AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Gandhi: ಮಾನನಷ್ಟ ಮೊಕದ್ದಮೆಯಲ್ಲಿ ವಿನಾಯಿತಿ ಕೋರಿದ ರಾಹುಲ್ ಗಾಂಧಿ ಅರ್ಜಿ ಏಪ್ರಿಲ್ 15 ರಂದು ವಿಚಾರಣೆ

ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಲು, ಪಕ್ಷದ ಕೆಲಸಕ್ಕೆ ಹಾಜರಾಗಲು ಮತ್ತು ಸಾಕಷ್ಟು ಪ್ರಯಾಣಿಸಬೇಕಾಗಿ ಬರುವುದರಿಂದ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು

Rahul Gandhi: ಮಾನನಷ್ಟ ಮೊಕದ್ದಮೆಯಲ್ಲಿ ವಿನಾಯಿತಿ ಕೋರಿದ ರಾಹುಲ್ ಗಾಂಧಿ ಅರ್ಜಿ ಏಪ್ರಿಲ್ 15 ರಂದು ವಿಚಾರಣೆ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on:Apr 01, 2023 | 8:16 PM

Share

ಥಾಣೆ: ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ನ್ಯಾಯಾಲಯವು ಶನಿವಾರ ಮಾನನಷ್ಟ ಮೊಕದ್ದಮೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲ್ಲಿಸಿದ ಅರ್ಜಿಯ ವಾದವನ್ನು ಆಲಿಸಿ ಆದೇಶವನ್ನು ಹೊರಡಿಸುವ ಸಾಧ್ಯತೆಯಿರುವಾಗ ಏಪ್ರಿಲ್ 15 ಕ್ಕೆ ಪ್ರಕರಣವನ್ನು ಮುಂದೂಡಿದೆ. ದೂರುದಾರ ಮತ್ತು ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು 2014 ರಲ್ಲಿ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಗಾಂಧಿಯವರ ಭಾಷಣವನ್ನು ವೀಕ್ಷಿಸಿದ ನಂತರ ಖಾಸಗಿ ದೂರು ದಾಖಲಿಸಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದು ರಾಹುಲ್ ಗಾಂಧಿ ಹೇಳಿರುವುದಾಗಿ ಕುಂಟೆ ದೂರು ನೀಡಿದ್ದರು.ಗಾಂಧಿ ಅವರು ಜೂನ್ 2018 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದು ತಾನು ನಿರಪರಾಧಿ ಎಂದು ಹೇಳಿದ್ದರು.

ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಲು, ಪಕ್ಷದ ಕೆಲಸಕ್ಕೆ ಹಾಜರಾಗಲು ಮತ್ತು ಸಾಕಷ್ಟು ಪ್ರಯಾಣಿಸಬೇಕಾಗಿ ಬರುವುದರಿಂದ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ಕಾಂಗ್ರೆಸ್ ನಾಯಕನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕುಂಟೆ , ರಾಹುಲ್ ಅರ್ಜಿಯನ್ನು ವಿರೋಧಿಸಿದ್ದಾರೆ.

ಶನಿವಾರದಂದು ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಲ್ ಸಿ ವಾಡಿಕರ್ ಅವರ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ಅವರು ಕಾಂಗ್ರೆಸ್ ನಾಯಕರ ಅನರ್ಹತೆಗೆ ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ. ಅದಲ್ಲದೆ, ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಲು ರಾಹುಲ್ ಸಿದ್ಧರಿದ್ದಾರೆ ಎಂದು ಅವರು ಹೇಳಿದರು.

ದೂರುದಾರರು ಎತ್ತಿರುವ ಸಂಗತಿ ಈ ಪ್ರಕರಣದಲ್ಲಿ ಶಾಶ್ವತ ವಿನಾಯಿತಿ ಕೋರಿ ಆರೋಪಿಗಳಿಗೆ ಹಾನಿಯನ್ನುಂಟುಮಾಡುವುದಿಲ್ಲ ಅಥವಾ ಕಡೆಗಣಿಸುವಂತಿಲ್ಲ ಎಂದು ಅವರು ವಾದಿಸಿದರು. ಕುಂಟೆ ಅವರ ಪರ ವಕೀಲ ಪ್ರಭೋದ್ ಜಯವಂತ್ ಅವರು ನ್ಯಾಯಾಲಯವನ್ನು ತಮ್ಮ ಮಾಹಿತಿ ಗಮನಿಸಿ ಆದೇಶವನ್ನು ಅಂಗೀಕರಿಸುವಾಗ ಅದರಂತೆ ನಿರ್ಧರಿಸುವಂತೆ ಒತ್ತಾಯಿಸಿದರು.

ಇದನ್ನೂ ಓದಿ: Navjot Singh Sidhu: 10 ತಿಂಗಳ ಜೈಲು ಶಿಕ್ಷೆ ನಂತರ ಬಿಡುಗಡೆಯಾದ ನವಜೋತ್ ಸಿಂಗ್ ಸಿಧು; ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ

ಎಲ್ಲಾ ಕಳ್ಳರ ಉಪನಾಮ ಮೋದಿ ಎಂದೇ ಯಾಕಿದೆ? ಎಂಬ ಟೀಕೆಗಳ ವಿರುದ್ಧ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಸೂರತ್‌ನ ನ್ಯಾಯಾಲಯವು ಮಾರ್ಚ್ 23 ರಂದು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತು. ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು 30 ದಿನಗಳವರೆಗೆ ಶಿಕ್ಷೆಯನ್ನು ಅಮಾನತುಗೊಳಿಸಿತು. ಮರುದಿನ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:15 pm, Sat, 1 April 23

ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್
ಕೊನೆಯ ಓವರ್​ನಲ್ಲಿ 7 ರನ್​ಗಳ​ ಗುರಿ ನಿಯಂತ್ರಿಸಿ ಪಂದ್ಯ ಗೆಲ್ಲಿಸಿದ ಆಶಿಶ್