಿ ಬಗ್ಗೆ ಅವಹೇಳನ ಬೇಡ ಎಂದ ರಾಹುಲ್ ಗಾಂಧಿ ಹೇಳಿಕೆ ಸಮರ್ಥಿಸಿದ ಅಮೇಠಿ ಸಂಸದ
ಕಿಶೋರಿ ಲಾಲ್ ಶರ್ಮಾ
Follow us on

ದೆಹಲಿ ಜುಲೈ 13: ಸ್ಮೃತಿ ಇರಾನಿ (Smriti Irani) ಅಥವಾ ಯಾವುದೇ ರಾಜಕಾರಣಿ ವಿರುದ್ಧ ‘ಅವಹೇಳನಕಾರಿ’ ಭಾಷೆ ಬಳಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದು ‘ಸರಿ’ ಎಂದು ಅಮೇಠಿ ಸಂಸದ ಕಿಶೋರಿ ಲಾಲ್ ಶರ್ಮಾ (Kishori Lal Sharma) ಶನಿವಾರ ಹೇಳಿದ್ದಾರೆ. 2024 ಲೋಕಸಭಾ ಚುನಾವಣೆಯಲ್ಲಿ ಕಿಶೋರಿ ಲಾಲ್ ಶರ್ಮಾ ಅವರ ಸ್ಮೃತಿ ಇರಾನಿಯನ್ನು ಪರಾಭವಗೊಳಿಸಿದ್ದರು.

“ರಾಹುಲ್ ಗಾಂಧಿ ಹೇಳಿದ್ದು ಸರಿ. ಅವರು ತನ್ನ ಮಿತಿಯೊಳಗೆ ಇರುತ್ತಾರೆ. ನಾನು ಅವರ ಹೇಳಿಕೆಯನ್ನು ಒಪ್ಪುತ್ತೇನೆ. ಸೋಲು ಗೆಲುವುಗಳು ಜೀವನದ ಒಂದು ಭಾಗ. ನಾವು ಯಾರೊಬ್ಬರ ವಿರುದ್ಧ ಅಂತಹ ಭಾಷೆಯನ್ನು ಬಳಸಬಾರದು ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಶರ್ಮಾ ಹೇಳಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಸ್ಪರ್ಧಿಸಿ ಸ್ಮೃತಿ ಇರಾನಿ ಗೆದ್ದುಕೊಂಡಿದ್ದರು. ಆದರೆ ಈ ಬಾರಿ ಅವರಿಗೆ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಪರಾಭವಗೊಂಡ ನಂತರ ಅವರು ದೆಹಲಿಯಲ್ಲಿದ್ದ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಬೆಂಬಲಿಗರು ಸ್ಮೃತಿ ಇರಾನಿ ಅವರನ್ನು ನಗೆಯಾಡಿದ್ದು, ಅವರ ವಿರುದ್ಧ ಯಾವುದೇ ಅವಹೇಳನಾಕಾರಿ ಪದಗಳನ್ನು ಬಳಸಬೇಡಿ ಎಂದು ವಿನಂತಿಸಿದ್ದಾರೆ.

ಜೀವನದಲ್ಲಿ ಸೋಲು-ಗೆಲುವು ಸಂಭವಿಸುತ್ತವೆ. ಅವಹೇಳನಕಾರಿ ಭಾಷೆ ಬಳಸುವುದನ್ನು ಮತ್ತು ಶ್ರೀಮತಿ ಸ್ಮೃತಿ ಇರಾನಿ ಅಥವಾ ಯಾವುದೇ ನಾಯಕರ ಬಗ್ಗೆ ಅಸಹ್ಯವಾಗಿ ವರ್ತಿಸಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ. ಜನರನ್ನು ಬೈಯುವುದು ಮತ್ತು ಅವಮಾನಿಸುವುದು ದೌರ್ಬಲ್ಯದ ಸಂಕೇತವೇ ಹೊರತು ಶಕ್ತಿಯಲ್ಲ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ಶುಕ್ರವಾರ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.

ಇರಾನಿ ಸೋತಿದ್ದಕ್ಕೆ ಕಾಂಗ್ರೆಸ್ ಬೆಂಬಲಿಗರ ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಪದೇ ಪದೇ ಗುರಿಯಾಗಿಸಿದ್ದರು, ಈಗ, ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಜನರ ಪ್ರಕಾರ, ಅವರ ಸೋಲಿನ ನಂತರ ಹಳೆಯ ಪಕ್ಷದ ಹಲವಾರು ಬೆಂಬಲಿಗರು ಅವರನ್ನು ಗುರಿಯಾಗಿಸಿದ್ದಾರೆ.

ಇದನ್ನೂ ಓದಿ: “ಕಾಂಗ್ರೆಸ್‌ನಂತೆ ನಾವು ಕೂಡ ತಪ್ಪು ಮಾಡಬಾರದು”; ಬಿಜೆಪಿಗೆ ನಿತಿನ್ ಗಡ್ಕರಿ ಎಚ್ಚರಿಕೆ

2019ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಅವರ ಭದ್ರಕೋಟೆಯಾದ ಅಮೇಠಿಯಲ್ಲಿ 55,000 ಮತಗಳ ಅಂತರದಿಂದ ಸೋಲಿಸಿದ್ದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದರು. ನಂತರ ಅವರು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ