ದೆಹಲಿ ಸಿಎಂ ಬಂಗಲೆ ನವೀಕರಣಕ್ಕೆ ₹45 ಕೋಟಿ ಖರ್ಚು; ಶಾಯರಿ ಮೂಲಕ ಕೇಜ್ರಿವಾಲ್​​ನ್ನು ಟೀಕಿಸಿದ ಅಶ್ವಿನಿ ವೈಷ್ಣವ್

|

Updated on: Apr 26, 2023 | 3:45 PM

Ashwini Vaishnaw: ಮುಖದ ಮೇಲೆ ಧೂಳು ಇತ್ತು, ಅವರು ಕನ್ನಡಿ ಸ್ವಚ್ಛಗೊಳಿಸುವಂತೆ ನಟಿಸುತ್ತಿದ್ದರು ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಕೇಂದ್ರ ಸಚಿವರು ತಮ್ಮ ಟ್ವೀಟ್​​ನಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಇದ್ದರೂ ಆಪರೇಷನ್ ಶೀಶ್ ಮಹಲ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ.

ದೆಹಲಿ ಸಿಎಂ ಬಂಗಲೆ ನವೀಕರಣಕ್ಕೆ ₹45 ಕೋಟಿ ಖರ್ಚು; ಶಾಯರಿ ಮೂಲಕ ಕೇಜ್ರಿವಾಲ್​​ನ್ನು ಟೀಕಿಸಿದ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us on

ಸಿವಿಲ್ ಲೈನ್ಸ್ ಏರಿಯಾದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಅಧಿಕೃತ ನಿವಾಸವನ್ನು ನವೀಕರಿಸಲು ಸುಮಾರು ₹45 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಿಜೆಪಿ (BJP) ಆರೋಪಿಸಿದೆ. ಟೈಮ್ಸ್ ನೌ ನವಭಾರತದ ಆಪರೇಷನ್ ಶೀಶ್ ಮಹಲ್ (Operation Sheesh Mahal) ಮೂಲಕ ಈ ವಿಷಯ ಬಹಿರಂಗ ಪಡಿಸಿದೆ. ಇದರ ಪ್ರಕಾರ ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ನವೀಕರಿಸಲು ₹44.78 ಕೋಟಿ ಖರ್ಚು ಮಾಡಲಾಗಿದೆ. ಅವರ ಮನೆಯಲ್ಲಿ ಬಳಸಿದ ಪರದೆಗಳಿಗೆ ₹ 5-8 ಲಕ್ಷ ಖರ್ಚು ಮಾಡಲಾಗಿದೆ. ದಾಖಲೆಗಳ ಪ್ರಕಾರ, ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮುಖ್ಯಮಂತ್ರಿಯವರ ಮನೆಗಳಿಗೆ ₹97 ಲಕ್ಷ ರೂಪಾಯಿ ಮೌಲ್ಯದ 23 ಪರದೆಗಳನ್ನು ಅನುಮೋದಿಸಲಾಗಿದೆ ಎಂದು ಹೇಳಲಾಗಿದೆ.

ಈ ವಿಚಾರದಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕೇಜ್ರಿವಾಲ್ ಅವರು ಸರ್ಕಾರದ ಹಣದಿಂದ ₹45 ಕೋಟಿ ರೂಪಾಯಿ ಖರ್ಚು ಮಾಡಿ ತಮ್ಮ ಬಂಗಲೆಯನ್ನು ನವೀಕರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  ಶಾಯರಿ ಟ್ವೀಟ್ ಮೂಲಕ ಕೇಜ್ರಿವಾಲ್​​ನ್ನು ಕುಟುಕಿದ್ದಾರೆ.


ಮುಖದ ಮೇಲೆ ಧೂಳು ಇತ್ತು, ಅವರು ಕನ್ನಡಿ ಸ್ವಚ್ಛಗೊಳಿಸುವಂತೆ ನಟಿಸುತ್ತಿದ್ದರು ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಕೇಂದ್ರ ಸಚಿವರು ತಮ್ಮ ಟ್ವೀಟ್​​ನಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಇದ್ದರೂ ಆಪರೇಷನ್ ಶೀಶ್ ಮಹಲ್ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ.

ಸರ್ಕಾರಿ ಬಂಗಲೆಯ ನವೀಕರಣಕ್ಕಾಗಿ ಕೇಜ್ರಿವಾಲ್ ಸುಮಾರು ₹45ಕೋಟಿಯಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ, ಇದು ಕೇಜ್ರಿವಾಲ್ ಅವರ ನಿಜವಾದ ಮುಖ. ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಇದನ್ನೂ ಓದಿ:ಚಂಡೀಗಢದಲ್ಲಿ ಪ್ರಕಾಶ್ ಸಿಂಗ್ ಬಾದಲ್​​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಐದು ಬಾರಿ ಬಿಡುಗಡೆಯಾಗಿದ್ದು ಸುಮಾರು 45 ಕೋಟಿ ರೂ

ಬಿಜೆಪಿ ನಾಯಕ ಮತ್ತು ವಕ್ತಾರ ಸಂಬಿತ್ ಪಾತ್ರಾ,ದೇಶ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ, ಕೇಜ್ರಿವಾಲ್ ಅವರು ತಮ್ಮ ಬಂಗಲೆಗೆ ಅರಮನೆಯ ರೂಪವನ್ನು ನೀಡುವಲ್ಲಿ ತೊಡಗಿದ್ದರು ಎಂದು ಬುಧವಾರ ಹೇಳಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ಒಟ್ಟು ಐದು ಬಾರಿ ಹಣ ಮಂಜೂರು ಮಾಡಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.

2020 ರ ಸೆಪ್ಟೆಂಬರ್ 1 ರಂದು ಕೇಜ್ರಿವಾಲ್ ಮೊದಲ ಬಾರಿಗೆ 7.91 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಇದರ ನಂತರ, 2021 ರಲ್ಲಿ, ಒಟ್ಟು ಮೂರು ಬಾರಿ 15 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇದರ ನಂತರ, ಜೂನ್ 29, 2022 ರಂದು ಮತ್ತೊಮ್ಮೆ  9.34 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಕೇಜ್ರಿವಾಲ್‌ಗೆ ಬಣ್ಣ ಬಳಿದ ಮನೆ ಇಷ್ಟವಿಲ್ಲ

ಅರವಿಂದ ಕೇಜ್ರಿವಾಲ್ ಅವರು ಬಣ್ಣ ಬಳಿದ ಮನೆಗಳನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಅವರು ತಮ್ಮ ಮನೆಯಲ್ಲಿ ಪ್ರೀ ಫ್ಯಾಬ್ರಿಕೇಟೆಡ್ ಮರದ ಗೋಡೆಯನ್ನು ಸ್ಥಾಪಿಸಿದ್ದಾರೆ. ಇದರ ವೆಚ್ಚ ಸುಮಾರು 4.37 ಕೋಟಿ ರೂ. ಅದೇ ಸಮಯದಲ್ಲಿ ವಿಯೆಟ್ನಾಂನಿಂದ ಮನೆಗೆ 1.5 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಮಾರ್ಬಲ್ ಅಳವಡಿಸಲಾಗಿದೆ ಎಂದು ಪಾತ್ರಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ