ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​

|

Updated on: Mar 01, 2021 | 6:51 PM

ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಆಗಿದೆ. ಹೀಗಾಗಿ, ರಾಹುಲ್​ ಗಾಂಧಿ ತಮಿಳುನಾಡಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ಪುಶ್​-ಅಪ್ಸ್​ ಚಾಲೆಂಜ್​ ಸ್ವೀಕರಿಸಿದ್ದಾರೆ.

ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​
ಪುಶ್​-ಅಪ್ಸ್​ ತೆಗೆದ ರಾಹುಲ್​ ಗಾಂದಿ
Follow us on

ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ಅವರ ಸಿಕ್ಸ್​ ಪ್ಯಾಕ್​ ಫೋಟೋ ಇತ್ತೀಚೆಗೆ ವೈರಲ್​ ಆಗಿತ್ತು. ಈ ಫೋಟೋಗೆ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಹುಲ್​ ಗಾಂಧಿ ಮತ್ತೆ ಸುದ್ದಿಯಾಗಿದ್ದಾರೆ. ಅದೂ ಫಿಟ್​ನೆಸ್​ ವಿಚಾರಕ್ಕೆ. ಅವರು ಒಂದೇ ಕೈಯಲ್ಲಿ ಪುಶ್​-ಅಪ್ಸ್​ ತೆಗೆದಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಆಗಿದೆ. ಹೀಗಾಗಿ, ರಾಹುಲ್​ ಗಾಂಧಿ ತಮಿಳುನಾಡಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಅವರು ತಮಿಳುನಾಡಿನ ತಿರುನಲ್ವೇಲಿಯ ಸೇಂಟ್ ಕ್ಸೇವಿಯರ್ಸ್​ ಕಾಲೇಜಿನ ವಿದ್ಯಾರ್ಥಿ ಮತ್ತು ಶಿಕ್ಷಕರ ಜತೆ ಸಂವಾದ ನಡೆಸಿದ್ದಾರೆ. ಈ ವೇಳೆ 10 ನೇ ತರಗಿ ವಿದ್ಯಾರ್ಥಿಯೋರ್ವ ಪುಶ್​-ಅಪ್ಸ್​ ಚಾಲೆಂಜ್​ ಹಾಕಿದ್ದಾರೆ. ಇದನ್ನು ರಾಹುಲ್​ ಗಾಂಧಿ ಒಪ್ಪಿಕೊಂಡಿದ್ದಾರೆ.

ಜನರ ಮಧ್ಯೆಯೇ ರಾಹುಲ್​ ಗಾಂಧಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಪುಶ್​-ಅಪ್​ ನಡೆಸಿದ್ದಾರೆ. ವಿದ್ಯಾರ್ಥಿ ತೆಗೆದಷ್ಟು ಡಿಪ್ಸ್​ ತೆಗೆಯೋಕೆ ರಾಹುಲ್​ ಗಾಂಧಿ ಬಳಿ ಸಾಧ್ಯವಾಗಿಲ್ಲ. ಇದಾದ ಬೆನ್ನಲ್ಲೇ ರಾಹುಲ್​ ಗಾಂಧಿ ಒಂದೇ ಕೈ ಮೂಲಕ ಪುಶ್​-ಅಪ್ಸ್​ ತೆಗೆದು ಅಚ್ಚರಿ ಮೂಡಿಸಿದ್ದಾರೆ. ಎರಡೂ ಕೈಯಲ್ಲಾದರೆ ಡಿಪ್ಸ್​ ತೆಗೆಯೋದು ಸುಲಭ. ಆದರೆ, ಒಂದೇ ಕೈಯಲ್ಲಿ ಡಿಪ್ಸ್​ ತೆಗೆಯುವುದು ಕಷ್ಟ.

ಏನಿದು ಸಿಕ್ಸ್ ಪ್ಯಾಕ್​ ಸಮಾಚಾರ?
ಇತ್ತೀಚೆಗೆ ರಾಹುಲ್​ ಗಾಂಧಿ ಕೇರಳಕ್ಕೆ ತೆರಳಿದ್ದರು. ಈ ವೇಳೆ ಅವರು ಸಮುದ್ರಕ್ಕೆ ತೆರಳಿ ಮೀನುಗಾರರೊಂದಿಗೆ ಈಜಿದ್ದಾರೆ. ಈ ವೇಳೆ ಅವರ ಆ್ಯಬ್ಸ್​ ಫೋಟೋ ವೈರಲ್​ ಆಗಿದೆ. ಈ ಫೋಟೋಗೆ ಅನೇಕರು ಕಮೆಂಟ್​ ಮಾಡಿದ್ದು, ಫಿಟ್​ನೆಸ್​ ಟಿಪ್ಸ್​ ಕೇಳಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಘೋಷಿಸಿದ ಲಾಕ್​ಡೌನ್​ನಿಂದ ಇಡೀ ದೇಶ ಸ್ತಬ್ಧವಾಗಿತ್ತು. ಹೀಗಾಗಿ, ಜಿಮ್​ಗಳು ಬಂದ್​ ಆಗಿದ್ದವು. ಇದೇ ಕಾರಣಕ್ಕೆ ಅನೇಕರು ಫಿಟ್​ನೆಸ್​ ಕಳೆದುಕೊಂಡಿದ್ದರು. ಆದರೆ, ಈ ಸಂದರ್ಭದಲ್ಲೂ ರಾಹುಲ್​ ಗಾಂಧಿ ಜಿಮ್​ ಬಿಟ್ಟಿಲ್ಲ ಎನ್ನುವುದು ಈ ಫೋಟೋ ಮೂಲಕ ಸಾಬೀತಾಗಿತ್ತು.

ಇದನ್ನೂ ಓದಿ: ಸಿಕ್ಸ್​​ ಪ್ಯಾಕ್​​ನಲ್ಲಿ ಮಿಂಚಿದ ರಾಹುಲ್​ ಗಾಂಧಿ; ಫಿಟ್​ನೆಸ್​ ಟಿಪ್ಸ್​ ಕೇಳಿದ ಸೆಲೆಬ್ರಿಟಿಗಳು

Published On - 6:50 pm, Mon, 1 March 21