ಮುಂಬೈ: ರಾಹುಲ್ ಗಾಂಧಿ (Rahul Gandhi) ಯವರ ಸಾವರ್ಕರ್ ಹೇಳಿಕೆಗೆ ಕಾಂಗ್ರೆಸ್ ಔತಣಕೂಟವನ್ನು ಉದ್ಧವ್ ಠಾಕ್ರೆ (Uddhav Thackeray) ಬಹಿಷ್ಕರಿಸಿದ್ದಾರೆ. ಪ್ರಧಾನಿ ಮೋದಿ ಉಪನಾಮದ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ರಾಹುಲ್ ಗಾಂಧಿಯವರಿಗೆ ಸೂರತ್ ಕೋರ್ಟ್ 2 ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತ್ತು, ನಂತರ 30 ದಿನಗಳ ಜಾಮೀನು ಕೂಡ ನೀಡಿತ್ತು. ನಂತರ ಲೋಕಸಭೆಯ ಸ್ಪೀಕರ್ ಅವರು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿತ್ತು. ಆ ಬಳಿಕ ರಾಹುಲ್ ಪತ್ರಿಕೋಷ್ಠಿಯಲ್ಲಿ ಮಾತನಾಡುವ ವೇಳೆ ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ ಎಂಬ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ.
ವಿಡಿ ಸಾವರ್ಕರ್ ಬಗ್ಗೆ ರಾಹುಲ್ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಮಿತ್ರ ಪಕ್ಷ ಉದ್ಧವ್ ಠಾಕ್ರೆ ಅವರು ದೆಹಲಿಯಲ್ಲಿ ಕಾಂಗ್ರೆಸ್ನ ಔತಣಕೂಟವನ್ನು ಬಿಟ್ಟುಬಿಡುವುದಾಗಿ ಘೋಷಿಸಿದ್ದಾರೆ. “ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲ” ಎಂಬ ಹೇಳಿಕೆಯು ಠಾಕ್ರೆಯವರ ಪಕ್ಷವನ್ನು ತೀವ್ರವಾಗಿ ಅಸಮಾಧಾನಗೊಳಿಸಿದೆ.
ಇಂದು ಮುಂಜಾನೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , ರಾಹುಲ್ ಗಾಂಧಿಯವರು “ನಮ್ಮ ದೇವರನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ” ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಬಿಡುವುದಾಗಿ ಎಚ್ಚರಿಕೆ ನೀಡಿದ್ದರು.
Published On - 4:15 pm, Mon, 27 March 23