ಭಾರತವು ಮಾತನಾಡಲು ಅವಕಾಶವಿಲ್ಲದ ದೇಶವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಲಂಡನ್‌ನಲ್ಲಿ ನಡೆದ ‘ಐಡಿಯಾಸ್ ಫಾರ್ ಇಂಡಿಯಾ’ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ರಾಹುಲ್, ‘‘ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿಯಾದವರು ಹೊಂದಿರಬೇಕು. ಆದರೆ ನಮ್ಮ ಪ್ರಧಾನಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ’’ ಎಂದು ಟೀಕಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ಮಾತನಾಡಲು ಅನುಮತಿಸದ ದೇಶವನ್ನು ಮತ್ತು ಮುಕ್ತವಾಗಿ ಮಾತನಾಡದ ಪ್ರಧಾನಿಯನ್ನು ನಾವು ಹೊಂದಲು ಸಾಧ್ಯವಿಲ್ಲ’’ ಎಂದಿದ್ದಾರೆ.
ರಾಹುಲ್ ಮಾತುಗಳು ಇಲ್ಲಿವೆ:
The Prime Minister must have an attitude that ‘I want to listen’.
And from there everything flows down.
But our Prime Minister doesn’t LISTEN.
: Shri @RahulGandhi #IdeasForIndia pic.twitter.com/8b8AJKM9LD
— Congress (@INCIndia) May 21, 2022
ಚರ್ಚೆಯ ವೇಳೆ ರಾಹುಲ್ ಗಾಂಧಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳನ್ನೂ ಟೀಕಿಸಿದ್ದಾರೆ. ‘‘ಭಾರತವೆಂದರೆ ಅದರ ಜನರು ಎಂದು ನಾವು ನಂಬುತ್ತೇವೆ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಭಾರತವು ಕೇವಲ ಭೌಗೋಳಿಕ ಪ್ರದೇಶ ಎಂದು ನಂಬುತ್ತದೆ. ಇದು ‘ಸೋನೆ ಕಿ ಚಿಡಿಯಾ’ (ಚಿನ್ನದ ಹಕ್ಕಿ) ಆಗಿದ್ದು, ಅದರ ಪ್ರಯೋಜನಗಳು ಕೆಲವರಿಗೆ ಮಾತ್ರ ಸಿಗುತ್ತವೆ. ನಮ್ಮ ಪ್ರಕಾರ ನೀವು ದಲಿತರಾಗಿದ್ದರೂ, ಬ್ರಾಹ್ಮಣರಾಗಿದ್ದರೂ ಎಲ್ಲರಿಗೂ ಸಮಾನ ಪ್ರವೇಶ ಇರಬೇಕು’’ ಎಂದು 51 ವರ್ಷದ ರಾಹುಲ್ ಹೇಳಿದ್ದಾರೆ.
ಭಾರತದ ಪ್ರಜಾಪ್ರಭುತ್ವವು ಜಗತ್ತಿನ ಕೇಂದ್ರ ಆಧಾರವಾಗಿದೆ ಎಂದ ರಾಹುಲ್, ‘‘ಭಾರತದಲ್ಲಿನ ಪ್ರಜಾಪ್ರಭುತ್ವವು ಜಾಗತಿಕವಾಗಿ ಒಳ್ಳೆಯದು. ಇದು ನಮ್ಮ ಗ್ರಹಕ್ಕೇ ಕೇಂದ್ರ ಆಧಾರವಾಗಿದೆ. ಏಕೆಂದರೆ ನಾವು ಪ್ರಜಾಪ್ರಭುತ್ವವನ್ನು ಹೊಂದಿರುವ ಪ್ರಮಾಣದಲ್ಲಿ ಅದನ್ನು ಸರಿಯಾಗಿ ನಿರ್ವಹಿಸಿದವರು ನಾವು ಮಾತ್ರ. ಒಂದುವೇಳೆ ಅದು ಬಿರುಕು ಬಿಟ್ಟರೆ ಜಗತ್ತಿಗೆ ತೊಂದರೆಯಾಗುತ್ತದೆ. ಅದನ್ನೇ ಅಮೇರಿಕಾ ಈಗ ಅರಿತುಕೊಳ್ಳುತ್ತಿದೆ’’ ಎಂದು ಹೇಳಿದ್ದಾರೆ.
Democracy in India is a global public good. We’re the only people who have managed democracy at our unparalleled scale.
Had an enriching exchange on a wide range of topics at the #IdeasForIndia conference in London. pic.twitter.com/QyiIcdFfjN
— Rahul Gandhi (@RahulGandhi) May 20, 2022
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದಿರುವ ರಾಹುಲ್ ‘ಸಂವಾದಗಳನ್ನು ನಡೆಸಲು ಅನುಮತಿಸುವ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್ದ್ದು ಅಲ್ಲ
2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ತನ್ನ ಮೂರು ದಿನಗಳ ಮೆಗಾ ಸಮಾವೇಶವನ್ನು ಇತ್ತೀಚೆಗೆ ಪೂರ್ಣಗೊಳಿಸಿತ್ತು. ಒಂದು ವಾರದ ನಂತರ ಇದೀಗ ಲಂಡನ್ ಸಮ್ಮೇಳನದಲ್ಲಿ ರಾಹುಲ್ ನೀಡಿರುವ ಹೇಳಿಕೆಗಳಿಗೆ ಬಿಜೆಪಿ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ