ಗಾಂಧಿ ಕುಟುಂಬದಲ್ಲಿ ಶೀಘ್ರ ಮೊಳಗಲಿದೆ ಓಲಗದ ಸದ್ದು, ಮದುವೆ ಯಾರದ್ದು?

ಪ್ರಿಯಾಂಕಾ ಗಾಂಧಿ ಪುತ್ರ ರೆಹಾನ್ ವಾದ್ರಾ ತಮ್ಮ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಗಾಂಧಿ ಕುಟುಂಬದಲ್ಲಿ ಶೀಘ್ರವೇ ಮದುವೆಯ ಸದ್ದು ಮೊಳಗಲಿದೆ. 2026ರಲ್ಲಿ ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ನಡೆಯುವ ನಿರೀಕ್ಷೆಯಿದೆ. ಇಬ್ಬರೂ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ. ರಾಜಕೀಯದಿಂದ ದೂರವಿರುವ ರೆಹಾನ್ ವೈಯಕ್ತಿಕ ಜೀವನದ ಈ ಸಂತಸದ ಸುದ್ದಿ ಹೊರಬಿದ್ದಿದೆ.

ಗಾಂಧಿ ಕುಟುಂಬದಲ್ಲಿ ಶೀಘ್ರ ಮೊಳಗಲಿದೆ ಓಲಗದ ಸದ್ದು, ಮದುವೆ ಯಾರದ್ದು?
ಮದುವೆ

Updated on: Dec 30, 2025 | 1:13 PM

ನವದೆಹಲಿ, ಡಿಸೆಂಬರ್ 30: ಶೀಘ್ರವೇ ಗಾಂಧಿ ಕುಟುಂಬದಲ್ಲಿ ಮೊಳಗಲಿದೆ ಓಲಗದ ಸದ್ದು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi Vadra) ಮತ್ತು ರಾಬರ್ಟ್​ ವಾದ್ರಾ ಪುತ್ರ ರೆಹಾನ್ ವಾದ್ರಾ ಶೀಘ್ರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರೆಹಾನ್ ತನ್ನ ಗೆಳತಿ ಅವಿವಾ ಬೇಗ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ರೆಹಾನ್ ವಾದ್ರಾ ಮತ್ತು ಅವಿವಾ ಕಳೆದ 7 ವರ್ಷಗಳಿಂದ ಪರಿಚಯವಿತ್ತು.

ರೆಹಾನ್ ಇತ್ತೀಚೆಗೆ ಅವಿವಾಗೆ ಪ್ರಪೋಸ್ ಮಾಡಿದ್ದಾರೆ. ಎರಡೂ ಕುಟುಂಬಗಳು ಅವರ ಮದುವೆಗೆ ಒಪ್ಪಿಗೆ ನೀಡಿವೆ. ಅವಿವಾ ರೆಹಾನ್ ಅವರ ವಿವಾಹ ಪ್ರಸ್ತಾಪವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಹೊಸ ವರ್ಷದ ಮೊದಲು ಈ ಸಂತೋಷದ ಸಂಬಂಧದ ಔಪಚಾರಿಕ ಆರಂಭವನ್ನು ನಿರೀಕ್ಷಿಸಲಾಗಿದೆ.

ನಿಶ್ಚಿತಾರ್ಥ ಸಮಾರಂಭವು ರಾಜಸ್ಥಾನದಲ್ಲಿ ನಡೆಯಲಿದ್ದು, ಇದು ಎರಡು ಮೂರು ದಿನಗಳ ಖಾಸಗಿ ಕಾರ್ಯಕ್ರಮವಾಗಿದೆ. ನಿಶ್ಚಿತಾರ್ಥದ ದಿನಾಂಕಗಳನ್ನು ಇನ್ನೂ ಬಹಿರಂಗಗೊಂಡಿಲ್ಲ. ನಿಶ್ಚಿತಾರ್ಥವು 2026 ರ ಜನವರಿ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ. ರೆಹಾನ್ ಮತ್ತು ಅವಿವಾ ಅವರ ನಿಶ್ಚಿತಾರ್ಥದ ಬಗ್ಗೆ ಯಾವುದೇ ಕುಟುಂಬ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮದುವೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಅವಿವಾ ಬೇಗ್ ಅವರ ಕುಟುಂಬ ದೆಹಲಿಯವರು.

ಮತ್ತಷ್ಟು ಓದಿ: ನೀವು ಚುನಾವಣೆಗಾಗಿ ಮಾತ್ರ, ನಾವು ದೇಶಕ್ಕಾಗಿ: ಬಿಜೆಪಿ ವಿರುದ್ಧ ಗುಡುಗಿದ ಪ್ರಿಯಾಂಕಾ ಗಾಂಧಿ

ಕಲೆ ಮತ್ತು ಛಾಯಾಗ್ರಹಣದಲ್ಲಿ ಉತ್ಸಾಹಿಯಾಗಿರುವ ರೆಹಾನ್, ರಾಜಕೀಯದಿಂದ ದೂರ ಇದ್ದಾರೆ,ದೆಹಲಿಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ದೃಶ್ಯ ಕಲಾವಿದ ರೆಹಾನ್ ವಾದ್ರಾ ಡೆಹ್ರಾಡೂನ್ ಮತ್ತು ಲಂಡನ್‌ನಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರೆಸಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ ರೆಹಾನ್ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅವಿವಾ ಬೇಗ್ ಅವರ ಕುಟುಂಬವನ್ನು ವಾದ್ರಾ ಕುಟುಂಬಕ್ಕೆ ಹತ್ತಿರವೆಂದು ಪರಿಗಣಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ದೆಹಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವಿವಾ ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ರೆಹಾನ್ ಅವರಂತೆಯೇ, ಅವಿವಾ ಬೇಗ್ ಕೂಡ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಛಾಯಾಗ್ರಾಹಕರಾಗಿದ್ದಾರೆ.

ಮಾಜಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿ ಅವಿವಾ ಬೇಗ್ ವೃತ್ತಿಪರ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಕೂಡ.ಯು ಕ್ಯಾನ್ಟ್ ಮಿಸ್ ದಿಸ್ ಮತ್ತು ದಿ ಇಲ್ಯೂಸರಿ ವರ್ಲ್ಡ್ ನಂತಹ ಪ್ರದರ್ಶನಗಳ ಮೂಲಕ ಖ್ಯಾತಿ ಗಳಿಸಿದ ಅವಿವಾ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೋರ್ಟಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೆಹಾನ್ ಅವರಂತೆಯೇ, ಅವಿವಾ ಬೇಗ್ ಕೂಡ ಪ್ರಕೃತಿ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ