ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಗರಿಗೆದರಿರುವ ಸೇನಾ ಚಟುವಟಿಕೆಗಳು ದೇಶದ ರಾಜಕೀಯ ರಂಗದಲ್ಲೂ ಪ್ರತಿಧ್ವನಿಸಿದೆ. ಭಾನುವಾರ ನಡೆದ ಬಿಜೆಪಿ ವರ್ಚುವಲ್ ಱಲಿಯಲ್ಲಿ ಭಾರತದ ರಕ್ಷಣಾ ನೀತಿಗೆ ವಿಶ್ವದಲ್ಲೇ ಮಾನ್ಯತೆ ದೊರತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಈ ಹೇಳಿಕೆಯೇ ಈಗ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ಟ್ವಿಟರ್ ಸಮರಕ್ಕೆ ನಾಂದಿ ಹಾಡಿದೆ. ಈ ಸಮರದಲ್ಲಿ ರಾಹುಲ್ ಗಾಂಧಿ ಕೆಲವು ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಅಮಿತ್ ಶಾ ಹೇಳಿಕೆಗೆ ಟಾಂಗ್ ನೀಡಿದ್ದ ರಾಹುಲ್ ಗಾಂಧಿ ಸೋಮವಾರದಂದು ಖ್ಯಾತ ಉರ್ದು ಕವಿ ಮಿರ್ಜಾ ಘಾಲಿಬ್ ರವರ ಕವಿತೆಯ ಸಾಲುಗಳನ್ನು ಕೊಂಚ ತಿರುಚಿ ಶಾ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ರಾಜನಾಥ್ ಸಿಂಗ್ ಅವರು ಸಹ ಕಣಕ್ಕಿಳಿದು ಅದೇ ಕವಿಯ ಮತ್ತೊಂದು ಕವಿತೆಯ ಸಾಲುಗಳನ್ನು ತಿರುಚಿ ಕಾಂಗ್ರೆಸ್ ಪಕ್ಷದ ಚಿಹ್ನೆಯಾದ ಹಸ್ತದ ಬಗ್ಗೆ ಪರೋಕ್ಷವಾಗಿ ಕುಟುಕಿದ್ದರು. ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ‘ನಮ್ಮ ಪಕ್ಷದ ಚಿಹ್ನೆಯ ಬಗ್ಗೆ ಹೇಳಿಕೆ ನೀಡುವುದು ಮುಗಿದಿದ್ದರೆ, ಲಡಾಖ್ನಲ್ಲಿ ಭಾರತದ ನೆಲವನ್ನು ಚೀನಾ ಆಕ್ರಮಿಸಿಕೊಂಡಿದ್ಯಾ? ಎಂಬುದಕ್ಕೆ ಉತ್ತರಿಸಿ’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
Once RM is done commenting on the hand symbol, can he answer:
Have the Chinese occupied Indian territory in Ladakh?
— Rahul Gandhi (@RahulGandhi) June 9, 2020
Published On - 5:00 pm, Tue, 9 June 20