AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್‌ನ ಕಪ್ಪು ಬಟ್ಟೆ ಧರಿಸಿದರೂ ಅದು ಅವರ ಕರಾಳ ಕೃತ್ಯಗಳನ್ನು ಮರೆಮಾಡುವುದಿಲ್ಲ: ಅನುರಾಗ್ ಠಾಕೂರ್

ರಾಹುಲ್ ಗಾಂಧಿ ಅವರಿಗೆ ಎಷ್ಟು ಅಹಂ ಇದೆಯೆಂದರೆ ಅವರು ನ್ಯಾಯಾಲಯದ ಒಳಗೆ ಕೂಡಾ ಒಬಿಸಿ ಸಮುದಾಯಕ್ಕೆ ಕ್ಷಮೆಯಾಚಿಸಲು ಒಪ್ಪಲಿಲ್ಲ. ನ್ಯಾಯಾಲಯದ ಆದೇಶ ಬಂದಾಗ ಅದನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂದು ಠಾಕೂರ್ ಹೇಳಿದರು

ಕಾಂಗ್ರೆಸ್‌ನ ಕಪ್ಪು ಬಟ್ಟೆ ಧರಿಸಿದರೂ ಅದು ಅವರ ಕರಾಳ ಕೃತ್ಯಗಳನ್ನು ಮರೆಮಾಡುವುದಿಲ್ಲ: ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
ರಶ್ಮಿ ಕಲ್ಲಕಟ್ಟ
|

Updated on: Mar 27, 2023 | 3:31 PM

Share

ಲೋಕಸಭೆಯಿಂದ ರಾಹುಲ್ ಗಾಂಧಿಯನ್ನು (Rahul Gandhi) ಅನರ್ಹಗೊಳಿಸಿರುವುದನ್ನು ವಿರೋಧಿಸಿ ಮಲಿಕಾರ್ಜುನ ಖರ್ಗೆ (Mallikarjaun Kharge) ನೇತೃತ್ವದ ಪ್ರತಿಪಕ್ಷಗಳ ಪ್ರತಿಭಟನೆಯ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್(Anurag Thakur) ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್​​ಗೆ ಕಪ್ಪು ಬಟ್ಟೆ ಧರಿಸಿ ಬಂದು ವಿಪಕ್ಷಗಳು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಠಾಕೂರ್,’ಕಾಂಗ್ರೆಸ್ ಪಕ್ಷದ ಕರಾಳ ಕೃತ್ಯಗಳನ್ನು ಕಪ್ಪು ಬಟ್ಟೆಯ ಅಡಿಯಲ್ಲಿ ಮರೆಮಾಡಲು ಸಾಧ್ಯವಿಲ್ಲ. ಪಕ್ಷವು ಮುಂದೆ ಬ್ಲ್ಯಾಕ್ ಮ್ಯಾಜಿಕ್ ಅನ್ನು ಆಶ್ರಯಿಸುತ್ತದೆ ಎಂದಿದ್ದಾರೆ.ಅವರು ಎಂದಿಗೂ ಸಾವರ್ಕರ್ ಆಗಲು ಸಾಧ್ಯವಿಲ್ಲ, ಏಕೆಂದರೆ ಸಾವರ್ಕರ್ ಅವರು ಆರು ತಿಂಗಳ ಕಾಲ ವಿದೇಶ ಪ್ರವಾಸಕ್ಕೆ ಹೋಗಲಿಲ್ಲ. ಅವರು ಈಗ ಈ ನಾಟಕವನ್ನು ಯಾಕೆ ಮಾಡುತ್ತಿದ್ದಾರೆ ಎಂದು ಕೇಳಿದ ಠಾಕೂರ್, ರಾಹುಲ್ ಗಾಂಧಿ ಮತ್ತು ಅವರ ಪಕ್ಷವು ಒಬಿಸಿ ಸಮುದಾಯವನ್ನು ಅಗೌರವಿಸುವ ಅಭ್ಯಾಸವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಎಷ್ಟು ಅಹಂ ಇದೆಯೆಂದರೆ ಅವರು ನ್ಯಾಯಾಲಯದ ಒಳಗೆ ಕೂಡಾ ಒಬಿಸಿ ಸಮುದಾಯಕ್ಕೆ ಕ್ಷಮೆಯಾಚಿಸಲು ಒಪ್ಪಲಿಲ್ಲ. ನ್ಯಾಯಾಲಯದ ಆದೇಶ ಬಂದಾಗ ಅದನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ ಎಂದು ಠಾಕೂರ್ ಹೇಳಿದರು.ಅದಾನಿ ವಿಷಯ ಮತ್ತು ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಪ್ರತಿಭಟಿಸಲು ಹಲವಾರು ವಿರೋಧ ಪಕ್ಷದ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿನಿಂದ ವಿಜಯ್ ಚೌಕ್‌ವರೆಗೆ ಮೆರವಣಿಗೆ ನಡೆಸಿದ್ದಾರೆ.

ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಭಟನಾಕಾರರು ಸಂಸತ್ತಿನ ಸಂಕೀರ್ಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಸತ್ಯಮೇವ ಜಯತೇ ಎಂಬ ಬೃಹತ್ ಬ್ಯಾನರ್ ಮತ್ತು ಪ್ರಜಾಪ್ರಭುತ್ವ ಉಳಿಸಿ ಎಂದು ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಸಂಸದರು ವಿಜಯ್ ಚೌಕ್ ಕಡೆಗೆ ತೆರಳಿ ಅಲ್ಲಿ ಧರಣಿ ನಡೆಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಸಂಪತ್ತು ಎಷ್ಟು ಪಟ್ಟು ಹೆಚ್ಚಿದೆ?. ನೀವು ವಿದೇಶಗಳಿಗೆ ಹೋಗುವಾಗ ಎಷ್ಟು ಬಾರಿ ಕೈಗಾರಿಕೋದ್ಯಮಿಯನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿದ್ದೀರಿ. ಅದಾನಿ ವಿರುದ್ಧ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಧಾನಿಗೆ ಸಾಧ್ಯವಾಗಿಲ್ಲ ಎಂದು ವಿಜಯ್ ಚೌಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಹೇಳಿದ್ದಾರೆ.

ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಯಾಗಬೇಕು. ಇದಕ್ಕೆ ಸರ್ಕಾರ ಏಕೆ ಒಪ್ಪುತ್ತಿಲ್ಲ? ನೀವು ಜೆಪಿಸಿ ತನಿಖೆಗೆ ಏಕೆ ಹೆದರುತ್ತಿದ್ದೀರಿ… ಇದರರ್ಥ ‘ದಾಲ್ ಮೇ ಕುಚ್ ಕಾಲಾ ಹೈ’ (ಏನೋ ತಪ್ಪಾಗಿದೆ)” ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: Congress Protest: ಸಂಸದ ಸ್ಥಾನದಿಂದ ರಾಹುಲ್ ಅನರ್ಹ: ಸಂಸತ್​ನಲ್ಲಿ ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಸಂಸದರಿಂದ ಪ್ರತಿಭಟನೆ

2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ಕೋರ್ಟ್ ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಖರ್ಗೆ ಅವರು ಸಂಸದರಾಗಿ ರಾಹುಲ್ ಗಾಂಧಿ ಅನರ್ಹತೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನೀವು ರಾಹುಲ್ ಗಾಂಧಿಯ ಮಾನಹಾನಿ ಮಾಡಲು ಬಯಸುತ್ತೀರಿ ಅದಕ್ಕಾಗಿಯೇ ಕರ್ನಾಟಕದ ಕೋಲಾರದಲ್ಲಿ ನೀಡಿದ ಹೇಳಿಕೆ ಪ್ರಕರಣವನ್ನು ನೀವು ಗುಜರಾತ್‌ಗೆ ವರ್ಗಾಯಿಸಿದ್ದೀರಿ. ಇಂದು ಪ್ರಜಾಪ್ರಭುತ್ವಕ್ಕೆ ಕರಾಳ ದಿನ.ಪ್ರಧಾನಿಯವರು ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು ಎಂದು ಖರ್ಗೆ ಹೇಳಿದರು.

ಇದುವರೆಗೆ ಪ್ರತಿಪಕ್ಷಗಳ ಪ್ರತಿಭಟನೆಯಿಂದ ದೂರ ಉಳಿದಿರುವ ತೃಣಮೂಲ ಕಾಂಗ್ರೆಸ್ ಸೋಮವಾರ ಧರಣಿ ಕುಳಿತಿದೆ. ಇದಕ್ಕೂ ಮೊದಲು, ಕಾಂಗ್ರೆಸ್, ಟಿಎಂಸಿ, ಬಿಆರ್‌ಎಸ್ ಮತ್ತು ಎಸ್‌ಪಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣದಲ್ಲಿ ಸಭೆ ಸೇರಿ ಅದಾನಿ ವಿಷಯ ಮತ್ತು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಅನರ್ಹತೆಯ ವಿಷಯವನ್ನು ಮುಂದಕ್ಕೆ ಕೊಂಡೊಯ್ಯುವ ಕಾರ್ಯತಂತ್ರವನ್ನು ಚರ್ಚಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್
104 ಮೀಟರ್​ ಸಿಕ್ಸರ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಮ್ಯಾಕ್ಸ್​ವೆಲ್