ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅನಂತ್ ಅಂಬಾನಿ ಮದುವೆಯಲ್ಲಿದ್ದರೆ ರಾಹುಲ್​ ಗಾಂಧಿ ಇದ್ದಿದ್ದೆಲ್ಲಿ ನೋಡಿ

ಅನಂತ್ ಅಂಬಾನಿ ಮದುವೆಗೆ ಬಾರದ ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಿಜ್ಜೇರಿಯಾದಲ್ಲಿ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಖುದ್ದಾಗಿ ಮುಕೇಶ್​ ಅಂಬಾನಿ ಸೋನಿಯಾ ಗಾಂಧಿ ಅವರ ಮನೆಗೆ ಹೋಗಿ ಮದುವೆ ಆಮಂತ್ರಣ ಕೊಟ್ಟಿದ್ದರೂ ಕೂಡ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಮದುವೆಗೆ ಭೇಟಿ ನೀಡಿಲ್ಲ

ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅನಂತ್ ಅಂಬಾನಿ ಮದುವೆಯಲ್ಲಿದ್ದರೆ ರಾಹುಲ್​ ಗಾಂಧಿ ಇದ್ದಿದ್ದೆಲ್ಲಿ ನೋಡಿ
ರಾಹುಲ್ ಗಾಂಧಿ

Updated on: Jul 14, 2024 | 11:28 AM

ದೇಶದ ಖ್ಯಾತ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಜುಲೈ 12 ರ ಶುಕ್ರವಾರದಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು. ಅನಂತ್ ಅಂಬಾನಿ ಅವರ ಮದುವೆ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಅನಂತ್ ಅವರ ಮದುವೆಯಲ್ಲಿ ಭಾರತ ಮತ್ತು ವಿದೇಶಗಳಿಂದ ಅನೇಕ ದೊಡ್ಡ ಅತಿಥಿಗಳು ಭಾಗವಹಿಸಿದ್ದರು.

ಇಷ್ಟೇ ಅಲ್ಲ, ಭಾರತದ ರಾಜಕೀಯ ಪಕ್ಷಗಳ ಜನರು ಅನಂತ್ ಅಂಬಾನಿ ಅವರ ಮದುವೆಯಲ್ಲಿ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಥವಾ ಅವರ ಕುಟುಂಬದ ಸದಸ್ಯರು ಅಂತರ ಕಾಯ್ದುಕೊಂಡಿದ್ದರು.

ಆ ಸಮಯದಲ್ಲಿ ರಾಹುಲ್​ ಗಾಂಧಿ ಪಿಜ್ಜೇರಿಯಾದಲ್ಲಿ ಊಟ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದ ರಾಹುಲ್ ಗಾಂಧಿ ಎದುರು ಕುಳಿತಿದ್ದ ವ್ಯಕ್ತಿಯ ಜತೆ ಸಂಭಾಷಣೆ ನಡೆಸುತ್ತಿದ್ದರು.

ಅನಂತ್ ಅಂಬಾನಿ ಮದುವೆಗೆ ಬಾರದ ರಾಹುಲ್ ಗಾಂಧಿ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಅಭಿಮಾನಿಗಳು ಅವರನ್ನು ತತ್ವ ಇಟ್ಟುಕೊಂಡಿರುವ ರಾಜಕಾರಣಿ ಎಂದು ಕರೆಯುತ್ತಿದ್ದಾರೆ. ರಾಹುಲ್ ಗಾಂಧಿ ಏನು ಹೇಳುತ್ತಾರೋ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ ಎಂದು ಬಳಕೆದಾರರು ಹೇಳುತ್ತಿದ್ದಾರೆ.

ಮತ್ತಷ್ಟು ಓದಿ:ಉಪಚುನಾವಣೆಯಲ್ಲಿ ಇಂಡಿಯಾ ಬಣಕ್ಕೆ ಭರ್ಜರಿ ಗೆಲುವು; ಬಿಜೆಪಿಯ ಭಯದ ಜಾಲ ತುಂಡಾಗಿದೆ: ರಾಹುಲ್ ಗಾಂಧಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಎನ್‌ಸಿಪಿ (ಅಜಿತ್ ಪವಾರ್) ಮುಖ್ಯಸ್ಥ ಅಜಿತ್ ಪವಾರ್, ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸ್ಮೃತಿ ಇರಾನಿ, ಶಿವಸೇನಾ ಯು.ಬಿ.ಟಿ. . ಪ್ರಿಯಾಂಕಾ ಚತುರ್ವೇದಿ, ಹಿರಿಯ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವು ನಾಯಕರು ಅನಂತ್ ಅಂಬಾನಿ ಅವರ ವಿವಾಹದಲ್ಲಿ ಭಾಗವಹಿಸಿದ್ದರು.

ಆದರೆ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಮದುವೆಗೆ ಹಾಜರಾಗಲಿಲ್ಲ. ಆದರೆ, ಮುಖೇಶ್ ಅಂಬಾನಿ ಸ್ವತಃ ದೆಹಲಿಗೆ ಬಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ್ದರು.
ಇಷ್ಟೆಲ್ಲಾ ಆದರೂ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಮದುವೆಗೆ ಹಾಜರಾಗಿರಲಿಲ್ಲ.

ವಾಸ್ತವವಾಗಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅದಾನಿ-ಅಂಬಾನಿ ವಿಷಯವನ್ನು ಬಲವಾಗಿ ಎತ್ತಿದ್ದರು. ಪ್ರಧಾನಿ ಮೋದಿ ಜಿಯೋ ವರ್ಲ್ಡ್​ ಸೆಂಟರ್​ಗೆ ಭೇಟಿ ನೀಡಿದ್ದರು. ನವ ವಧು-ವರನನ್ನು ಆಶೀರ್ವಧಿಸಿದ್ದರು.

ಅಂಬಾನಿ ಮದುವೆಯಲ್ಲಿ ಹಲವು ಎನ್‌ಡಿಎ ನಾಯಕರು ಕಾಣಿಸಿಕೊಂಡಿದ್ದರು. ಇವರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ