ಸಂಸದ ಸ್ಥಾನ ಮರುಸ್ಥಾಪನೆ ಬಳಿಕ ಮೊದಲ ಬಾರಿಗೆ ವಯನಾಡಿಗೆ ಭೇಟಿ ನೀಡಲಿದ್ದಾರೆ ರಾಹುಲ್ ಗಾಂಧಿ

Rahul Gandhi Wayanad Visit: ಸಂಸದ ಸ್ಥಾನದ ಮರುಸ್ಥಾಪನೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ನೀಡಲಿದ್ದಾರೆ. ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು ಆದರೆ ಸುಪ್ರೀಂಕೋರ್ಟ್​ ಶಿಕ್ಷೆಗೆ ತಡೆ ನೀಡಿದೆ.

ಸಂಸದ ಸ್ಥಾನ ಮರುಸ್ಥಾಪನೆ ಬಳಿಕ ಮೊದಲ ಬಾರಿಗೆ ವಯನಾಡಿಗೆ ಭೇಟಿ ನೀಡಲಿದ್ದಾರೆ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
ನಯನಾ ರಾಜೀವ್
|

Updated on:Aug 11, 2023 | 2:08 PM

ಸಂಸದ ಸ್ಥಾನದ ಮರುಸ್ಥಾಪನೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಯನಾಡಿಗೆ ಭೇಟಿ ನೀಡಲಿದ್ದಾರೆ. ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು ಆದರೆ ಸುಪ್ರೀಂಕೋರ್ಟ್​ ಶಿಕ್ಷೆಗೆ ತಡೆ ನೀಡಿದೆ. ಹೀಗಾಗಿ ಅವರ ಸಂಸದ ಸ್ಥಾನ ಮರುಸ್ಥಾಪನೆಗೊಂಡಿದೆ. ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡ್ ಗೆ ಆಗಸ್ಟ್ 12-13 ರಂದು ಭೇಟಿ ನೀಡಲಿದ್ದಾರೆ ಎಂದು ಕೆಸಿ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ವಯನಾಡಿನ ಜನತೆ ಪ್ರಜಾಪ್ರಭುತ್ವವನ್ನು ಗೆದ್ದು ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಮರಳಿ ಪಡೆದಿರುವುದಕ್ಕೆ ಸಂತಸಗೊಂಡಿದ್ದಾರೆ. ರಾಹುಲ್ ಗಾಂಧಿ ತಮ್ಮ ಸಂಸದರಷ್ಟೇ ಅಲ್ಲ ಕುಟುಂಬದ ಸದಸ್ಯರಂತೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಮತ್ತಷ್ಟು ಓದಿ: ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪನೆ, ಇಂದಿನ ಕಲಾಪದಲ್ಲಿ ಭಾಗಿ

ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಕ್ಷೇತ್ರವಾದ ವಯನಾಡ್ ತಲುಪಲಿದ್ದಾರೆ. ಮಾರ್ಚ್‌ನಲ್ಲಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು, ಅದಾದ ಬಳಿಕ ಮೊದಲ ಬಾರಿಗೆ ವಯನಾಡಿಗೆ ಹಿಂತಿರುಗುತ್ತಿರುವ ರಾಹುಲ್ ಅವರನ್ನು ಸ್ವಾಗತಿಸಲು ವಯನಾಡು ಜಿಲ್ಲಾ ಕಾಂಗ್ರೆಸ್ ಸಮಿತಿಯು ವಿಸ್ತೃತ ಯೋಜನೆಗಳನ್ನು ರೂಪಿಸಿದೆ.

ವರದಿಗಳ ಪ್ರಕಾರ ರಾಹುಲ್ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಂಸದರ ನಿಧಿಯಿಂದ ನಿರ್ಮಿಸಲಾದ ಮನೆಗಳ ಕೀಲಿಕೈ ಹಸ್ತಾಂತರಿಸುವ ಕಾರ್ಯಕ್ರಮವೂ ಇದೆ. ಭಾನುವಾರ ಮಾನಂತವಾಡಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

2019 ರಲ್ಲಿ ಕ್ಷೇತ್ರದಿಂದ ಶೇಕಡಾ 60 ಕ್ಕೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಗೆದ್ದಿದ್ದ ರಾಹುಲ್, ಸುಮಾರು ನಾಲ್ಕು ತಿಂಗಳ ಕಾಲ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:08 pm, Fri, 11 August 23